ETV Bharat / sitara

ಪ್ರೇಮ್​ ಮುಂದಿನ ಸಿನಿಮಾ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮದವರ ಮೇಲೆ ರಕ್ಷಿತ ಗರಂ! - undefined

ನಟಿ, ನಿರ್ಮಾಪಕಿ ರಕ್ಷಿತ ಪ್ರೇಮ್​ ಮಾಧ್ಯಮದವರ ಮೇಲೆ ಕೋಪಗೊಂಡಿದ್ದಾರೆ. ಪ್ರೇಮ್ ಅವರ ಮುಂದಿನ ಸಿನಿಮಾ 'ಕಲಿ ' ಬಗ್ಗೆ ಕೇಳಿದ ಪ್ರಶ್ನೆಗೆ ರಕ್ಷಿತಾ ಗರಂ ಆಗಿ ತಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲವೆನ್ನುವಂತೆ ವರ್ತಿಸಿದ್ದಾರೆ.

ರಕ್ಷಿತ ಪ್ರೇಮ್​​
author img

By

Published : Feb 15, 2019, 7:37 PM IST

ರಕ್ಷಿತ ಗರಂ
ವಿಲನ್ ಸಿನಿಮಾ ಬಿಡುಗಡೆ ವೇಳೆ ನಿರ್ದೇಶಕ ಪ್ರೇಮ್ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಹೇಳಿಕೊಂಡಿದ್ದರು. ಇಂದು ಇದರ ಬಗ್ಗೆ ರಕ್ಷಿತ ಅವರನ್ನು ಪ್ರಶ್ನಿಸಿದಾಗ ಅವರು ಮಾಧ್ಯಮದವರ ಮೇಲೆ ಸಿಡಿಮಿಡಿಗೊಂಡಿದ್ದಾರೆ.
undefined

ಬಾಲಿವುಡ್​, ಕಾಲಿವುಡ್, ಟಾಲಿವುಡ್​​, ಮಾಲಿವುಡ್ ಸೇರಿ ಭಾರತೀಯ ಚಿತ್ರರಂಗದ 6 ಪ್ರಖ್ಯಾತ ನಾಯಕರನ್ನು ಕರೆತಂದು ಮುಂದಿನ ಸಿನಿಮಾ ಮಾಡುವುದಾಗಿ 'ವಿಲನ್' ಚಿತ್ರ ಬಿಡುಗಡೆ ವೇಳೆ ಪ್ರೇಮ್ ಹೇಳಿಕೊಂಡಿದ್ದರು. ಮೊನ್ನೆ ಕೂಡಾ ಫೇಸ್​​ಬುಕ್ ಲೈವ್​​ನಲ್ಲೂ ಪ್ರೇಮ್ ಈ ವಿಷಯ ಹೇಳಿಕೊಂಡಿದ್ದರು. ಇಂದು ಮಾಧ್ಯಮದವರು ಈ ಬಗ್ಗೆ ರಕ್ಷಿತ ಅವರನ್ನು ಕೇಳಿದಾಗ ತಮ್ಮ ಪತಿಗೂ, ಅವರ ಸಿನಿಮಾಗೂ ತಮಗೂ ಯಾವ ಸಂಬಂಧವೇ ಇಲ್ಲದಂತೆ ರಕ್ಷಿತ ಗರಂ ಆದರು.

'ನೀವೆಲ್ಲಾ ಸ್ಟುಪಿಡ್​​​ಗಳಂತೆ ಪ್ರಶ್ನೆ ಕೇಳಿದರೆ ನನಗೆ ಉತ್ತರಿಸಲು ಆಗಲ್ಲ, ನನಗೆ ಈ ಬಗ್ಗೆ ಗೊತ್ತಿಲ್ಲ. ಈ ಪ್ರಶ್ನೆಯನ್ನು ನೀವು ಪ್ರೇಮ್ ಅವರ ಬಳಿಯೇ ಕೇಳಬೇಕು' ಎಂದು ರಕ್ಷಿತ ಪ್ರತಿಕ್ರಿಯಿಸಿದ್ದಾರೆ. ವಿಲನ್ ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದವರ ಮೇಲಿನ ಕೋಪವನ್ನು ರಕ್ಷಿತ ಮಾಧ್ಯಮದವರ ಮೇಲೆ ತೋರಿದ್ದಾರೆ ಎನ್ನಲಾಗಿದೆ.

