ಸಿನಿಮಾ ಎಂಬ ಮಾಯಾಲೋಕದಲ್ಲಿ ಪತ್ರಕರ್ತರು ಸಕ್ಸಸ್ ಆಗಿರೋದು ತುಂಬಾ ವಿರಳ. ಆದರೆ, ಹಿರಿಯ ಪತ್ರಕರ್ತ ಹಾಗೂ ಪೋಷಕ ನಟ ಸುರೇಶ್ ಚಂದ್ರ, ಈ ಎರಡು ಕ್ಷೇತ್ರದಲ್ಲಿ ಯಶಸ್ಸು ಕಂಡ ಅದೃಷ್ಟವಂತ ನಟ. ಹಿರಿಯ ನಟನಾಗಿ, ತನ್ನದೇ ಛಾಪು ಮೂಡಿಸಿದ ಲಿಂಗೇನಹಳ್ಳಿ ಸುರೇಶ್ ಚಂದ್ರ ಕೊರೊನಾಗೆ ಬಲಿಯಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
![suresh chandra](https://etvbharatimages.akamaized.net/etvbharat/prod-images/kn-bng-04-vishnuvardhange-cinema-maduva-kanasu-kandidda-suresh-chadnra-7204735_11062021164142_1106f_1623409902_402.jpg)
ಸುರೇಶ್ ಚಂದ್ರ 1952ರ ಫೆಬ್ರವರಿ 2 ರಂದು ಜನಿಸಿದರು. ನೋಡೋದಕ್ಕೆ ಪಕ್ಕಾ ತಮಿಳು ನಟನಂತೆ ಕಾಣುವ ಸುರೇಶ್ ಚಂದ್ರ, ಪತ್ರಕರ್ತರಾಗಿದ್ದವರು. ಅವರು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದೇ ಒಂದು ಇಂಟ್ರಸ್ಟ್ರಿಂಗ್ ಕಥೆ. ಸಂಜೆವಾಣಿ ದಿನಪತ್ರಿಕೆಯಲ್ಲಿ 37 ವರ್ಷಗಳ ಕಾಲ ಕೆಲಸ ಮಾಡಿದ್ದ, ಸುರೇಶ್ ಚಂದ್ರ ಮೂಲತಃ ಮಧುಗಿರಿ ತಾಲೂಕಿನ ಲಿಂಗೇನಹಳ್ಳಿಯಲ್ಲಿವರು. ಕಾಲೇಜು ದಿನಗಳಲ್ಲಿ ಸಾಹಿತ್ಯ ಪ್ರೇಮಿಯಾಗಿದ್ದ ಸುರೇಶ್ ಚಂದ್ರ ಬರವಣಿಗೆ ಗೀಳು ಪತ್ರಕರ್ತನಾಗುವಂತೆ ಮಾಡಿತ್ತು.
![suresh chandra](https://etvbharatimages.akamaized.net/etvbharat/prod-images/kn-bng-04-vishnuvardhange-cinema-maduva-kanasu-kandidda-suresh-chadnra-7204735_11062021164142_1106f_1623409902_1068.jpg)
80ರ ದಶಕದಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸಿದ್ದ ಸುರೇಶ್ ಚಂದ್ರ ಅವರು, ಚಂದನವನದ ಸ್ಟಾರ್ ನಟರುಗಳಾದ ಶಂಕರ್‌ನಾಗ್, ವಿಷ್ಣುವರ್ಧನ್, ಅಂಬರೀಶ್, ದೇವರಾಜ ಸೇರಿದಂತೆ ಹಲವು ಹಿರಿಯ ನಟರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.
![suresh chandra](https://etvbharatimages.akamaized.net/etvbharat/prod-images/kn-bng-04-vishnuvardhange-cinema-maduva-kanasu-kandidda-suresh-chadnra-7204735_11062021164142_1106f_1623409902_892.jpg)
ಒಂದು ದಿನ ನಟ, ನಿರ್ದೇಶಕ ಎಸ್ ನಾರಾಯಣ್, ಒತ್ತಡಕ್ಕೆ ಮಣಿದು ಒಂದು ಪತ್ರಿಕೆಯ ಸಂಪಾದಕರಾಗಿದ್ದ ಸುರೇಶ್ ಚಂದ್ರ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ಚೆಲುವಿನ ಚಿತ್ತಾರ ಚಿತ್ರದ ಮೂಲಕ ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ. ಈ ಚಿತ್ರದಲ್ಲಿ ಅಮೂಲ್ಯ ತಂದೆ, ಪೋತರಾಜ್ ಪಾತ್ರದಲ್ಲಿ ಸುರೇಶ್ ಚಂದ್ರ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಅಲ್ಲಿಂದ ಸುರೇಶ್ ಚಂದ್ರ, ಲೂಸ್ ಮಾದ ಯೋಗಿ ಅಭಿನಯದ ನಂದಾ ಲವ್ಸ್ ನಂದಿತಾ, ಜಂಗ್ಲಿ, ಶೈಲೂ, ಉಗ್ರಂ ಸೇರಿದಂತೆ ಬರೋಬ್ಬರಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಸುರೇಶ್ ಚಂದ್ರ ಅಭಿನಯಿಸಿದ್ದಾರೆ.
