ಭರತನಾಟ್ಯ ಕಲಾವಿದೆ, ಟಿ ವಿ ಧಾರಾವಾಹಿ ‘ಪದ್ಮಾವತಿ’ ನಟಿ, ಕನ್ನಡ ಸಿನಿಮಾಗಳಾದ ‘ಅಸತೋಮ ಸದ್ಘಮಯ, ಹೋಂ ಮಿನಿಸ್ಟರ್, ಮಂಗಳವಾರ ರಜಾ ದಿನ, ರಂಗನಾಯಕಿ ಚಿತ್ರಗಳಲ್ಲಿ ಅಭಿನಯಿಸಿದ್ದ ನಾಯಕಿ ಲಾಸ್ಯ ನಾಗರಾಜ್ ಈಗ ಐಟಂ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.

ನಾಯಕಿಯರಿಗೆ ಐಟಂ ಹಾಡು ಒಂದು ರೀತಿಯಲ್ಲಿ ನೆಮ್ಮದಿ ಸಹ ಅಂತ ಹಿರಿಯ ನಟಿಯರು ಹೇಳಿದ್ದಾರೆ. ಈಗ ಲಾಸ್ಯ ನಾಗರಾಜ್ ‘ಕೃಷ್ಣ ಟಾಕೀಸ್’ ಸಿನಿಮಾಕ್ಕೆ ‘ನೈಟಿ ಮಾತ್ರ ಹಾಕೋಬೇಡ ಮೇನಕಾ...ನಮಗೆ ನೈಂಟಿ ಹೊಡದಂಗೆ ಅಗ್ತದೆ ಜೀವಕ್ಕೆ... ಅನ್ನೋ ಹಾಡಿಗೆ ನಾಯಕ ಅಜಯ್ ರಾವ್ ಹಾಗೂ ಕೆಲವು ನೃತ್ಯಗಾರರ ಜೊತೆಯಲ್ಲಿ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಹೆಜ್ಜೆ ಹಾಕಿದ್ದಾರೆ. ಗೋಕುಲ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಗೋವಿಂದ ರಾಜು ಎ.ಹೆಚ್. ನಿರ್ಮಾಣ ಮಾಡುತ್ತಿರುವ ಸಿನಿಮಾ ಇದು. ಶ್ರೀಧರ್ ವಿ ಸಂಭ್ರಮ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಭೂಷಣ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಇದೆ ಹಾಡಿನಲ್ಲಿ ಹಾಸ್ಯ ಜೊತೆ ಹಾಸ್ಯನಟ ಚಿಕ್ಕಣ್ಣ ಸಹ ಹೆಜ್ಜೆ ಹಾಕಿದ್ದಾರೆ. ವಿಜಯಾನಂದ್ ಈ ಚಿತ್ರದ ನಿರ್ದೇಶಕರಾಗಿದ್ದು, ಅವರೇ ಕಥೆ, ಚಿತ್ರಕಥೆ ಸಂಭಾಷಣೆ ಸಹ ಬರೆದಿದ್ದಾರೆ. ಅಭಿಷೇಕ್ ಕಾಸರಗೋಡ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಮದನ್ ಹರಿಣಿ ಹಾಗೂ ಭೂಷಣ್ ನೃತ್ಯ, ವಿಕ್ರಮ್ ಸಾಹಸ ಈ ಚಿತ್ರಕ್ಕಿದೆ.
ಅಜಯ್ ರಾವ್ ಕೃಷ್ಣ ಟಾಕೀಸ್ ಚಿತ್ರದ ನಾಯಕ. ಕೃಷ್ಣ ಸಿರೀಸ್ನಲ್ಲಿ ಇದು ಐದನೇ ಸಿನಿಮಾ. ಅಪೂರ್ವ ರಾವ್, ಅಪೂರ್ವ ಮತ್ತು ಸಿಂಧು ಲೋಕನಾಥ್ ನಾಯಕಿಯರು, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಶೋಭರಾಜ್, ಮಂಡ್ಯ ರಮೇಶ್, ನಿರಂತ್, ಯಷ್ ಶೆಟ್ಟಿ, ಉಮೇಶ್, ಶ್ರೀನಿವಾಸ ಪ್ರಭು, ಲಕ್ಷ್ಮಿ ಗೌಡ, ಯಮುನ, ಧರ್ಮೇಂದ್ರ ಅರಸ್ ಸಹ ತಾರಾಗಣದಲ್ಲಿದ್ದಾರೆ.