ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನು ರವಿಚಂದ್ರನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 33ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮನು ರವಿಚಂದ್ರನ್ಗೆ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ. ಮನು ತಮ್ಮ ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

11 ಡಿಸೆಂಬರ್ 1987 ರಲ್ಲಿ ಬೆಂಗಳೂರಿನಲ್ಲಿ ರವಿಚಂದ್ರನ್ ಹಾಗೂ ಸುಮತಿ ದಂಪತಿ ಮೊದಲ ಪುತ್ರನಾಗಿ ಜನಿಸಿದ ಮನು ಇದೀಗ ಅಪ್ಪನಂತೆ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ತಾತಾ ವೀರಾಸ್ವಾಮಿ, ಅಪ್ಪ ರವಿಚಂದ್ರನ್ ಅವರಂತ ಕಲಾವಿದರ ನೆರಳಲ್ಲಿ ಬೆಳೆದರೂ ಮನು ಅಭಿನಯ ತರಂಗದಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದು ನಂತರ ಚಿತ್ರರಂಗಕ್ಕೆ ಬಂದಿದ್ದಾರೆ. 2017 ರಲ್ಲಿ ಸಾಹೇಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಮನು ನಂತರ ಬೃಹಸ್ಪತಿ ಚಿತ್ರದಲ್ಲಿ ನಟಿಸಿದರು. ಸದ್ಯಕ್ಕೆ ಅವರು ಪ್ರಾರಂಭ, ಮುಗಿಲ್ಪೇಟೆ, ರಣಧೀರ:ಪ್ರೇಮಲೋಕದಲ್ಲಿ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ನಟನೆ ಹೊರತುಪಡಿಸಿ ಮನು ರವಿಚಂದ್ರನ್ ಕ್ರಿಕೆಟ್ ಆಟಗಾರ ಕೂಡಾ ಹೌದು. ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಗಳಲ್ಲಿ ಮನು ಆಟ ಹಾಡಿದ್ದಾರೆ. ಸದ್ಯಕ್ಕೆ ಮನು ಚಿತ್ರಂಗದಲ್ಲಿ ಸಕ್ರಿಯರಾಗಿದ್ದಾರೆ. ಮನು ಕೂಡಾ ಅಪ್ಪನಂತೆ ದೊಡ್ಡ ಹೆಸರು ಮಾಡಲಿ ಎಂದು ಹಾರೈಸೋಣ.
