ETV Bharat / sitara

ಹುತಾತ್ಮ ಯೋಧರಿಗೆ ಹಾಡಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಗಾನ ಕೋಗಿಲೆ

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್​​ ಹಾಡಿನ ಮೂಲಕ ಶ್ರದ್ಧಂಜಲಿ ಸಲ್ಲಿಸಿದ್ದಾರೆ.

Lata Manheshkar paid tribute to the martyrs
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಹಾಡಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಗಾನ ಕೋಗಿಲೆ
author img

By

Published : Feb 15, 2020, 7:59 AM IST

ಕಳೆದ ವರ್ಷ ಫೆಬ್ರವರಿ 14ರಂದು ಪುಲ್ವಾಮದಲ್ಲಿ ಉಗ್ರನೊಬ್ಬ ಆತ್ಮಾಹುತಿ ದಾಳಿ ನಡೆಸಿದ್ದ. ಇದರ ಪರಿಣಾಮ ಭಾರತದ 40 ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರು. ಇದ್ರಿಂದ ದೇಶವೇ ಶೋಕ ಸಾಗರದಲ್ಲಿ ಮುಳುಗಿತ್ತು. ಈ ದುರ್ಘಟನೆ ನಡೆದು ನಿನ್ನೆಗೆ ಒಂದು ವರ್ಷ ಕಳೆದಿದೆ.

ಹುತಾತ್ಮ ವೀರ ಯೋಧರಿಗೆ ದೇಶದೆಲ್ಲೆಡೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್​​ ಹಾಡಿನ ಮೂಲಕ ಶ್ರದ್ಧಂಜಲಿ ಸಲ್ಲಿಸಿದ್ದಾರೆ.

  • " class="align-text-top noRightClick twitterSection" data="">

ಈ ಬಗ್ಗೆ ಟ್ವಿಟ್ಟರ್​​ನಲ್ಲಿ ತಾವು ಹಾಡಿರುವ 'ಜೋ ಸಮರ್​​ ಹೋ ಗಯೆ ಅಮರ್'​​ಎಂಬ ಹಾಡನ್ನು ಹಾಡಿ, ಕಳೆದ ವರ್ಷ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ನಮ್ಮ ಸಿಆರ್‌ಪಿಎಫ್​ನ ಸೈನಿಕರಿಗೆ ನನ್ನ ವಿನಮ್ರ ಗೌರವ ಎಂದು ಬರೆದಿದ್ದಾರೆ.

ಜೋ ಸಮರ್​​ ಹೋ ಗಯೆ ಅಮರ್ ಈ ಹಾಡನ್ನು ಜೈದೇವ್ ಸಂಯೋಜಿಸಿದ್ದು, ಪಿ.ಟಿ. ನರೇಂದ್ರ ಶರ್ಮಾ ಸಾಹಿತ್ಯ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.