ಸ್ಯಾಂಡಲ್ವುಡ್ ಅಜಯ್ ರಾವ್ ಅಭಿನಯದ 'ಕೃಷ್ಣ ಟಾಕೀಸ್' ಚಿತ್ರದ ಶೂಟಿಂಗ್ ಭರದಿಂದ ಸಾಗುತಿದೆ. ನಿನ್ನೆ ರಾತ್ರಿ ಬೆಂಗಳೂರಿನ ಹೆಸರಘಟ್ಟ ಬಳಿ ಆಕ್ಷನ್ ಸಿಕ್ವೇನ್ಸ್ ಶೂಟ್ ಮಾಡಿದ್ದು, ಮೈ ನಡುಗಿಸುವ ಸ್ಟಂಟ್ ಮಾಡಲಾಗಿದೆ. ಈ ವೇಳೆ ನಾಲ್ಕೈದು ಬಾರಿ ಕಾರನ್ನು ಪಲ್ಟಿ ಹೊಡೆಸಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ ಎಂದು ಕೆಲವು ಸುದ್ದಿ ವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿನಿಮಾ ನಿರ್ದೇಶಕ ಆನಂದ ಪ್ರಿಯಾ, ಆಕ್ಸಿಡೆಂಟ್ ಸೀನ್ ನೋಡಿದ್ರೆ ಮೈ ಜುಮ್ಮೆನ್ನುತ್ತೆ. ತುಂಬಾ ವೇಗವಾಗಿ ಬಂದ ಕಾರು ಸುಮಾರು ನಾಲ್ಕೈದು
ಪಲ್ಟಿ ಹೊಡೆದಿದೆ. ಆದ್ರೂ ಕೂಡ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಈ ಸೀನ್ ತುಂಬಾ ಅದ್ಭುತವಾಗಿ ಮತ್ತು ನ್ಯಾಚುರಲ್ ಆಗಿ ಕಾಣುವಂತೆ ಶೂಟ್ ಮಾಡಲಾಗಿದೆ ಎಂದಿದ್ದಾರೆ.
ಈ ಸ್ಟಂಟ್ಅನ್ನು ಕೆಜಿಎಫ್ ಚಿತ್ರಕ್ಕೆ ಸ್ಟಂಟ್ ಮಾಡಿದ್ದ ಸಾಹಸ ನಿರ್ದೇಶಕ ವಿಕ್ರಂ ಕಂಪೋಸ್ ಮಾಡಿದ್ದು, ತುಂಬಾ ನ್ಯಾಚುರಲ್ ಆಗಿ ಯಾರಿಗೂ ತೊಂದರೆ ಆಗದ ರೀತಿ ಶೂಟ್ ಮಾಡಿ
ಕೊಟ್ಟಿದ್ದಾರೆ. ಶೂಟಿಂಗ್ನಲ್ಲಿ ನಾಯಕ ಅಜಯ್ ರಾವ್ ಹಾಗೂ ಸಹ ನಟರಾದ ಅಪೂರ್ವ ಹಾಗೂ ನಾಗರಾಜ್ ಇದ್ದು, ಯಾರಿಗೂ ಏನೂ ಆಗದ ರೀತಿ ಮುಂಜಾಗ್ರತೆ ವಹಿಸಿ ಶೂಟ್ ಮಾಡಿದ್ದೇವೆ ಎಂದು ನಿರ್ದೇಶಕರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.