ದೇವಿ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ್ದ ಮೇಘನಾ ಲೋಕೇಶ್ ಮುಂದೆ ಪವಿತ್ರ ಬಂಧನ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ಜೀ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿದ್ದ ಪುರುಷೋತ್ತಮ ಧಾರಾವಾಹಿಯಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ ಮೇಘನಾ ಸಾಂಸ್ಕೃತಿಕ ನಗರಿ ಮೈಸೂರಿನ ಚೆಲುವೆ.
![Meghna Lokesh Serial Journey](https://etvbharatimages.akamaized.net/etvbharat/prod-images/kn-bng-04-meghanalokesh-serial-ka10018_16062020192332_1606f_1592315612_208.jpg)
![Meghna Lokesh Serial Journey](https://etvbharatimages.akamaized.net/etvbharat/prod-images/kn-bng-04-meghanalokesh-serial-ka10018_16062020192332_1606f_1592315612_820.jpg)
ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿರುವ ಮೇಘನಾ ನಾಟಕದ ಮೂಲಕ ಬಣ್ಣದ ಯಾನ ಆರಂಭಿಸಿದರು. ರಂಗಕಲಾವಿದೆಯಾಗಿ ನಟನಾ ಲೋಕಕ್ಕೆ ಬಂದ ಮೇಘನಾ ಲೋಕೇಶ್, ಮೊದಲ ಬಾರಿ ನಾಟಕದಲ್ಲಿ ಪಾತ್ರ ಮಾಡಿದಾಗ ಕೇವಲ ಅವರಿಗೆ ಎಂಟು ವರ್ಷ! ಅಲ್ಲಿಂದ ಶುರು ವಾದ ಅವರ ಪಯಣ ಮುಂದೆ 270 ನಾಟಕಗಳಲ್ಲಿ ಅಭಿನಯಿಸುವಂತೆ ಪ್ರೇರೇಪಿಸಿತು. ಮಂಡ್ಯ ರಮೇಶ್ ಅವರ ಗರಡಿಯಲ್ಲಿ ಪಳಗಿದ ಈಕೆ ಮುಂದೆ ಕಿರುತೆರೆಯತ್ತ ಮುಖ ಮಾಡಿದರು.
![Meghna Lokesh Serial Journey](https://etvbharatimages.akamaized.net/etvbharat/prod-images/kn-bng-04-meghanalokesh-serial-ka10018_16062020192332_1606f_1592315612_722.jpg)
![Meghna Lokesh Serial Journey](https://etvbharatimages.akamaized.net/etvbharat/prod-images/kn-bng-04-meghanalokesh-serial-ka10018_16062020192332_1606f_1592315612_839.jpg)
ಕನ್ನಡದ ಪುರುಷೋತ್ತಮ ಧಾರಾವಾಹಿಯ ನಂತರ ತೆಲುಗು ಕಿರುತೆರೆಗೆ ಹಾರಿದ ಈಕೆ ಅಲ್ಲೂ ತನ್ನ ನಟನಾ ಛಾಪನ್ನು ಪಸರಿಸುವಲ್ಲಿ ಯಶಸ್ವಿಯಾದರು. ಮಾತ್ರವಲ್ಲ ಇಂದು ತೆಲುಗು ಕಿರುತೆರೆಯ ಜನಪ್ರಿಯ ನಟಿಯೂ ಹೌದು! ಸಸಿರೇಖ ಪರಿಣಯಂ ಧಾರಾವಾಹಿಯ ಮೂಲಕ ತೆಲುಗು ಕಿರುತೆರೆಗೆ ಪಾದಾರ್ಪಣೆ ಮಾಡಿದ ಮೇಘನಾ ಮೊದಲ ಧಾರಾವಾಹಿಯಲ್ಲೇ ಸಾಕಷ್ಟು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡರು. ಮಾತ್ರವಲ್ಲ ತೆಲುಗು ವೀಕ್ಷಕರು ಕನ್ನಡತಿಯ ನಟನೆಗೂ ಫಿದಾ ಆದರು.
![Meghna Lokesh Serial Journey](https://etvbharatimages.akamaized.net/etvbharat/prod-images/kn-bng-04-meghanalokesh-serial-ka10018_16062020192332_1606f_1592315612_156.jpg)
![Meghna Lokesh Serial Journey](https://etvbharatimages.akamaized.net/etvbharat/prod-images/kn-bng-04-meghanalokesh-serial-ka10018_16062020192332_1606f_1592315612_200.jpg)
![Meghna Lokesh Serial Journey](https://etvbharatimages.akamaized.net/etvbharat/prod-images/kn-bng-04-meghanalokesh-serial-ka10018_16062020192332_1606f_1592315612_418.jpg)
ಕಲ್ಯಾಣ ವೈಭೋಗಂ ಎಂಬ ತೆಲುಗು ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ಮಿಂಚಿದ ಅರಮನೆ ನಗರಿ ಕುವರಿ ರಕ್ತ ಸಂಬಂಧಂ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ. ಒಟ್ಟಾರೆಯಾಗಿ ಒಂದರ ನಂತರ ಒಂದರಂತೆ ತೆಲುಗು ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ಮೇಘನಾ ಇದಿ ಮಾ ಪ್ರೇಮಕಥಾ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ.
![Meghna Lokesh Serial Journey](https://etvbharatimages.akamaized.net/etvbharat/prod-images/kn-bng-04-meghanalokesh-serial-ka10018_16062020192332_1606f_1592315612_138.jpg)
ಕನ್ನಡ ಕಿರುತೆರೆಯ ಮೂಲಕ ನಟನಾ ಯಾನ ಶುರು ಮಾಡಿದ ಚೆಂದುಳ್ಳಿ ಚೆಲುವೆ ಮೇಘನಾ ಇಂದು ತೆಲುಗು ಕಿರುತೆರೆಯ ಜನಪ್ರಿಯ ನಟಿಯೂ ಹೌದು.