ಜೈಪುರದಲ್ಲಿ ನಡೆದ ಮಿಸೆಸ್ ಇಂಡಿಯಾ ಐ ಆ್ಯಮ್ ಪವರ್ ಫುಲ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಶಿಲ್ಪಾ ಸುಧಾಕರ್, ರಶ್ಮಿ ರಂಗಪ್ಪ, ಸುಪ್ರೀತಾ ಹಾಗೂ ಕಾವ್ಯ ಪ್ರಶಸ್ತಿ ಗೆದ್ದುಕೊಂಡರು.
ಮಿಸೆಸ್ ಇಂಡಿಯಾ ಐ ಆ್ಯಮ್ ಪವರ್ಫುಲ್ ಯೂನಿವರ್ಸ್ ವಿಭಾಗದ ಕಿರೀಟವನ್ನು ಶಿಲ್ಪಾ ಗೆದ್ದುಕೊಂಡರೆ, ಐ ಆ್ಯಮ್ ಪವರ್ಫುಲ್ ವರ್ಲ್ಡ್ ವಿಭಾಗದಲ್ಲಿ ರಶ್ಮಿ, ಏಷ್ಯಾ ವಿಭಾಗದಲ್ಲಿ ಸುಪ್ರೀತಾ, ಕರ್ವಿ ವರ್ಲ್ಡ್ ವಿಭಾಗದಲ್ಲಿ ಕಾವ್ಯ ಕಿರೀಟ ಜಯಿಸಿದರು. ನಿರ್ಮಲಾ, ಹೇಮಾ, ಸ್ನೇಹ, ಸಿಂಧು ರನ್ನರ್ ಅಪ್ ಆದರು.
ನಂದಿನಿ ನಾಗರಾಜ್ ಹಾಗೂ ಜಸ್ಪ್ರೀತ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ 10 ರೂಪದರ್ಶಿಯರ ತಂಡ ಜೈಪುರಕ್ಕೆ ತೆರಳಿತ್ತು. ಒಟ್ಟು 40 ಸ್ಪರ್ಧಿಗಳು ಭಾಗವಹಿಸಿದ್ದರು. ವಿಂಟೇಜ್, ಗೌನ್, ಎಥ್‍ನಿಕ್, ಟ್ಯಾಲೆಂಟ್ ಸುತ್ತುಗಳಲ್ಲಿ ರೂಪದರ್ಶಿಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.
'ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದಿದ್ದ ರೂಪದರ್ಶಿಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ತೆಳ್ಳಗೆ, ಬೆಳ್ಳಗೆ ಇರುವವರು, ಎತ್ತರ, ದಪ್ಪ, ವಯಸ್ಸನ್ನು ನೋಡಿ ಈ ಸ್ಪರ್ಧೆಗೆ ಆಯ್ಕೆ ಮಾಡಲಾಗಿಲ್ಲ. ಬದಲಾಗಿ ಅವರಿಗೆ ಇರುವ ಅರ್ಹತೆ ಹಾಗೂ ಆತ್ಮವಿಶ್ವಾಸವೇ ನಮ್ಮ ಸ್ಪರ್ಧೆಯ ಮಾನದಂಡವಾಗಿತ್ತು' ಎಂದು ಆಯೋಜಕಿ ನಂದಿನಿ ನಾಗರಾಜ್ ಹೇಳಿದರು.
ಬೆಂಗಳೂರಿನ ತಂಡ ಜೈಪುರದಲ್ಲಿ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದೆ. ಈ ತಂಡ ಮುಂದಿನ ವರ್ಷ ಸಿಂಗಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದೆ.
ಓದಿ: ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ರ್ಯಾಂಪ್ ವಾಕ್ ಮಾಡಿದ ನಟಿ ಐಶ್ವರ್ಯ ರೈ