![suresh chandra](https://etvbharatimages.akamaized.net/etvbharat/prod-images/kn-bng-04-vishnuvardhange-cinema-maduva-kanasu-kandidda-suresh-chadnra-7204735_11062021164142_1106f_1623409902_65.jpg)
ಬರವಣಿಗೆ ಹಾಗೂ ನಟನೆ ಜೊತೆಗೆ ಸುರೇಶ್ ಚಂದ್ರ, ಅದ್ಭುತವಾಗಿ ಪಿಟೀಲು ನುಡಿಸುವ ಕಲೆಯನ್ನ ಹೊಂದಿದ್ದರಂತೆ. ಪಿಟೀಲು ಚೌಡಯ್ಯ ಅವ್ರ ಶಿಷ್ಯ ಕೆಂಪಣ್ಣ ಬಳಿ ವೈಲಿನ್ , ಸುರೇಶ್ ಚಂದ್ರ ಕಲಿತುಕೊಂಡಿದ್ರಂತೆ. ಆದರೆ, ಸುರೇಶ್ ಚಂದ್ರ ಮಗ ವಿನಯ್ ಚಂದ್ರ ನಮ್ಮ ತಂದೆ ಅದ್ಭುತ ಸಂಗೀತಗಾರ ಅನ್ನೋದು ಯಾರಿಗೂ ಗೊತ್ತಿಲ್ಲ ಅಂತಾರೆ. ಇಂದು ನಾನು ಸಂಗೀತ ನಿರ್ದೇಶಕನಾಗಿದ್ದೀನಿ ಅಂದರೆ ಅದಕ್ಕೆ, ನಮ್ಮ ತಂದೆ ಸ್ಫೂರ್ತಿ ಅಂತಾರೆ ವಿನಯ್ ಚಂದ್ರ.
ಇನ್ನು ವಿನಯ್ ಚಂದ್ರ ಹೇಳುವ ಹಾಗೇ, ತಂದೆ ಸುರೇಶ್ ಚಂದ್ರ ಮಹದಾಸೆ, ಆಸೆಯಾಗಿಯೇ ಉಳಿದು ಹೋಯಿತು ಅನ್ನೋದು. ಸುರೇಶ್ ಚಂದ್ರ ಡಾ. ವಿಷ್ಣುವರ್ಧನ್ ಸಿನಿಮಾಗೆ ನಿರ್ದೇಶನ ಮಾಡುವ ಕನಸು ಕಂಡಿದ್ರಂತೆ. ಈ ಚಿತ್ರಕ್ಕೆ ಭೀಷ್ಮ ಅಂತಾ ಟೈಟಲ್ ಕೂಡ ಇಟ್ಟಿದ್ರಂತೆ. ಹಾಗೇ ಈ ಸಿನಿಮಾದ ಕಥೆಯ ವಿಷ್ಣುವರ್ಧನ್ ಕೂಡ ಒಪ್ಪಿಕೊಂಡಿದ್ರಂತೆ. ಆದರೆ ಈ ಸಿನಿಮಾ ಸುರೇಶ್ ಚಂದ್ರ ನಿರ್ದೇಶನ ಮಾಡಲು ಸಾಧ್ಯವಾಗದೇ, ಕನಸು ಕನಸಾಗಿಯೇ ಆಗಿ ಉಳಿದು ಬಿಡ್ತು ಅನ್ನೋದು ವಿನಯ್ ಚಂದ್ರ ಅವ್ರ ಮಾತು.
![suresh chandra](https://etvbharatimages.akamaized.net/etvbharat/prod-images/kn-bng-04-vishnuvardhange-cinema-maduva-kanasu-kandidda-suresh-chadnra-7204735_11062021164142_1106f_1623409902_1046.jpg)
ಸಾಹಿತ್ಯಪ್ರಿಯ, ಭಾವಗೀತೆಗಳ ಬಗ್ಗೆ ಅಪಾರ ಆಸಕ್ತಿ. ಚಲನಚಿತ್ರಗಳಲ್ಲಿ ಅಭಿನಯಿಸಿ ಅಪಾರ ಜನಮನ್ನಣೆ ಪಡೆದಿದ್ದ, ಸುರೇಶ್ ಚಂದ್ರ ಪತ್ನಿ ಜಯಲಕ್ಷ್ಮಿ, ಹಿರಿಯ ಪುತ್ರ ಹಾಗೂ ಸಂಗೀತ ನಿರ್ದೇಶಕ ವಿನಯ್ ಚಂದ್ರ ಹಾಗೂ ಕಿರಿಯ ಪುತ್ರ ನಿರ್ದೇಶಕ ಅಭಯ್ ಚಂದ್ರ ಅವರನ್ನು ಅಗಲಿ ಬಾರದೂರಿಗೆ ತೆರಳಿದ್ದಾರೆ.