ETV Bharat / sitara

ಲೇಡಿ ಗಾಗಾಳಿಂದ ಮಾಸ್ಕ್​ ಗೇಮ್​; ಈ ಕ್ರೊಮ್ಯಾಟಿಕಾ​ ಮಾಸ್ಕ್​ ಥೀಮ್​ ಏನು ಗೊತ್ತಾ? - ಲೇಡಿ ಗಾಗಾ

ಗಾಗಾ ತನ್ನ ಮಾಸ್ಕ್​ ಗೇಮ್​ಗೆ ಆಕೆಯ ಕೆಲ ಅದ್ಭುತ ಸ್ನೇಹಿತರನ್ನು ಟ್ಯಾಗ್​ ಮಾಡಿದ್ದಾಳೆ. ಅದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಮಿಚೆಲ್ ಒಬಾಮ ಟೋನಿ ಬೆನೆಟ್ ಸೇರಿದಂತೆ ಕೆಲವರ ಹೆಸರನ್ನು ನಮೂದಿಸಿದ್ದಾಳೆ.

gaga
ಲೇಡಿ ಗಾಗಾ
author img

By

Published : Jul 4, 2020, 2:03 PM IST

ನವದೆಹಲಿ: ಅಮೆರಿಕನ್​ ಗಾಯಕಿ ಲೇಡಿ ಗಾಗಾ 'ಮಾಸ್ಕ್ ಗೇಮ್' ಸವಾಲೊಂದನ್ನು ಆರಂಭಿಸಿದ್ದಾರೆ. ತನ್ನ ಕ್ರೊಮ್ಯಾಟಿಕಾ ಥೀಮ್​ನ ಮಾಸ್ಕ್ ಧರಿಸಿ ಅಭಿಯಾನಕ್ಕೆ ಮುಂದಡಿಯಿಟ್ಟಿದ್ದಾಳೆ.

ಅಂದಹಾಗೆ ಗಾಗಾ ಮೊದಲು ತಾನೇ ಮಾಸ್ಕ್ ಧರಿಸುವ ಮೂಲಕ ಚಾಲೆಂಜ್​ ಹಾಕಿಕೊಂಡಿದ್ದಾಳೆ. ಆಕೆಯ ಹೊಸ ಥೀಮ್​ ಮಾಸ್ಕ್ ಹೊಳೆಯುವ ಕಪ್ಪು ಮತ್ತು ಗುಲಾಬಿ ಬಣ್ಣದ್ದಾಗಿದ್ದು, ಅದು ಸ್ಪೈಕ್‌ಗಳು ಮತ್ತು ತೂಗಾಡುತ್ತಿರುವ ಬೆಳ್ಳಿಯ ಸರಪಳಿ ಹೊಂದಿದೆ. ಅಲ್ಲದೆ ಈ ವರ್ಷ ತನ್ನ ಕ್ರೊಮ್ಯಾಟಿಕಾ ಥೀಮ್​ನೊಂದಿಗೆ ಮಾಸ್ಕ್ ಸೇರಿಸಿಕೊಂಡು ಹೊಸ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದಾಳೆ.

ತನ್ನ ಕ್ರೊಮ್ಯಾಟಿಕಾ ಥೀಮ್​ನ ಮಾಸ್ಕ್​ನೊಂದಿಗೆ ಇನ್ಸ್​ಟಾಗ್ರಾಂನಲ್ಲಿ ಸೆಲ್ಫಿ ಹಂಚಿಕೊಂಡಿದ್ದಾರೆ. "ನೀವು ನೀವಾಗಿರಿ, ಆದರೆ ಮಾಸ್ಕ್​ ಧರಿಸಿ! ನಿಮಗೆ, ನಿಮ್ಮ ಸಮುದಾಯಕ್ಕೆ ಮತ್ತು ಜಗತ್ತಿಗೆ ವಿಧೇಯಳಾಗಿರುತ್ತೇನೆ ಎಂದು ನಾನು ನಂಬುತ್ತೇನೆ" ಎಂದು ಅದಕ್ಕೆ ಶೀರ್ಷಿಕೆ ನೀಡಿದ್ದಾಳೆ.

ಗಾಗಾ ತನ್ನ ಮಾಸ್ಕ್​ ಗೇಮ್​ಗೆ ಆಕೆಯ ಕೆಲ ಅದ್ಭುತ ಸ್ನೇಹಿತರನ್ನು ಟ್ಯಾಗ್​ ಮಾಡಿದ್ದಾಳೆ. ಅದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಮಿಚೆಲ್ ಒಬಾಮ, ಓಪ್ರಾ ವಿನ್ಫ್ರೇ, ಅರಿಯಾನಾ ಗ್ರಾಂಡೆ ಮತ್ತು ಟೋನಿ ಬೆನೆಟ್ ಸೇರಿದಂತೆ ಕೆಲವರ ಹೆಸರನ್ನು ನಮೂದಿಸಿದ್ದಾಳೆ.

ಈ ಸವಾಲನ್ನು ತ್ವರಿತವಾಗಿ ಕೈಗೆತ್ತಿಕೊಂಡ ಅಮೆರಿಕಾದ ಗಾಯಕ ಟೋನಿ ಬೆನೆಟ್, ದೊಡ್ಡ ಬಿಳಿ ಬಣ್ಣದ ಮಾಸ್ಕ್​ ಧರಿಸಿದ ಸೆಲ್ಫಿಯನ್ನು ಇನ್ಸ್​ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಮನೆಯಲ್ಲಿ ಮತ್ತು ಪ್ರಪಂಚದಾದ್ಯಂತ ನಮ್ಮೆಲ್ಲರ ಪ್ರೀತಿಪಾತ್ರರಿಗಾಗಿಯಾದರೂ ಮಾಸ್ಕ್ ಧರಿಸಿ. ನೀವು ಮಾಸ್ಕ್ ಏಕೆ ಧರಿಸುತ್ತೀರಿ ಎಂದು ಇತರರೊಡನೆ ಹಂಚಿಕೊಳ್ಳಿ, ಅದಕ್ಕೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ, ಎಂದು ಬರೆದುಕೊಂಡಿದ್ದಾರೆ ಬೆನೆಟ್.

ಕೋವಿಡ್​-19 ಸಾಂಕ್ರಾಮಿಕದ ಸಮಯದಲ್ಲಿ ಗಾಗಾ ತನ್ನ ಸೋಷಿಯಲ್​ ಮೀಡಿಯಾವನ್ನು ಸುರಕ್ಷತಾ ಕ್ರಮ ಅನುಸರಿಸಲು ವೇದಿಕೆಯಾಗಿ ಬಳಸಿಕೊಂಡು ಜಾಗೃತಿ ಮೂಡಿಸುವಲ್ಲಿ ಮುಂದಡಿಯಿಟ್ಟಿದ್ದಾಳೆ. ಸ್ವತಃ ಕ್ವಾರಂಟೈನ್​ ಆಗುವ ಮೂಲಕ ಕೊರೊನಾ ಅರಿವು ಮೂಡಿಸುತ್ತಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.