ETV Bharat / sitara

ಅಡಿಕೆ ಸುಲಿದ 'ಪುಟ್ಟಗೌರಿ' ನಟಿ: ವಿಡಿಯೋ ನೋಡಿ.. - kshamisi nimma khateyalli hanavilla shooting

ಸಿನಿಮಾಕ್ಕಾಗಿ ರಂಜಿನಿ ಅಡಿಕೆ ಸುಲಿಯುವುದನ್ನು ಕಲಿಯುತ್ತಿದ್ದಾರೆ. 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರದಲ್ಲಿ ದಿಗಂತ್​ ಮತ್ತು ಐಂದ್ರಿಯಾ ರೈ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಅಡಿಕೆ ಬೆಳೆಗಾರನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

kshamisi nimma khateyalli hanavilla shooting
ಅಡಿಕೆ ಸುಲಿದ 'ಪುಟ್ಟಗೌರಿ' ನಟಿ : ವಿಡಿಯೋ ನೋಡಿ
author img

By

Published : Dec 4, 2020, 5:56 PM IST

ಕನ್ನಡದಲ್ಲಿ ಜನಪ್ರೀಯತೆ ಪಡೆದ ಪುಟ್ಟಗೌರಿ ಮದುವೆ ಮತ್ತು ಆಕಾಶ ದೀಪ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ರಂಜಿನಿ ರಾಘವನ್​ ಸದ್ಯ ಕನ್ನಡತಿ ಧಾರಾವಾಹಿ ಮೂಲಕ ಹೆಸರು ಮಾಡುತ್ತಿದ್ದಾರೆ. ಈಗಾಗಲೇ ಕಿರುತೆರೆಯಿಂದ ಹಿರಿತೆರೆಗೆ ಪದಾರ್ಪಣೆ ಮಾಡಿರುವ ಈ ನಟಿ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಸಿನಿಮಾದ ಶೂಟಿಂಗ್​ ಸದ್ಯ ಮಲೆನಾಡಿನ ಸಾಗರದ ಪುಟ್ಟ ಹಳ್ಳಿಯಲ್ಲಿ ನಡೆಯುತ್ತಿದ್ದು, ಸಿನಿಮಾಕ್ಕಾಗಿ ರಂಜಿನಿ ಅಡಿಕೆ ಸುಲಿಯುವುದನ್ನು ಕಲಿಯುತ್ತಿದ್ದಾರೆ. ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದಲ್ಲಿ ದಿಗಂತ್​ ಮತ್ತು ಐಂದ್ರಿಯಾ ರೈ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಅಡಿಕೆ ಬೆಳೆಗಾರನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇಲ್ಲಿ ನೋಡಿ: ಸಂಜನಾ ಜಾಮೀನು ಅರ್ಜಿ ವಿಚಾರಣೆ ಪೂರ್ಣ; ಡಿ.7ಕ್ಕೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಸಾಗರದ ಪುಟ್ಟಹಳ್ಳಿಯಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಆ ವೇಳೆ ರಂಜಿನಿ ಅಡಿಕೆ ಸುಲಿದಿದ್ದಾರೆ. ತಾವು ಅಡಿಕೆ ಸುಲಿದಿರುವ ವಿಡಿಯೋವನ್ನು ಫೇಸ್​​​ಬುಕ್​​ನಲ್ಲಿ ಹಾಕಿರುವ ನಟಿ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸೆಟ್​​​ನಲ್ಲಿ ಮೊದಲ ಬಾರಿಗೆ ಅಡಿಕೆ ಸುಲಿಯಲು ಕಲಿಯುತ್ತಿದ್ದೇನೆ. ತಂಬಾ ಪ್ರಯತ್ನಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

  • " class="align-text-top noRightClick twitterSection" data="">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.