ಮುಂಬೈ(ಮಹಾರಾಷ್ಟ್ರ): ಟೀಂ ಇಂಡಿಯಾದ ಸರ್ವಶ್ರೇಷ್ಠ ಬ್ಯಾಟ್ಸ್ಮನ್ ಮತ್ತು ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ನಡುವೆ, ಇನ್ಸೈಡ್ ಎಡ್ಜ್ ಸೀಸನ್ 3ರ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟಿ ರಿಚಾ ಚಡ್ಡಾ ಕುರಿತು ವಿಭಿನ್ನವಾದ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ, ರಾಹುಲ್ ದ್ರಾವಿಡ್ ನನ್ನ ಫಸ್ಟ್ ಲವ್ ಎಂದು ಹೇಳಿಕೊಂಡಿದ್ದಾರೆ. ನಾನು ಹೆಚ್ಚು ಕ್ರಿಕೆಟ್ ಅಭಿಮಾನಿಯಲ್ಲ. ಆದರೆ ಕೆಲವೊಂದು ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರನ್ನು ನೋಡಲು ಮಾತ್ರ ಪಂದ್ಯಗಳನ್ನು ನೋಡುತ್ತಿದೆ ಎಂದು ತಿಳಿಸಿದ್ದಾರೆ.
ರಾಹುಲ್ ದ್ರಾವಿಡ್ ಅವರು ನಿವೃತ್ತಿಯಾದಾಗಿನಿಂದಲೂ ನಾನು ಕ್ರಿಕೆಟ್ ನೋಡುವುದನ್ನು ನಿಲ್ಲಿಸಿದ್ದೇನೆ ಎಂದಿರುವ ರಿಚಾ ಚಡ್ಡಾ, ನಾನು ಬಾಲ್ಯದ ದಿನಗಳಲ್ಲಿ ದೊಡ್ಡ ಅಭಿಮಾನಿಯಾಗಿರಲಿಲ್ಲ ಎಂದಿದ್ದಾರೆ.
ನಾನು ರಾಹುಲ್ ದ್ರಾವಿಡ್ ಅವರ ಆಟವನ್ನು ನೋಡಲು ಇಷ್ಟಪಡುತ್ತಿದ್ದೆ. ಆದರೆ ಅವರು ತಂಡವನ್ನು ತೊರೆದಾಗ ಕ್ರಿಕೆಟ್ ನೋಡುವುದನ್ನು ನಿಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.