ETV Bharat / sitara

ಶ್ರೇಯಸ್ ಮಂಜು ನಟನೆಯ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನಂದ ಕಿಶೋರ್ - ನಿರ್ದೇಶಕ ನಂದ ಕಿಶೋರ್

'ಪಡ್ಡೆ ಹುಲಿ' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದ ಶ್ರೇಯಸ್ ನಟನೆಯ ಚಿತ್ರವೊಂದನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆಂದು ತಿಳಿದುಬಂದಿದೆ.

Actor Shreyas Manju
ನಟ ಶ್ರೇಯಸ್ ಮಂಜು
author img

By

Published : Apr 4, 2021, 11:52 AM IST

ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ನಟ ಶ್ರೇಯಸ್ ಮಂಜುಗೆ ಇಂದು ಹುಟ್ಟುಹಬ್ಬದ ಸಂಭ್ರಮ. 'ಪಡ್ಡೆ ಹುಲಿ' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದ ಶ್ರೇಯಸ್ ನಟನೆಯ ಚಿತ್ರವೊಂದನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆಂದು ತಿಳಿದುಬಂದಿದೆ.

ವಿ.ಕೆ.ಪ್ರಕಾಶ್ ನಿರ್ದೇಶನದ 'ವಿಷ್ಣುಪ್ರಿಯ' ಸಿನಿಮಾ ಶ್ರೇಯಸ್ ಅಭಿನಯದ ಎರಡನೇ ಚಿತ್ರವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಈ ಮಧ್ಯೆ ಶ್ರೇಯಸ್ ಅಭಿನಯದ ಹೊಸ ಚಿತ್ರವೊಂದು ಘೋಷಣೆಯಾಗಿದೆ. ಪೊಗರು ಚಿತ್ರದ ಬಳಿಕ ಸಿಕ್ಕಾಪಟ್ಟೆ ಡಿಮ್ಯಾಂಡ್‍ನಲ್ಲಿರುವ ನಂದ ಕಿಶೋರ್ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.

ಈ ಹಿಂದೆ ಟಗರು ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದ ಗುಜ್ಜಾಲ್ ಪುರುಷೋತ್ತಮ್ ಈ ಚಿತ್ರವನ್ನು ಸ್ವತಂತ್ರವಾಗಿ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಮಾಡಿದರೆ, ಧರ್ಮವಿಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಶಾಂತ್ ರಾಜಪ್ಪ ಸಂಭಾಷಣೆಗಳನ್ನು ಬರೆಯಲಿದ್ದಾರೆ.

ಈ ಸಿನಿಮಾ ಆರಂಭವಾಗುವುದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಯಾಕೆಂದರೆ, ಧ್ರುವ ಸರ್ಜಾ ಅಭಿನಯದ ದುಬಾರಿ ಚಿತ್ರ ಮುಗಿಯಬೇಕು. ಆ ನಂತರ ಶಿವರಾಜ್​ಕುಮಾರ್ ಅಭಿನಯದಲ್ಲಿ ನಂದ ಕಿಶೋರ್ ಒಂದು ಚಿತ್ರವನ್ನು ನಿರ್ದೇಶಿಸುತ್ತಾರೆ. ಆ ನಂತರ ಶ್ರೇಯಸ್ ಮಂಜು ಚಿತ್ರ ಪ್ರಾರಂಭವಾಗಲಿದೆ. ಶ್ರೇಯಸ್ ಮಂಜು ಸಹ ಮಲಯಾಳಂನಲ್ಲಿ ಒಂದೆರೆಡು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಆ ಚಿತ್ರಗಳನ್ನು ಮುಗಿಸಿ ಬರಲಿದ್ದಾರೆ. ಚಿತ್ರದ ಹೆಸರೇನು, ಯಾರೆಲ್ಲಾ ನಟಿಸುತ್ತಾರೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.

ಇದನ್ನೂ ಓದಿ: ಸಿಎಂ ಮನವೊಲಿಸಿದ ಅಪ್ಪು: ಏಪ್ರಿಲ್​ನಲ್ಲಿ ಈ ಸಿನಿಮಾಗಳು ಬಿಡುಗಡೆಯಾಗೋದು ಡೌಟು​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.