ನವರಸ ನಾಯಕ ಜಗ್ಗೇಶ್ ಹಾಗೂ ಮೇಘನಾ ಗಾಂವ್ಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಇನ್ನು ಜಗ್ಗೇಶ್ ಅವರ ನಟನೆಗೆ ಮನಸೋಲದವರಿಲ್ಲ. ಹಾಸ್ಯ ಮಾತ್ರವಲ್ಲದೆ ಎಂತಹ ಪಾತ್ರ ಮಾಡಲು ಸೈ ಎಂಬುದನ್ನು ಜಗ್ಗೇಶ್ ಈಗಾಗಲೇ ಬಹಳಷ್ಟು ಸಿನಿಮಾಗಳಲ್ಲಿ ಪ್ರೂವ್ ಮಾಡಿದ್ದಾರೆ. ಇನ್ನು ಜಗ್ಗೇಶ್ ಅಭಿನಯದ 'ಸರ್ವರ್ ಸೋಮಣ್ಣ' ಸಿನಿಮಾ ನೋಡಿ ನನಗೆ ಅವರ ಮೇಲೆ ಕ್ರಶ್ ಆಗಿತ್ತು ಎಂದು ನಟಿ ಮೇಘನಾ ಗಾಂವ್ಕರ್ ಹೇಳಿಕೊಂಡಿದ್ದಾರೆ. 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಮಾತನಾಡಿದ ಮೇಘನಾ, 'ನಾನು ಎರಡನೇ ಕ್ಲಾಸ್ನಲ್ಲಿ ಓದುವಾಗ 'ಸರ್ವರ್ ಸೋಮಣ್ಣ' ಸಿನಿಮಾ ನೋಡಿ ಜಗ್ಗೇಶ್ ಸರ್ ಅವರ ಮೇಲೆ ಕ್ರಶ್ ನನಗೆ ಆಗಿತ್ತು ಎಂದು ಹೇಳಿದ್ದಾರೆ. ನಾನು ಕನ್ನಡದಲ್ಲಿ ಮೊದಲು ನೋಡಿದ ಕಾಮಿಡಿ ಸಿನಿಮಾ ಅಂದ್ರೆ 'ಸರ್ವರ್ ಸೋಮಣ್ಣ'. ಈ ಚಿತ್ರದಲ್ಲಿ ಜಗ್ಗೇಶ್ ಅವರ ಮ್ಯಾನರಿಸಂ ನನಗೆ ಬಹಳ ಇಷ್ಟವಾಗಿತ್ತು. ಆದರೆ ಈಗ ಆ ನಟನ ಜೊತೆಯೇ ಅಭಿನಯಿಸಿದ್ದೇನೆ. ಇದು ನಿಜಕ್ಕೂ ಮರೆಯಲಾರದ ಅನುಭವ ಎಂದು ಮೇಘನಾ ಹೇಳಿದ್ದಾರೆ. 'ಕಾಳಿದಾಸ ಕನ್ನಡ ಮೇಷ್ಟ್ರು' ಇದೇ ನವೆಂಬರ್ 15ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.