ಹೈದರಾಬಾದ್: ತೆಲುಗು ನಟ ನಾಗಬಾಬು ಪುತ್ರಿ ನಿಹಾರಿಕಾ ಮದುವೆ ಇಂದು ಚೈತನ್ಯ ಜೊನ್ನಗಡ್ಡ ಜೊತೆ ರಾಜಸ್ಥಾನದ ಉದಯ್ ಮಹಲ್ ಪ್ಯಾಲೇಸ್ನಲ್ಲಿ ನಡೆಯುತ್ತಿದೆ. ಈ ಮದುವೆ ಸಮಾರಂಭಕ್ಕೆ ಕೆಲವೇ ಮಂದಿ ಹಾಜರಾಗುತ್ತಿದ್ದು ಎಲ್ಲರಲ್ಲೂ ಸಂಭ್ರಮ ಮನೆ ಮಾಡಿದೆ. ನಾಗಬಾಬು ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದು ಮನೆಯಲ್ಲಿ ನಡೆದ ಮದುವೆ ಶಾಸ್ತ್ರದ ವಿಡಿಯೋವನ್ನು ತಮ್ಮ ಅಫಿಷಿಯಲ್ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="">
ಡಿಸೆಂಬರ್ 7 ರಂದು ಹೈದರಾಬಾದ್ ಮನೆಯಲ್ಲಿ ನಡೆದ ಚಪ್ಪರ ಶಾಸ್ತ್ರ, ನೀರು ಹಾಕುವ ಶಾಸ್ತ್ರದ ವಿಡಿಯೋವನ್ನು ನಾಗಬಾಬು ಹಂಚಿಕೊಂಡಿದ್ದಾರೆ. ವಿಡಿಯೋ ಆರಂಭದಲ್ಲಿ ಸುಂದರವಾಗಿ ಅಲಂಕೃತಗೊಂಡ ಮನೆಯನ್ನು ತೋರಿಸಲಾಗಿದೆ. ವರುಣ್ ತೇಜ್, ಸಾಯಿಧರ್ಮ ತೇಜ್ ಹಾಗೂ ಕುಟುಂಬ, ಚಿರಂಜೀವಿ , ಪತ್ನಿ ಸುರೇಖ, ಪುತ್ರಿ ಶ್ರೀಜಾ, ಪತಿ ಕಲ್ಯಾಣ್, ಅಲ್ಲು ಅರವಿಂದ್ ಹಾಗೂ ಇತರರು ನಾಗಬಾಬು ಮನೆಗೆ ಆಗಮಿಸಿ ಮದುಮಗಳಿಗೆ ಅಕ್ಷತೆ ಹಾಕಿ ಶುಭ ಹಾರೈಸಿದ್ದಾರೆ. ನಾಗಬಾಬು ತಾಯಿ ಅಂಜನಾದೇವಿ ಆಗಮಿಸಿ ಮೊಮ್ಮಗಳಿಗೆ ಆಶೀರ್ವದಿಸಿದ್ದಾರೆ. ಈ ವೇಳೆ ವರನ ಕಡೆಯವರೂ ಕೂಡಾ ಹಾಜರಿದ್ದು ಎಲ್ಲರೂ ಕೋಲಾಟ ಹಾಡಿ ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ನಾಗಬಾಬು ಕೂಡಾ ಬಂದ ಅತಿಥಿಗಳಿಗೆ ಊಟ ಬಡಿಸಿದ್ದಾರೆ.
ಇದನ್ನೂ ಓದಿ: 32 ವರ್ಷಗಳ ಹಿಂದಿನ ತಾಯಿ ನಿಶ್ಚಿತಾರ್ಥದ ಸೀರೆಯನ್ನು ತನ್ನ ಮದುವೆ ಶಾಸ್ತ್ರಕ್ಕೆ ಉಟ್ಟ ನಿಹಾರಿಕಾ
ಸೋಮವಾರ ಸಂಜೆಯೇ ನಾಗಬಾಬು ಕುಟುಂಬ ಉದಯ್ಪುರ್ ಸೇರಿದ್ದು ನಿನ್ನೆ ಸಂಗೀತ್ ಕಾರ್ಯಕ್ರಮ ನೆರವೇರಿದೆ. ಅಲ್ಲು ಅರ್ಜುನ್, ಪತ್ನಿ ಸ್ನೇಹ, ರಾಮ್ ಚರಣ್ ತೇಜ, ಪತ್ನಿ ಉಪಾಸನಾ ಸೇರಿದಂತೆ ಬಹಳಷ್ಟು ಸೆಲಬ್ರಿಟಿಗಳು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ನಿನ್ನೆ ರಾತ್ರಿ ಪವನ್ ಕಲ್ಯಾಣ್ ಕೂಡಾ ಉದಯ್ ಮಹಲ್ ಪ್ಯಾಲೇಸ್ಗೆ ಬಂದು ಸೇರಿದ್ದಾರೆ. ಇಂದು ರಾತ್ರಿ 7.15 ನಿಮಿಷಕ್ಕೆ ನಿಹಾರಿಕಾ-ಚೈತನ್ಯ ಜೊನ್ನಗಡ್ಡ ಮದುವೆ ಜರುಗಲಿದೆ.