ETV Bharat / sitara

ಕನ್ನಡದಲ್ಲೂ ಬರ್ತಿದೆ 'ಮರ್ಡರ್​-2'; ಶೀಘ್ರದಲ್ಲೇ ರಿಲೀಸ್ ಆಗಲಿದೆ ಮರ್ಡರ್ ಮಿಸ್ಟ್ರಿ ಸಿನಿಮಾ - undefined

ಮಂಡ್ಯ ನಾಗರಾಜ್ ನಿರ್ದೇಶನದ 'ಮರ್ಡರ್-2' ಸಿನಿಮಾ ಇದೇ ತಿಂಗಳ 26 ರಂದು ತೆರೆಗೆ ಬರುತ್ತಿದೆ. ಒಂದು ಕೊಲೆಯ ಸುತ್ತ ನಡೆಯುವ 'ಮರ್ಡರ್-2' ಚಿತ್ರ ಸಸ್ಪೆನ್ಸ್ ಹಾಗು ಥ್ರಿಲ್ಲರ್ ಕಥೆ ಹೊಂದಿದೆ.

ಮರ್ಡರ್​-2
author img

By

Published : Jul 23, 2019, 9:16 PM IST

'ಮರ್ಡರ್' ಸಿನಿಮಾ ಹೆಸರು ಕೇಳಿದರೆ ನಮಗೆ ನೆನಪಾಗುವುದು ಇಮ್ರಾನ್ ಹಶ್ಮಿ, ಅಶ್ಮಿತ್ ಪಟೇಲ್ ಹಾಗೂ ಮಲ್ಲಿಕಾ ಶರಾವತ್ ನಟಿಸಿರುವ ಬಾಲಿವುಡ್ ಸಿನಿಮಾ. ಇದೀಗ ಕನ್ನಡದಲ್ಲೂ ಈ ಸಿನಿಮಾ ಬರುತ್ತಿದೆ.

ಮರ್ಡರ್​-2 ಚಿತ್ರತಂಡದ ಸುದ್ದಿಗೋಷ್ಠಿ

ಆದರೆ ಬಾಲಿವುಡ್​​​ನಲ್ಲಿ ಈ ಸಿನಿಮಾ ತೆರೆಗೆ ಬರಲು ಮುನ್ನವೇ ನಿರ್ದೇಶಕ ಮಂಡ್ಯ ನಾಗರಾಜ್​​​​​​ 1994 ರಲ್ಲಿ ಸುರೇಶ್ ಹೆಬ್ಳೀಕರ್ ನಟನೆಯೊಂದಿಗೆ ಮರ್ಡರ್ ಹೆಸರಿನಲ್ಲಿ ಸಸ್ಪೆನ್ಸ್​​​​, ಥ್ರಿಲ್ಲರ್ ಸಿನಿಮಾ ಮಾಡಿದ್ದರು. ಇದೀಗ ಅವರು ಮರ್ಡರ್​​​​​-2 ಸಿನಿಮಾ ಮೂಲಕ ಮತ್ತೆ ವಾಪಸಾಗಿದ್ದಾರೆ. ಒಂದು ವರ್ಷದ ಹಿಂದೆ ಸೆಟ್ಟೇರಿದ ಮರ್ಡರ್-2 ಸಿನಿಮಾ ಇದೀಗ ಶೂಟಿಂಗ್ ಮುಗಿಸಿ ರಿಲೀಸ್​​​ಗೆ ರೆಡಿಯಾಗಿದೆ. ಮರ್ಡರ್ ಮಿಸ್ಟರಿ ಕಥೆ ಆಧರಿಸಿರುವ ಈ ಚಿತ್ರದಲ್ಲಿ, ಆನಂದ್ ಗಣೇಶ್, ಶಾಲಿನಿ ಹಾಗೂ ದೀಪಕ್ ಗಣೇಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

murder 2
ಮರ್ಡರ್​-2

ಯಾವುದೇ ಪ್ರಚಾರ ಇಲ್ಲದೆ ಚಿತ್ರದ ಶೂಟಿಂಗ್​​​​​​​ ಮುಗಿಸಿರುವ ಚಿತ್ರತಂಡ, ತಮ್ಮ ಚಿತ್ರದ ಬಗ್ಗೆ ಮಾಧ್ಯಮಗಳ ಮುಂದೆ ಅನುಭವ ಹಂಚಿಕೊಂಡಿತು. ಒಂದು ಕೊಲೆಯ ಸುತ್ತ ನಡೆಯುವ ಮರ್ಡರ್-2 ಚಿತ್ರ ಸಸ್ಪೆನ್ಸ್ ಹಾಗು ಥ್ರಿಲ್ಲರ್ ಕಥೆಯನ್ನು ಹೊಂದಿದೆ. ತಾಯಿಯ ಋಣ, ಪೊಲೀಸ್ ಬೇಟೆ, ಯಾರಿವಳು, ಹೀಗೆ ಸುಮಾರು 13 ಸಿನಿಮಾಗಳನ್ನು ನಿರ್ಮಿಸಿರುವ ಹಾಗೂ ನಿರ್ದೇಶಿಸಿರುವ ಮಂಡ್ಯ ನಾಗರಾಜ್ ಮರ್ಡರ್-2 ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಹೈದರಾಬಾದ್​​​​​​​​​​​​​​​​​​​​​ ಮೂಲದ ಸ್ಟಂಟ್ ಮಾಸ್ಟರ್​​​​​​​​​ ಚಿತ್ರಕ್ಕೆ ವಿಭಿನ್ನ ಫೈಟ್​​​ ಕೊರಿಯೋಗ್ರಫಿ ಮಾಡಿದ್ದಾರೆ. ಬೆಂಗಳೂರು ಹಾಗೂ ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದ್ದು ಚಿತ್ರ ಇದೇ ತಿಂಗಳ 26 ರಂದು ತೆರೆ ಕಾಣುತ್ತಿದೆ.

