ಮಂಜು ಪಾವಗಡ ಸುದೀರ್ಘ 120 ದಿನಗಳ ಕಾಲ ನಡೆದ ಬಿಗ್ ಬಾಸ್ ಸೀಸನ್ 8ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬೈಕರ್ ಕೆ ಪಿ ಅರವಿಂದ್ ರನ್ನರ್ ಅಪ್ ಆದರೆ, ದಿವ್ಯಾ ಉರುಡುಗ 3ನೇ ಸ್ಥಾನ ಪಡೆದಿದ್ದಾರೆ. ಬಿಗ್ ಬಾಸ್ ಗೆಲ್ಲಬೇಕೆಂಬ ಅಚಲ ಮನೋಭಾವನೆಯೊಂದಿಗೆ ಮನೆಯೊಳಗೆ ಬಂದಿದ್ದ ಮಂಜು ಪಾವಗಡ ಕೊನೆಯವರೆಗೂ ತಮ್ಮ ಹೋರಾಟದ ಪ್ರದರ್ಶನ ಕಾಯ್ದುಕೊಂಡು ಉಳಿದ ಸ್ಪರ್ಧಿಗಳಿಗಿಂತ ಮುಂಚೂಣಿಯಲ್ಲಿದ್ದರು.
ಲಾಕ್ಡೌನ್ನಿಂದಾಗಿ ಬಿಗ್‌ಬಾಸ್ ರದ್ದಾಗಿದ್ದು ಮಂಜು ಅವರಲ್ಲಿ ತುಂಬಾ ನೋವುಂಟು ಮಾಡಿತ್ತು. ನಾನು ಈ ಬಾರಿ ಬಿಗ್‌ಬಾಸ್ ಗೆಲ್ಲುತ್ತೇನೆಂಬ ಆತ್ಮವಿಶ್ವಾಸವಿತ್ತು. ಅರ್ಧಕ್ಕೆ ನಿಂತಿದ್ದು, ತುಂಬಾ ನೋವುಂಟು ಮಾಡಿದೆ ಎಂದು ನೊಂದುಕೊಂಡಿದ್ದರು. ಆದರೆ, ಬಿಗ್ಬಾಸ್ನ ಸೆಕೆಂಡ್ಸ್ ಇನ್ನಿಂಗ್ಸ್ನಲ್ಲಿ ಹೆಚ್ಚು ಮನರಂಜನೆ ನೀಡುತ್ತಾ, ಟಾಸ್ಕ್ ಮಾಡುತ್ತಾ ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದಿದ್ದರು ಮಂಜು ಪಾವಗಡ.
ಬಿಗ್ ಬಾಸ್ ಮನೆಯಲ್ಲಿ ನಡೆದ ಟಾಸ್ಕ್ಗಳಲ್ಲಿ ಮಂಜು ಪಾವಗಡ ಅತ್ಯುತ್ತಮ ಪ್ರದರ್ಶನ ನೀಡಿದರು. ಅಲ್ಲದೆ ಕ್ಯಾಪ್ಟನ್ ಆಗಿಯೂ ಕೂಡ ಅವರ ನಾಯಕತ್ವ ಎಲ್ಲರಿಗೂ ಇಷ್ಟವಾಗಿತ್ತು. ಆದರೆ, ಮೊದಲ ಇನ್ನಿಂಗ್ಸ್ನಲ್ಲಿ ದಿವ್ಯಾ ಸುರೇಶ್ ಅವರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ ಮಂಜು, ಸೆಕೆಂಡ್ ಇನ್ನಿಂಗ್ಸ್ನಲ್ಲಿ ಕೇವಲ ಆಟದ ಕಡೆ ಗಮನ ಹರಿಸಿದ್ದರು. ಹೀಗಾಗಿ, ಮಂಜು ಅವರು ವೈಯಕ್ತಿಕವಾಗಿ ಹಾಗೂ ಸ್ವತಂತ್ರವಾಗಿ ತಮ್ಮ ಆಟವನ್ನು ಬಿಗ್ ಬಾಸ್ ಮನೆಯಲ್ಲಿ ಕೊನೆಯ ದಿನದವರೆಗೂ ನಡೆಸಿದ್ದಾರೆ.
ಇವರಿಗೆ ಮೊದಲಿನಿಂದಲೂ ಅರವಿಂದ್ ಹಾಗೂ ದಿವ್ಯಾ ಉರುಡುಗ ಟಫ್ ಕಾಂಪಿಟೇಟರ್ ಆಗಿದ್ದರು. ಆದರೂ ಯಾವುದನ್ನು ಹೆಚ್ಚಾಗಿ ಮನಸ್ಸಿಗೆ ತೆಗೆದುಕೊಳ್ಳದೇ ಆಟದ ಮೇಲೆ ಹೆಚ್ಚು ಗಮನ ನೀಡುವ ಮೂಲಕ ಮಂಜು ಪಾವಗಡ ವಿಜಯ ಪತಾಕೆ ಹಾರಿಸಿದ್ದಾರೆ.
53 ಲಕ್ಷ ರೂಪಾಯಿ ಬಹುಮಾನ
ಬಿಗ್‌ಬಾಸ್ ವಿನ್ನರ್ ಎಂಬ ಪಟ್ಟದ ಜೊತೆಗೆ ಮಂಜು ಪಾವಗಣ 53 ಲಕ್ಷ ರೂಪಾಯಿ ಬಹುಮಾನವನ್ನು ಕೂಡ ಪಡೆದಿದ್ದಾರೆ. ತಾವು ವಿಜೇತರಾಗಿ ಬಂದ ಹಣದಿಂದ ತಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಮಹಾದಾಸೆಯನ್ನು ಮಂಜು ಪಾವಗಡ ವ್ಯಕ್ತಪಡಿಸಿದ್ದಾರೆ.
ಇದೇ ಮೊದಲ ಬಾರಿಗೆ ಮತಗಳ ಬಹಿರಂಗ
ಹಿಂದಿನ 7 ಆವೃತ್ತಿಗಳಲ್ಲೂ ಗೆದ್ದ ಸ್ಪರ್ಧಿ ಪಡೆದ ವೋಟ್ಗಳನ್ನು ಬಹಿರಂಗಪಡಿಸುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಬಿಗ್‌ಬಾಸ್ ಇತಿಹಾಸದಲ್ಲಿ ಫೈನಲ್ ಅಭ್ಯರ್ಥಿಗಳು ಪಡೆದ ಮತಗಳನ್ನು ಸ್ವತಃ ಸುದೀಪ್ ಬಹಿರಂಗಪಡಿಸಿದ್ದಾರೆ. ಈ ಬಾರಿ ವಿನ್ನರ್ ಮಂಜು ಪಾವಗಡ 45,03,495, ರನ್ನರ್ ಅಪ್ ಅರವಿಂದ್ 43, 35, 957, ದಿವ್ಯಾ ಉರುಡುಗಗೆ 11,61,205, ವೈಷ್ಣವಿ 10,21,831 ಮತ್ತು ಪ್ರಶಾಂತ್ 6,69,020 ಮತಗಳನ್ನು ಪಡೆದಿದ್ದಾರೆ.
ಇದನ್ನು ಓದಿ: ನನ್ನ ಬೆಸ್ಟ್ ನಾನು ನೀಡಿದ್ದೀನಿ, ಟಾಪ್ ನಾಲ್ಕು ಬಂದಿದ್ದು ಖುಷಿ ನೀಡಿದೆ.. ವೈಷ್ಣವಿ ಗೌಡ