Intro:ನಟ ನಿರ್ದೇಶಕ ಪ್ರೇಮ್ ಆರು ಜನ ಬಿಗ್ ಸ್ಟಾರ್ ಗಳನ್ನು ಹಾಕಿಕೊಂಡು ಕಲಿ ಸಿನಿಮಾ ಮಾಡುವುದಾಗಿ ಕಳೆದ ಎರಡು ದಿನಗಳ ಹಿಂದೆ ಫೇಸ್ ಬುಕ್ ಲೈವ್ ನಲ್ಲಿ ತಿಳಿಸಿದರು. ಪ್ರೇಮ್ ಅವರ ಕಲಿ ಚಿತ್ರದ ಬಗ್ಗೆ ಅವರ ಪತ್ನಿ ರಕ್ಷಿತಾ ಅವರ ಬಳಿ ಕೇಳಿದ್ದಕ್ಕೆ ರಕ್ಷಿತಾ ಪ್ರೇಮ್ ಮಾಧ್ಯಮಗಳ ವಿರುದ್ಧ ಫುಲ್ ಗರಂ ಆದರು.

Body:ವಿಲನ್ ಸಿನಿಮಾದ ಬಗ್ಗೆ ನೆಗೆಟಿವ್ ಟ್ರೋಲ್ ಆಗಿದ್ದರಿಂದ ರಕ್ಷಿತಾ ಪ್ರೇಮ್ ಅವರಿಗೆ ಅದರ ಕೋಪ ಇನ್ನೂ ಹೋಗಿಲ್ಲ ಎನ್ನುವ ರೀತಿ ರಕ್ಷಿತಾ ಪ್ರೇಮ್ ಮಾಧ್ಯಮಗಳ ಮುಂದೆ ವರ್ತಿಸಿದರು ಅಲ್ಲದೆ ಅವರ ಪತಿ ಪ್ರೇಮ್ ಸಿನಿಮಾದ ವಿಚಾರದ ಬಗ್ಗೆ ಸಂಬಂಧವೇ ಇಲ್ಲ ಎನ್ನುವಂತೆ ಮಾಧ್ಯಮಗಳಿಗೆ ಉತ್ತರಿಸಿದರು. ಪ್ರೇಮ್ ಸಿನಿಮಾದ ಬಗ್ಗೆ ಕೇಳಿದ ಪ್ರಶ್ನೆ ಸ್ಟುಪಿಡ್ ಅನಿಸಿದೆ ಎಂದ ರಕ್ಷಿತಾ ಪ್ರೇಮ್

Conclusion:ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದವರ ಮೇಲಿನ ಕೋಪವನ್ನು ಮಾಧ್ಯಮದವರ ಮೇಲೆ ಹಾಕಿದ ರಕ್ಷಿತಾ ಪ್ರೇಮ್. ಒಟ್ನಲ್ಲಿ ರಕ್ಷಿತಾ ಪ್ರೇಮ್ ಅವರಿಗೆ ನಿರ್ದೇಶಕ ಪ್ರೇಮ್ ಅವರ ಮುಂದಿನ ಸಿನಿಮಾದಲ್ಲಿ ಆರು ಜನ ಸ್ಟಾರ್ ನಟರ ನಟಿಸುತ್ತಾರೆ ಎನ್ನುವ ವಿಚಾರವೇ ಸ್ಟುಪಿಡ್ ಆಗಿದೆ ಎನ್ನುವ ರೀತಿ ಅನ್ನಿಸಿದ್ದು ನಿರ್ದೇಶಕ ಪ್ರೇಮ್ ಅವರ ನಿರ್ದೇಶನದ ಮೇಲೆ ರಕ್ಷಿತಾ ಪ್ರೇಮ್ ಅವರಿಗೆ ನಂಬಿಕೆ ಇಲ್ಲ ಎನ್ನುವ ರೀತಿ ಮಾಧ್ಯಮಗಳ ಮುಂದೆ ವರ್ತಿಸಿದರು.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.