Intro:ಬಾಲಿವುಡ್ ನಂತ್ರ ಕನ್ನಡದಲ್ಲಿ ಬರ್ತಾ ಇದೆ ಮರ್ಡರ್ -2 ಸಿನಿಮಾ!!

ಮರ್ಡರ್.. ಈ ಹೆಸ್ರು ಕೇಳಿದ್ರೆ ಬಾಲಿವುಡ್ ನಲ್ಲಿ ಇಮ್ರಾನ್ ಹಶ್ಮಿ ಹಾಗು ಆಶ್ಮೀತಾ ಪಾಟೀಲ್ ಆಕ್ಟ್ ಮಾಡಿದ ಮರ್ಡರ್ ಸಿನಿಮಾ ನೆನಪಾಗುತ್ತೆ..ಆದ್ರೆ ಬಾಲಿವುಡ್ ನಲ್ಲಿ ಮರ್ಡರ್ ಸಿನಿಮಾ ಬರೋದಿಕ್ಕೆ ಮುಂಚೆಯೇ, ನಿರ್ದೇಶಕ ಮಂಡ್ಯ ನಾಗರಾಜ್ , 1994ರಲ್ಲಿ ಸುರೇಶ್ ಹೆಬ್ಳೀಕರ್ ಇಟ್ಟುಕೊಂಡು ಮರ್ಡರ್ ಟೈಟಲ್ ಮೇಲೆ, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡಿದ್ರು..ಇದೀಗ ನಿರ್ದೇಶಕ ಮಂಡ್ಯ ನಾಗರಾಜ್ ಮರ್ಡರ್-2 ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ..ಒಂದು ವರ್ಷದ ಹಿಂದೆ ಸೆಟ್ಟೇರಿದ ಮರ್ಡರ್-2 ಸಿನಿಮಾ ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗಿದೆ...ಮರ್ಡರ್ ಮಿಸ್ಟರಿ ಕಥೆ ಆಧರಿಸಿರೋ ಈ ಚಿತ್ರದಲ್ಲಿ, ಆನಂದ್ ಗಣೇಶ್, ಶಾಲಿನಿ ಹಾಗು ದೀಪಕ್ ಗಣೇಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ..ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿರುವ ಚಿತ್ರತಂಡ, ತಮ್ಮ ಚಿತ್ರದ ಎಕ್ಸ್ ಫಿರಿಯನ್ಸ್ ಬಗ್ಗೆ ಹಂಚಿಕೊಂಡಿತ್ತು..Body:ಒಂದು ಕೊಲೆಯ ಸುತ್ತ ನಡೆಯುವ ಮರ್ಡರ್-2 ಚಿತ್ರ ಸಸ್ಪೆನ್ಸ್ ಹಾಗು ಥ್ರಿಲ್ಲರ್ ನಿಂದ ಕೂಡಿದೆ..ತಾಯಿಯ ಋಣ, ಪೊಲೀಸ್ ಬೇಟೆ, ಯಾರಿವಳು, ಹೀಗೆ 13 ಸಿನಿಮಾಗಳನ್ನ‌ ನಿರ್ಮಾಣ ಹಾಗು ನಿರ್ದೇಶನ ಮಾಡಿರುವ, ಮಂಡ್ಯ ನಾಗರಾಜ್ ಮರ್ಡರ್-2 ಚಿತ್ರವನ್ನ ನಿರ್ಮಾಣ ಹಾಗು ನಿರ್ದೇಶನ ಮಾಡಿದ್ದಾರೆ.. ಈ ಚಿತ್ರದಲ್ಲಿ ನಾಲ್ಕು ವೈರಟಿ ಫೈಟ್ಸ್ ಗಳನ್ನ ಹೈದರಾಬಾದ್ ಮೂಲದ ಸ್ಟಂಟ್ ಮಾಸ್ಟರ್ ಕಂಪೋಸ್ ಮಾಡಿದ್ದಾರೆ..ಕ್ಯಾಮೆರಾಮ್ಯಾನ್ ಬೆಂಗಳೂರು ಹಾಗು ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.. ಮರ್ಡರ್ ಮಿಸ್ಟರಿ ಕಥೆ ಹೊಂದಿರುವ ಈ ಚಿತ್ರ ಇದೇ 22ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ..

ಮಂಡ್ಯ ನಾಗರಾಜ್, ನಿರ್ದೇಶಕ ( ಬ್ಯೂ ಶರ್ಟ್)
ಆನಂದ್ ಗಣೇಶ್, ನಟ ( ರೆಡ್ ಟೀ ಶರ್ಟ್)
ಶಾಲಿನಿ, ನಟಿ
ದೀಪಕ್, ನಟ ( ಬ್ಲಾಕ್ ಟೀ ಶರ್ಟ್)
ನಿಂಗಾರಾಜ್, ಖಳ ನಟ ( ಕಡೆ ಬೈಟ್)Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.