ಈ ಕೊರೊನಾ ಎಂಬ ಹೆಮ್ಮಾರಿಗೆ ದೇಶ, ರಾಜ್ಯ, ನಗರಗಳು ತತ್ತರಿಸಿ ಹೋಗಿವೆ. ಈ ಹೆಮ್ಮಾರಿಯನ್ನ ತಡೆಗಟ್ಟಲು ಆಯಾ ರಾಜ್ಯ ಸರ್ಕಾರಗಳು ಸೆಮಿ ಲಾಕ್ಡೌನ್ ಮಾಡಿವೆ.
ಇಂತಹ ಸಮಯದಲ್ಲಿ ಸಿನಿಮಾ ರಂಗದ ತಾರೆಯರು ಆದ ಉಪೇಂದ್ರ, ಸುದೀಪ್, ಶಿವರಾಜ್ ಕುಮಾರ್, ರಾಗಿಣಿ ದ್ವಿವೇದಿ, ಭುವನ್ ಹಾಗೂ ಹರ್ಷಿಕಾ ಪೂಣಚ್ಚ ಒಂದು ಹೊತ್ತಿನ ಊಟಕ್ಕೆ ಕಷ್ಟ ಪಡುತ್ತಿರುವ ಕೂಲಿ ಕಾರ್ಮಿಕರಿಗೆ ಹಾಗೂ ಸಿನಿಮಾ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಈಗ ಇದೇ ಹಾದಿಯಲ್ಲಿ ನಟ ಮನುರಂಜನ್ ರವಿಚಂದ್ರನ್ ಹೆಜ್ಜೆ ಇಟ್ಟಿದ್ದಾರೆ.
ಸಾಹೇಬನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕ್ರೇಜಿ ಸ್ಟಾರ್ ಪುತ್ರ ಮನುರಂಜನ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮುಗಿಲುಪೇಟೆ ಸಿನಿಮಾ ಜಪ ಮಾಡುತ್ತಿರುವ ಮನುರಂಜನ್, ಕೋವಿಡ್ ಸಮಯದಲ್ಲಿ ತಮ್ಮ ಮುಗಿಲುಪೇಟೆ ಸಿನಿಮಾದಲ್ಲಿ ಕೆಲಸ ಮಾಡಿರುವ ಲೈಟ್ಸ್ ಬಾಯ್ಸ್, ಕ್ಯಾಮರಾ ಮ್ಯಾನ್ ಅಸಿಸ್ಟೆಂಟ್ಗಳು, ವಾಹನ ಚಾಲಕರಿಂದ ಹಿಡಿದು ಪ್ರತಿಯೊಬ್ಬರಿಗೂ ಐದು ಸಾವಿರ ರೂಪಾಯಿ ನೀಡುವ ಮೂಲಕ ಕಷ್ಟದಲ್ಲಿದವರಿಗೆ ಸಹಾಯ ಮಾಡಿದ್ದಾರೆ.
ಮನುರಂಜನ್ ಈ ಸಿನಿಮಾದಲ್ಲಿ ಮೂರು ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮನುಗೆ ನಾಯಕಿಯಾಗಿ ಖಯಾದ್ ಲೋಹರ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಭರತ್ ನಿರ್ದೇಶಿಸುತ್ತಿದ್ದಾರೆ.
ಕೊರೊನಾ ಸಮಯದಲ್ಲಿ ತಮ್ಮ ಮುಗಿಲುಪೇಟೆ ಚಿತ್ರದ ಕಾರ್ಮಿಕರ ಸಹಾಯಕ್ಕೆ ಬಂದಿರುವ ಮನುರಂಜನ್ ಬಗ್ಗೆ ಚಿತ್ರತಂಡ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.