ಕಿಚ್ಚ ಸುದೀಪ್ ಅಭಿನಯದ ಮುಸ್ಸಂಜೆ ಮಾತು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಹಾಡಿನಿಂದಲೇ ಸೆನ್ಶೆಶನ್ ಕ್ರಿಯೇಟ್ ಮಾಡಿದ್ದ ಆ ಸಿನಿಮಾ ಕಿಚ್ಚನಿಗೆ ಒಳ್ಳೆಯ ಬ್ರೇಕ್ ನೀಡಿತ್ತು. ಅಷ್ಟೇ ಅಲ್ಲದೇ ಚಂದನವನಕ್ಕೆ ಶ್ರೀಧರ್ ವಿ ಸಂಭ್ರಮ್ ಎಂಬ ಪ್ರತಿಭಾವಂತ ಸಂಗೀತ ನಿರ್ದೇಶಕನನ್ನು ಪರಿಚಯ ಮಾಡಿಸಿತ್ತು. ಆ ಸಿನಿಮಾದ ಹಾಡುಗಳು ಶ್ರೀಧರ್ಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದವು. ಇದರ ಜೊತೆಗೆ ಒಂದಷ್ಟು ಆಫರ್ಗಳು ಶ್ರೀಧರ್ರನ್ನು ಅರಸಿ ಬಂದಿದ್ದವು.
ಮುಸ್ಸಂಜೆ ಮಾತಿನ ಮೂಲಕ ಸಿನಿ ಜರ್ನಿ ಆರಂಭಿಸಿದ್ದ ಶ್ರೀಧರ್, ಇದೀಗ ಮುಗಿಲು ಪೇಟೆ ತಲುಪಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ಮುಗಿಲುಪೇಟೆ ಚಿತ್ರಕ್ಕೆ ಶ್ರೀಧರ್ ಸಂಗೀತ ನೀಡುತ್ತಿದ್ದಾರೆ. ಈ ಹಿನ್ನೆಲೆ ಅವರು ಕೆಲ ಖುಷಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ರವಿಚಂದ್ರನ್ ಅವರ ಮಗನ ಸಿನಿಮಾಗೆ ಸಂಗೀತ ಸಂಯೋಜನೆ ಮಾಡ್ತಿರೋದು ನನಗೆ ಖುಷಿ ತಂದಿದೆ. ನಾನು ರವಿಚಂದ್ರನ್ ಅವರ ಅಪ್ಪಟ ಅಭಿಮಾನಿ ಎಂದು ಶ್ರೀಧರ್ ಹೇಳಿದರು. ನಾನು ರಣಧೀರ ಸಿನಿಮಾದಿಂದ ರವಿ ಸರ್ ಅವರನ್ನು ಫಾಲೋ ಮಾಡ್ತಾ ಬಂದ್ದಿದೀನಿ. ಅವರ ಮತ್ತು ಹಂಸಲೇಖರವರ ಹಾಡುಗಳು ಅಂದ್ರೆ ನನಗೆ ಬಹಳ ಇಷ್ಟ ಎಂದರು.
ಈಶ್ವರಿ ಸಂಸ್ಥೆ ಒಂದು ದೊಡ್ಡ ಸಂಸ್ಥೆ. ಅದು ಹಲವಾರು ಜನರಿಗೆ ಊಟ ಕೊಟ್ಟಿದ್ದು, ಕಲಾವಿದರನ್ನು ಬೆಳೆಸಿ ಎಷ್ಟೋ ಹೊಸ ನಾಯಕರನ್ನ ಪರಿಚಯಿಸಿದೆ ಎಂದರು. ಇಂಥ ದೊಡ್ಡ ಸಂಸ್ಥೆಯ ಮನೆಮಗನ ಜೊತೆ ಸಿನಿಮಾ ಮಾಡುವುದಕ್ಕೆ ಪುಣ್ಯ ಬೇಕು. ಅಲ್ಲಿ ಕೆಲಸ ಮಾಡಿರುವವರಿಗೆ ಯಾವುದಕ್ಕೂ ಕಮ್ಮಿ ಆಗಿಲ್ಲ. ಈಗ ಅಂತಹ ದೊಡ್ಡ ಸಂಸ್ಥೆಗೆ ಅಳಿಲು ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡ್ರು.