ETV Bharat / sitara

‘ಪ್ರೇಮಂ ಪೂಜ್ಯಂ’ ಪ್ರಮೋಷನ್​ಗಾಗಿ ಕಾಲೇಜು ಮೆಟ್ಟಿಲು ಹತ್ತಿದ ಲವ್ಲಿ ಸ್ಟಾರ್ ಪ್ರೇಮ್​ - premam pujyam movie

ವೃತ್ತಿಯಲ್ಲಿ ನರರೋಗ ತಜ್ಞರಾಗಿರುವ ಡಾ. ರಾಘವೇಂದ್ರ ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲಿ ಹೊಸ ರೀತಿಯ ಲವ್‌ ಸ್ಟೋರಿ ಹೇಳಲಿದ್ದಾರಂತೆ. ಚಿತ್ರ ಇದೇ ತಿಂಗಳ 12ರಂದು ತೆರೆಗೆ ಬರುತ್ತಿದ್ದು, ಆನ್​​ಲೈನ್​​ನಲ್ಲಿ ಟಿಕೆಟ್ ಕಾಯ್ದಿರಿಸುವಿಕೆಯೂ ಆರಂಭವಾಗಿದೆ.

Lovely star Prem in promotion of his Upcoming movie Premam Puhyam
‘ಪ್ರೇಮಂ ಪೂಜ್ಯಂ’ ಪ್ರಮೋಷನ್​ಗಾಗಿ ಕಾಲೇಜು ಮೇಟ್ಟಿಲು ಹತ್ತಿದ ಲವ್ಲಿ ಸ್ಟಾರ್ ಪ್ರೇಮ್​
author img

By

Published : Nov 9, 2021, 12:34 PM IST

ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯ ಚಿತ್ರರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಪ್ರೇಮಂ ಪೂಜ್ಯಂ. ಲವ್ಲಿ ಸ್ಟಾರ್ ಪ್ರೇಮ್ ಸಿನಿ ಜರ್ನಿಯ 25ನೇ ಸಿನಿಮಾ ಇದಾಗಿದ್ದು, ಬಿಡುಗಡೆ ದಿನಾಂಕ ಪ್ರಕಟಿಸಿ ತೆರೆಗೆ ಬರ್ತಿದೆ.

ಟ್ರೈಲರ್ ಹಾಗೂ ಅದ್ಧೂರಿ ಮೇಕಿಂಗ್​ನಿಂದ ಗಮನ ಸೆಳೆಯುತ್ತಿರುವ ಪ್ರೇಮಂ ಪೂಜ್ಯಂ ಸಿನಿಮಾ ಬಿಡುಗಡೆಗೆ ಮೂರು ದಿನಗಳು ಮಾತ್ರ ಬಾಕಿ ಉಳಿದಿದ್ದು, ನವೆಂಬರ್‌ 12ರಂದು ಕರ್ನಾಟಕ ಸೇರಿ ಹೊರ ರಾಜ್ಯದಲ್ಲೂ ಬಿಡುಗಡೆಯಾಗುತ್ತಿದೆ.

ಈ ಹಿನ್ನೆಲೆ ಚಿತ್ರದ ಪ್ರಮೋಷನ್​​​ನಲ್ಲಿ ನಟ ಪ್ರೇಮ್ ಬ್ಯುಸಿಯಾಗಿದ್ದಾರೆ. ಸದ್ಯ ಹಾಸನದ ರಾಜೀವ್ ಕಾಲೇಜಿಗೆ ಪ್ರೇಮ್ ಭೇಟಿ ನೀಡಿದ್ದು, ಅಲ್ಲಿನ ವಿದ್ಯಾರ್ಥಿಗಳ ಜೊತೆ ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಇದೊಂದು ಮುದ್ದಾದ ಲವ್ ಸ್ಟೋರಿಯಾಗಿದ್ದು, ಈ ಚಿತ್ರದಲ್ಲಿ ಪ್ರೇಮ್ 7 ಶೇಡ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಿ, ಸ್ನೇಹ, ಫ್ಯಾಮಿಲಿ ಎಮೋಷನ್​ಗಳನ್ನ ಪ್ರೇಮಂ ಪೂಜ್ಯಂ ಸಿನಿಮಾದಲ್ಲಿ ಕಾಣಬಹುದು ಎಂಬುದು ಚಿತ್ರತಂಡದ ಮಾತು.

ವೃತ್ತಿಯಲ್ಲಿ ನರರೋಗ ತಜ್ಞರಾಗಿರುವ ಡಾ. ರಾಘವೇಂದ್ರ ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲಿ ಹೊಸ ರೀತಿಯ ಲವ್‌ ಸ್ಟೋರಿ ಹೇಳಲಿದ್ದಾರಂತೆ. ನಿರ್ದೇಶಕ ರಾಘವೇಂದ್ರ ತಾವೇ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಯುವ ನಾಯಕಿ ಬೃಂದಾ ಆಚಾರ್ಯ ಪ್ರೇಮ್​ಗೆ ಜೋಡಿಯಾಗಿದ್ದಾರೆ. ಪ್ರೇಮ್ ಹಾಗೂ ಬೃಂದಾ ಅಲ್ಲದೇ ಈ ಚಿತ್ರದಲ್ಲಿ, ಐಂದ್ರಿತಾ ರೇ, ಸುಮನ್, ಮಾಸ್ಟರ್ ಆನಂದ್, ಸಾಧು ಕೋಕಿಲಾ, ಅನು ಪ್ರಭಾಕರ್ ಮಾತ್ರವಲ್ಲ ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಸೇರಿದಂತೆ ದೊಡ್ಡ ತಾರ ಬಳಗವೇ ಒದೆ.

ಈ ಚಿತ್ರದ ಟ್ರೈಲರ್​​​ನಲ್ಲಿ ಗಮನ ಸೆಳೆದಿದ್ದ ಅದ್ಧೂರಿ, ಕಲರ್​ಫುಲ್ ದೃಶ್ಯಗಳನ್ನ ಛಾಯಾಗ್ರಾಹಕ ನವೀನ್ ಕುಮಾರ್ ಸೆರೆಹಿಡಿದಿದ್ದಾರೆ. ಇದೇ ನವೆಂಬರ್ 12ಕ್ಕೆ ವಿಶ್ವದಾದ್ಯಂತ ಪ್ರೇಮಂ ಪೂಜ್ಯಂ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಪ್ರೇಮಂ ಪೂಜ್ಯಂ ಚಿತ್ರತಂಡ ಇಂದಿನಿಂದ ಆನ್​ಲೈನ್ ಟಿಕೆಟ್ ಬುಕ್ಕಿಂಗ್​ ಅನ್ನೂ ಓಪನ್ ಮಾಡಿದೆ. ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ.

ಇದನ್ನೂ ಓದಿ: 'ಲವ್ ಯು ರಚ್ಚು' ಸಿನಿಮಾದಲ್ಲಿ ಬ್ಯಾಕ್‌ಲೆಸ್ ಆದ ಡಿಂಪಲ್‌ ಕ್ವೀನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.