ETV Bharat / sitara

'ಬಹದ್ದೂರ್ ಗಂಡು' ಚಿತ್ರದಲ್ಲಿ 'ಕನ್ನಡತಿ'ಯ ಕಿರಣ್ ರಾಜ್ ಭರ್ಜರಿ ಸಾಹಸ - ಕಿರಣ್ ರಾಜ್ ದೊಣ್ಣೆ ವರಸೆ

'ಕನ್ನಡತಿ' ಧಾರಾವಾಹಿ ಮೂಲಕ ಮನೆ ಮಾತಾಗಿರುವ ನಟ ಕಿರಣ್‌ ರಾಜ್‌ ಇದೀಗ ಬಹದ್ದೂರ್‌ ಗಂಡು ಸಿನಿಮಾದಲ್ಲಿ ನಟಿಸುತ್ತಿದ್ದು, ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Kiran Raj
ಕಿರಣ್ ರಾಜ್ ಭರ್ಜರಿ ಸಾಹಸ
author img

By

Published : Jan 26, 2022, 8:39 AM IST

ಕಿರುತೆರೆಯಿಂದ ಬಂದ ಸಾಕಷ್ಟು ನಟ, ನಟಿಯರು ಬೆಳ್ಳಿ ತೆರೆ ಮೇಲೆ ಸ್ಟಾರ್​ಗಳಾಗಿ ಮಿಂಚಿದ್ದಾರೆ. ಇದೀಗ 'ಕನ್ನಡತಿ' ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿರುವ ಕಿರಣ್ ರಾಜ್ ಬಿಗ್ ಸ್ಕ್ರೀನ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, 'ಬಹದ್ದೂರ್ ಗಂಡು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಹೌದು, 'ಬಹದ್ದೂರ್ ಗಂಡು' ಸಿನಿಮಾದಲ್ಲಿ ಕಿರಣ್ ರಾಜ್ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ. ಸದ್ಯಕ್ಕೆ ಚಿತ್ರದ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ನಂದಿ ಬೆಟ್ಟದ ಬಳಿ ಮಾಡಲಾಗಿದೆ. ನಾಯಕ ಕಿರಣ್ ರಾಜ್, ಈ ಸಾಹಸ ಸನ್ನಿವೇಶಕ್ಕಾಗಿ ಸುಮಾರು ಮೂರು ತಿಂಗಳಿಂದ ದೊಣ್ಣೆ ವರಸೆ ಕಲಿತಿದ್ದರಂತೆ. ಕಿರಣ್ ರಾಜ್ ಹಾಗೂ ಶಬರಿ ಮಂಜು ಅವರ ನಡುವೆ ಈ ಸಾಹಸ ದೃಶ್ಯ ನಡೆಯುತ್ತದೆ.

ಕಿರಣ್ ರಾಜ್ ಭರ್ಜರಿ ಸಾಹಸ, Kiran Raj
ಕಿರಣ್ ರಾಜ್ ಭರ್ಜರಿ ಸಾಹಸ

ವಿನೋದ್ ಅವರ ಸಾಹಸ ನಿರ್ದೇಶನದಲ್ಲಿ ಅದ್ಧೂರಿಯಾಗಿ ಈ ಸನ್ನಿವೇಶ ಮೂಡಿ ಬಂದಿದೆ. ನಮ್ಮ ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿದೆ. ಈ ಸಾಹಸ ಸನ್ನಿವೇಶದಲ್ಲಿ ದೊಣ್ಣೆ ವರಸೆ ಪ್ರಮುಖ ಆಕರ್ಷಣೆ. ಇದಕ್ಕಾಗಿ ನಾಯಕ ಕಿರಣ್ ರಾಜ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಎಂದು ನಿರ್ದೇಶಕ ಪ್ರಸಿದ್ದ್ ತಿಳಿಸಿದ್ದಾರೆ.

ಕಿರಣ್ ರಾಜ್ ಜೋಡಿಯಾಗಿ ಯಶಾ ಶಿವಕುಮಾರ್ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ರಮೇಶ್ ಭಟ್, ವೀಣಾ ಸುಂದರ್, ಜಯಶ್ರೀ ರಾಜ್, ರಾಕೇಶ್ ರಾಜ್, ಸುರೇಖ, ನಾಗೇಶ್ ರೋಹಿತ್, ಶಬರಿ ಮಂಜು, ಮಡೆನೂರ್ ಮನು, ಗೋವಿಂದೇ ಗೌಡ, ವಾಣಿ, ರಂಜಿತ್ ಖನ್ನಾ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಕಿರಣ್ ರಾಜ್ ಭರ್ಜರಿ ಸಾಹಸ
ಕಿರಣ್ ರಾಜ್ ಭರ್ಜರಿ ಸಾಹಸ

ಪ್ರಸಿದ್ದ್ ಸಿನಿಮಾಸ್ ಮತ್ತು ರಮೇಶ್ ರೆಡ್ಡಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ, ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ, ವೆಂಕಿ ಯುಡಿವಿ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಬಹುಬೇಗನೆ 'ಬಹದ್ದೂರ್ ಗಂಡು' ಚಿತ್ರೀಕರಣ ಮುಗಿಸಿ ಈ ವರ್ಷದಲ್ಲಿ ಬಿಡುಗಡೆ ಆಗೋದಕ್ಕೆ ಸಜ್ಜಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.