ETV Bharat / sitara

ಸಮಂತಾ ಜೊತೆಗಿನ ಡಿವೋರ್ಸ್​: ನಟ ನಾಗಚೈತನ್ಯ ಹೇಳಿದ್ದೇನು? - ಡಿವೋರ್ಸ್​ ಬಗ್ಗೆ ಮಾತನಾಡಿದ ನಾಗಚೈತನ್ಯ

ನಟಿ ಸಮಂತಾ ಜೊತೆಗಿನ ಡಿವೋರ್ಸ್​ ವಿಚಾರವಾಗಿ ಇದೇ ಮೊದಲ ಬಾರಿಗೆ ನಟ ನಾಗಚೈತನ್ಯ ಮೌನ ಮುರಿದರು.

Naga Chaitanya Separation
Naga Chaitanya Separation
author img

By

Published : Jan 13, 2022, 5:37 PM IST

ನವದೆಹಲಿ: ಟಾಲಿವುಡ್​​ ದಂಪತಿಗಳಾಗಿದ್ದ ಸಮಂತಾ-ನಾಗಚೈತನ್ಯ ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ ಡಿವೋರ್ಸ್​ ಪಡೆದುಕೊಂಡಿದ್ದು, ಈ ವಿಚಾರವಾಗಿ ಟ್ವಿಟರ್​​ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಸಲ ನಟ ನಾಗಚೈತನ್ಯ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

2017ರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ಈ ಜೋಡಿ ನಾಲ್ಕು ವರ್ಷಗಳ ಬಳಿಕ ಬೇರೆ ಬೇರೆಯಾಗುವುದಾಗಿ ಘೋಷಣೆ ಮಾಡಿದ್ದರು. ಆದರೆ, ವಿಚ್ಛೇದನಕ್ಕೆ ಸಂಬಂಧಿಸಿದಂತೆ ಇಬ್ಬರೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಸಿನಿಮಾ ಶೂಟಿಂಗ್​ವೊಂದರಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮಾಧ್ಯಮ ಮಿತ್ರರ ಮುಂದೆ ಈ ವಿಚಾರವಾಗಿ ನಾಗಚೈತನ್ಯ ಮಾತನಾಡಿದ್ದು, ಅದರ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

"ನಾವಿಬ್ಬರು ಬೇರೆ ಬೇರೆಯಾಗಿರುವುದು ಒಂದು ಒಳ್ಳೆಯ ನಿರ್ಧಾರ. ವೈಯಕ್ತಿಕ ಸಂತೋಷಕ್ಕಾಗಿ ಪರಸ್ಪರ ಜೊತೆ ಸೇರಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅವಳು ಸಂತೋಷವಾಗಿದ್ದರೆ ನನಗೂ ಅದೇ ಸಂತೋಷ. ಅಂತಹ ಪರಿಸ್ಥಿತಿಯಲ್ಲಿ ವಿಚ್ಛೇದನ ಅತ್ಯುತ್ತಮ ನಿರ್ಧಾರವಾಗಿದೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಸತ್ತೇ ಹೋಗುತ್ತೇನೆ ಎಂದುಕೊಂಡಿದ್ದೆ; ವಿಚ್ಛೇದನದ ಬಳಿಕ ನಟಿ ಸಮಂತಾ ಮೊದಲ ಮಾತು

ಮನಂ, ಏ ಮಾಯ ಚೇಸಾವೆ, ಆಟೋನಗರ ಸೂರ್ಯ ಸೇರಿದಂತೆ ಅನೇಕ ಚಿತ್ರಗಳಲ್ಲಿ ಸಮಂತಾ-ನಾಗಚೈತನ್ಯ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಈ ಜೋಡಿ 2017 ರಲ್ಲಿ ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತನ್ಯ ಜೊತೆ ಸಮಂತಾ ಹಿಂದೂ, ಕ್ರಿಶ್ಚಿಯನ್​ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದರು. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿಚ್ಛೇದನ ಪಡೆದುಕೊಂಡಿರುವ ಈ ಜೋಡಿ ಸದ್ಯ ಸಿನಿಮಾಗಳಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ.

Naga Chaitanya breaks silence on Divorce
ಟಾಲಿವುಡ್ ನಟಿ ಸಮಂತಾ ರುತ್ ಪ್ರಭು

'ಬಂಗರ್ದಾಜು' ಸಿನಿಮಾ ಪ್ರಮೋಷನ್​​ನಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ನಟ ನಾಗಚೈತನ್ಯ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಈ ವೇಳೆ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.

ಇದೇ ವಿಚಾರವಾಗಿ ಈಗಾಗಲೇ ಮಾತನಾಡಿರುವ ನಟಿ ಸಮಂತಾ, ನಾಗಚೈತನ್ಯರಿಂದ ಬೇರೆಯಾದ ಬಳಿಕ ನಾನು ಕುಗ್ಗಿ ಹೋಗುತ್ತೇನೆ ಎಂದು ಭಾವಿಸಿದ್ದೆ. ನನ್ನ ಮನಸ್ಥಿತಿ ಇಷ್ಟು ಬಲವಾಗಿದೆ ಎಂದು ನಾನೂ ಸಹ ಊಹಿಸಿಕೊಂಡಿರಲಿಲ್ಲ. ಸತ್ತೇ ಹೋಗುತ್ತೇನೆ ಎಂದುಕೊಂಡಿದ್ದೆ. ಆದರೆ, ನಾನು ಎಷ್ಟು ಬಲಶಾಲಿಯಾಗಿದ್ದೇನೆ ಅನ್ನೋದು ನನಗೆ ಈಗ ಗೊತ್ತಾಗಿದೆ ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.