ETV Bharat / sitara

ಲೂಸ್​ ಮಾದ ಯೋಗಿ ಹುಟ್ಟುಹಬ್ಬಕ್ಕೆ ಲಂಕೆ ಚಿತ್ರತಂಡದಿಂದ ಭರ್ಜರಿ ಗಿಫ್ಟ್ - ಲೂಸ್ ಮಾದ ಯೋಗಿ ಬರ್ತಡೇ,

ಲೂಸ್​ ಮಾದ ಯೋಗಿ 32 ನೇ ವರ್ಷಕ್ಕೆ ಕಾಲಿಟ್ಟಿದ್ದು, ಲಂಕೆ ಚಿತ್ರತಂಡ ಹಾಗೂ ಕುಟುಂಬಸ್ಥರೊಂದಿಗೆ ನಟ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಲ್ಲದೆ, ಯೋಗಿ ಬರ್ತಡೇಗೆ ‘ಲಂಕೆ’ ಭರ್ಜರಿ ಗಿಫ್ಟ್ ನೀಡಿದೆ.

ಲೂಸ್​ ಮಾದ ಯೋಗಿ ಹುಟ್ಟುಹಬ್ಬಕ್ಕೆ ಲಂಕೆ ಚಿತ್ರತಂಡದಿಂದ ಭರ್ಜರಿ ಗಿಫ್ಟ್..!

author img

By

Published : Jul 6, 2021, 2:16 PM IST

ಬೆಂಗಳೂರು: ಸ್ಯಾಂಡಲ್​​ವುಡ್​​ನಲ್ಲಿ ಲೂಸ್ ಮಾದ ಅಂತಾನೇ ಹೆಸರುವಾಸಿಯಾಗಿರುವ ನಟ ಯೋಗಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 32ನೇ ವಸಂತಕ್ಕೆ ಕಾಲಿಟ್ಟಿರುವ ಯೋಗಿ, ಫ್ಯಾಮಿಲಿ ಹಾಗೂ ಲಂಕೆ ಚಿತ್ರ ತಂಡದ ಜೊತೆ, ಕೇಕ್ ಕಟ್ ಮಾಡುವ ಮೂಲಕ ಸರಳವಾಗಿ ಬರ್ತಡೇ ಆಚರಿಸಿಕೊಂಡಿದ್ದಾರೆ.

ಕೋಣನಕುಂಟೆ ನಿವಾಸದಲ್ಲಿ ಯೋಗಿ ಬರ್ತಡೇ ಸೆಲಬ್ರೇಶನ್ ಮಾಡಿಕೊಂಡಿದ್ದು, ಅವರ ಜನ್ಮದಿನಕ್ಕೆ ಚಿತ್ರತಂಡ ಲಂಕೆ ಸಿನಿಮಾದ ಮೋಷನ್ ಪಿಕ್ಚರ್ ರಿಲೀಸ್ ಮಾಡುವ ಮೂಲಕ ಭರ್ಜರಿ ಗಿಫ್ಟ್ ನೀಡಿದೆ.

ಲೂಸ್​ ಮಾದ ಯೋಗಿ ಹುಟ್ಟುಹಬ್ಬಕ್ಕೆ ಲಂಕೆ ಚಿತ್ರತಂಡದಿಂದ ಭರ್ಜರಿ ಗಿಫ್ಟ್..!

ಸಾಹಸ ಪ್ರಧಾನವಾದ ಈ ಚಿತ್ರಕ್ಕೆ ರಾಮ್​ಪ್ರಸಾದ್​ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಮ್​ಪ್ರಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ. ದಿ ಗ್ರೇಟ್​ ಎಂಟರ್​ಟೈನರ್​ ಬ್ಯಾನರ್​ನಡಿ ಶ್ರೀನಿವಾಸ್​ ಹಾಗೂ ಸುರೇಖಾ ರಾಮ್​ಪ್ರಸಾದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಹಾಗೂ ಎರಡು ಬಿಟ್ಸ್​​ಗಳಿವೆ. ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮಾ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಲಂಕೆ ಸಿನಿಮಾದ ಮೋಷನ್ ಪಿಕ್ಚರ್
ಲಂಕೆ ಸಿನಿಮಾದ ಮೋಷನ್ ಪಿಕ್ಚರ್

ಲೂಸ್ ಮಾದ ಯೋಗಿ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಲೂಸ್ ಮಾದ ಯೋಗಿ ಕನಸಿನ ಸಿನಿಮಾ ‘ಕಂಸ’ ಪಾತ್ರಕ್ಕಾಗಿ ರೆಡಿಯಾಗುತ್ತಿದ್ದಾರೆ.

ಮಾದ ಯೋಗಿ
ಚಿತ್ರತಂಡದ ಜತೆ ಬರ್ತಡೇ ಸಂಭ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.