ETV Bharat / sitara

ಹೊಸ ವರ್ಷದಲ್ಲಿ ಚಿತ್ರ ರಸಿಕರನ್ನು ಹಳ್ಳಿಗೆ ಕರೆದೊಯ್ಯಲು ಬರ್ತಿದ್ದಾರೆ 'ರಾಜೀವ' - kannada film news

ಮಯೂರ್ ಪಟೇಲ್ ಅಭಿನಯದ 'ರಾಜೀವ' ಚಿತ್ರ ಜನವರಿ 3 ರಂದು ಸುಮಾರು150ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗ್ತಿದೆ.

Mayur patel Acting in0  Rajeeva movie
ಬಹಳ ವರ್ಷಗಳ ನಂತ್ರ 'ರಾಜೀವ'ನಾಗಿ ಬರ್ತಿದ್ದಾರೆ ಮಯೂರ್ ಪಟೇಲ್
author img

By

Published : Dec 31, 2019, 12:01 PM IST

ಹೊಸ ವರ್ಷದ ಆರಂಭದಲ್ಲೇ ಸಿನಿ ರಸಿಕರ ಮನರಂಜಿಸೋಕೆ ನಟ ಮಯೂರ್ ಪಟೇಲ್ ರೆಡಿಯಾಗಿದ್ದಾರೆ. ತುಂಬಾ ವರ್ಷಗಳ ನಂತ್ರ ಮಯೂರ್ ಪಟೇಲ್ ನಾಯಕನಾಗಿ ನಟಿಸಿರುವ 'ರಾಜೀವ' ಚಿತ್ರ ಹೊಸ ವರ್ಷದ ಆರಂಭದಲ್ಲೇ ಥಿಯೇಟರ್​​ಗೆ ಲಗ್ಗೆ ಇಡ್ತಿದೆ.

ಜನವರಿ 3 ರಂದು 'ರಾಜೀವ' ಚಿತ್ರ ಸುಮಾರು150ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗ್ತಿದೆ. ಈ ಕುರಿತು ಚಿತ್ರತಂಡ ಮಾಧ್ಯಮಗೋಷ್ಟಿ ನಡೆಸಿ ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಚಿತ್ರತಂಡ ಈಗಾಗಲೇ ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿದ್ದು, ಹೊಸ ವರ್ಷವನ್ನು ವೆಲ್​ಕಮ್ ಮಾಡಿಕೊಂಡು ಸಂಭ್ರಮದಲ್ಲಿರುವ ಕನ್ನಡಿಗರನ್ನು ರಿಲ್ಯಾಕ್ಸ್ ಮೂಡ್​​ಗೆ ಕರೆದೊಯ್ಯಲು ಮಯೂರ್ ಬರ್ತಿದ್ದಾರೆ.

ಬಹಳ ವರ್ಷಗಳ ನಂತ್ರ 'ರಾಜೀವ'ನಾಗಿ ಬರ್ತಿದ್ದಾರೆ ಮಯೂರ್ ಪಟೇಲ್

'ರಾಜೀವ' ಸಿನಿಮಾ ಅಪ್ಪಟ ದೇಶಿ ಸಿನಿಮಾವಾಗಿದ್ದು, ಐಎಎಸ್ ಓದಿದ್ರು, ಹಳ್ಳಿಯ ಜೀವನಕ್ಕೆ ಆಕರ್ಷಿತನಾಗಿ ಹಳ್ಳಿಗೆ ಬಂದು ವ್ಯವಸಾಯ ಮಾಡುವ ಮಾಡರ್ನ್​ ಯುವ ರೈತನ ಪಾತ್ರದಲ್ಲಿ ಮಯೂರ್​ ಪಟೇಲ್​ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನ ಮಾಡಿದ್ದು, ರಾಜೀವ‌ನಿಗೆ ನಾಯಕಿಯಾಗಿ ಅಕ್ಷತಾ ಸಾದಸೀದಾ ಹಳ್ಳಿ ಹುಡ್ಗಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಈ ಚಿತ್ರಕ್ಕೆ ಕಥೆ ಬರೆದಿರುವ ರಮೇಶ್ ನಿರ್ಮಾಣದ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ.

Intro:ಹೊಸ ವರ್ಷದ ಆರಂಭದಲ್ಲೇ ಸಿನಿರಸಿಕರ ಮನರಂಜಿಸೋಕೆ ನಟ ಮಯೂರ್ ಪಟೇಲ್ ರೆಡಿಯಾಗಿದ್ದಾರೆ.ಹೌದು ತುಂಭಾ ವರ್ಷಗಳ ಗ್ಯಾಫ್ ನಂತ್ರ ಮಯೂರ್ ಪಟೇಲ್ ನಾಯಕನಾಗಿ ನಟಿಸಿರುವ "ರಾಜೀವ" ಚಿತ್ರ ಹೊಸ ವರ್ಷದ ಆರಂಭದಲ್ಲೆ ಥಿಯೇಟರ್ ಗೆ ಲಗ್ಗೆ ಇಡ್ತಿದೆ. ಜನವರಿ 3 ರಂದು "ರಾಜೀವ " ಚಿತ್ರ ಸುಮಾರು150ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗ್ತಿದೆ. ಇನ್ನು ರಾಜೀವ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡುವ ಸಲುವಾಗಿ ಇಂದು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ರು.ಚಿತ್ರತಂಡ ಈಗಾಗಲೇ ಭರ್ಜರಿಯಾಗಿ ಪ್ರಚಾರ ಮಾಡ್ತಿದ್ದು, ಹೊಸ ವರ್ಷವನ್ನು ವೆಲ್ ಕಮ್ ಮಾಡಿಕೊಂಡು ಸಂಭ್ರಮದಲ್ಲಿ ಇರುವ ಕನ್ನಡಿಗರನ್ನು ರಿಲಾಕ್ಸ್ ಮೂಡ್ ಗೆ ಕರೆದೊಯ್ಯಲು ಮಯೂರ್ ಪಟೇಲ್ " ರಾಜೀವ"ನ ಅವತಾರದಲ್ಲಿ ಬರ್ತಿದ್ದಾರೆ.

Body:"ರಾಜೀವ" ಅಪ್ಪಟ ದೇಶಿ ಸಿನಿಮಾವಾಗಿದ್ದು, ಐಎಎಸ್ ಓದಿದ್ರು. ಹಳ್ಳಿಯ ಜೀವನಕ್ಕೆ ಆಕರ್ಷಿತನಾಗಿ ಹಳಿಗ್ಗೆ ಬಂದು ವ್ಯವಸಾಯ ಮಾಡುವ ಮಾಡ್ರನ್ ಯುವ ರೈತನಾಗಿ ಮಯೂರ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ‌. ಇನ್ನು ಈ ಚಿತ್ರವನ್ನು ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನ ಮಾಡಿದ್ದು. ಸದ್ಯ ಹಳ್ಳಿಗಳ ಯುವಕರು ಪಟ್ಟಣ ಸೇರಿದ್ದು , ವ್ಯವಸಾಯ ಮಾಡುವವರೇ ಮರೆಯಾಗ್ತಿದ್ದಾರೆ‌. ವಿದ್ಯಾಭ್ಯಾಸ ಮಾಡಿದ ಯುವಕರು ಸಿಟಿ ಲೈಫ್ ಗೆ ಅಟ್ರಾಕ್ಟ್ ಆಗದೆ ,ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ವ್ಯವಸಾಯ ಮಾಡಿದ್ರೆ ,
ಕೃಷಿಯಿಂದ ಆಗುವ ರೆವಲ್ಯೂಷನ್ ಹಾಗೂ ರೈತರ ಒಂದಷ್ಟು ಸಮಸ್ಯೆಗಳ ಸುತ್ತ" ರಾಜೀವ " ಚಿತ್ರದ ಕಥೆ ಹೆಣೆದಿದ್ದು. ಚಿತ್ರದ ಕಥೆ ಮೇಲೆ ಚಿತ್ರತಂಡಕ್ಕೆ ಬಲವಾದ ನಂಬಿಕೆ ಇದ್ದು ಖಂಡಿತಾ ಗೆದ್ದೆ ಗೆಲ್ತೇವೆ ಎಂಬ ನಂಬಿಕೆಯಲ್ಲಿ ಚಿತ್ರತಂಡ ಇದೆ. ಇನ್ನು ರಾಜೀವ‌ನಿಗೆ ನಾಯಕಿಯಾಗಿ ಅಕ್ಷತ ಸಾದಾ ಸೀದ ಹಳ್ಳಿ ಹುಡ್ಗಿ ಪಾತ್ರದಲ್ಲಿ ಮಿಂಚಿದ್ದಾರೆ.

Conclusion:ರಾಜೀವ ಚಿತ್ರಕ್ಕೆ ಕಥೆ ಬರೆದಿರುವ ರಮೇಶ್ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದು, ಸಿನಿರಸಿಕರನ್ನು ರಂಜಿಸಲು
ಇದೇ ವಾರ ರಾಜೀವ ತೆರೆಮೆಲೆ ಬರ್ತಿದ್ದಾನೆ.

ಸತೀಶ ಎಂಬಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.