‘83’ ಕನ್ನಡದಲ್ಲಿ ಡಬ್ ಮಾಡಲಾದ ಚಿತ್ರವನ್ನು ಕ್ರಿಕೆಟ್ ಪ್ರೇಮಿ, ನಟ, ನಿರ್ದೇಶಕ, ನಿರ್ಮಾಪಕ ಕಿಚ್ಚ ಸುದೀಪ್ ಅವರು ತೆರೆಗೆ ಅರ್ಪಿಸುತ್ತಿದ್ದಾರೆ ಎಂಬುದು ಈ ಕ್ಷಣದ ಗೌರವಾನ್ವಿತ ವಿಷಯ. ಇದರೊಂದಿಗೆ ಕಿಚ್ಚ ಸುದೀಪ್ ರಿಲಯನ್ಸ್ ಎಂಟರ್ಟೈನ್ಮೆಂಟ್ ಜೊತೆ ಸೇರಿ ಬಹು ನಿರೀಕ್ಷಿತ ಸಿನಿಮಾ ‘83’ ತೆರೆಗೆ ಅರ್ಪಣೆ ಮಾಡುತ್ತಿದ್ದಾರೆ.
ಕಳೆದ ಎರಡೂವರೆ ದಶಕಗಳಲ್ಲಿ ಕಿಚ್ಚ ಸುದೀಪ್ ಅಗಾದವಾದ ಪ್ರತಿಭೆ ಬಗ್ಗೆ ಎಲ್ಲರಿಗೂ ಗೊತ್ತು. ಅವರು ಭಾರತೀಯ ಚಿತ್ರರಂಗದ ಅತ್ಯುತ್ತಮ ನಟ, ಬರಹಗಾರ, ನಿರ್ಮಾಪಕ, ನಿರ್ದೇಶಕ, ಸಿಸಿಎಲ್ ಮೂಲಕ ತಮ್ಮ ನೆಚ್ಚಿನ ಕ್ರೀಡೆ ಕ್ರಿಕೆಟ್ ಪ್ರೇಮವನ್ನೂ ಜೀವಂತವಾಗಿರಿಸಿದ್ದಾರೆ. ರಾಜ್ಯ ಪ್ರಶಸ್ತಿ, ನಂದಿ ಪ್ರಶಸ್ತಿ, ಸೈಮಾ ಪ್ರಶಸ್ತಿ, ಟೊರಂಟೊ ಹಾಗೂ ಮ್ಯಾಡ್ರಿಡ್ ಫಿಲ್ಮ್ ಫೆಸ್ಟಿವಲ್ ಅಲ್ಲಿಯೂ ಇವರ ಚಿತ್ರಗಳು ಪ್ರದರ್ಶನವಾಗಿವೆ.
![83 movie kannada dub, Sudeep presented kannada 83 movie, Kannada 83 movie release date, Kannada 83 movie release on december 24, Fan India movie, 83 ಸಿನಿಮಾ ಕನ್ನಡಕ್ಕೆ ಡಬ್, ಕನ್ನಡದ 83 ಚಿತ್ರ ತೆರೆಗೆ ಅರ್ಪಿಸಲಿದ್ದಾರೆ ಸುದೀಪ್, ಕನ್ನಡದ 83 ಚಿತ್ರದ ಬಿಡುಗಡೆ ದಿನಾಂಕ, ಡಿಸೆಂಬರ್ 24 ಕನ್ನಡದ 83 ಚಿತ್ರ ರಿಲೀಸ್, ಫ್ಯಾನ್ ಇಂಡಿಯಾ ಮೂವಿ,](https://etvbharatimages.akamaized.net/etvbharat/prod-images/kn-bng-07-kannadadhali-bollywood-83cinemavanna-release-madatha-eddhare-sudeep-7204735_29112021222956_2911f_1638205196_121.jpg)
ಕನ್ನಡದಲ್ಲಿ ತೆರೆ ಕಾಣುತ್ತಿರುವ ‘83’ ಸಿನಿಮಾವನ್ನು ಅರ್ಪಿಸಲು ಸಂತಸ ಆಗುತ್ತಿದೆ. ಇದೊಂದು ನಂಬಲಾಗದ ಬಹುದೊಡ್ಡ ಕ್ರಿಕೆಟ್ ಚರಿತ್ರೆ ಪುಟಗಳಲ್ಲಿ ಸೇರಿರುವ 1983 ವಿಶ್ವಕಪ್ ಚಿತ್ರ. 1983ರಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ದ ಗೆದ್ದ ಏಕದಿನ ವಿಶ್ವಕಪ್ ವಿಷಯ ಕುರಿತಾದ ಚಿತ್ರ ಇದಾಗಿದೆ. ಕ್ರಿಕೆಟ್ ಎಂಬುದು ಭಾರತೀಯರಿಗೆ ಒಂದು ಧರ್ಮವೇ ಆಗಿ ಹೋಗಿರುವಾಗ, ಈ ನೈಜ ಕಥೆಯನ್ನು ತೆರೆಯ ಮೇಲೆ ತಂದಿರುವುದಕ್ಕೆ ಅಭಿನಂದನೆಗಳು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಓದಿ: ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ ಹೀಗಿದೆ
ಕಬೀರ್ ಖಾನ್ ನಿರ್ದೇಶನ ಹಾಗೂ ನಿರ್ಮಾಪಕ ‘83’ ಕನ್ನಡ ಚಿತ್ರವನ್ನು ಕಿಚ್ಚ ಸುದೀಪ್ ತೆರೆಗೆ ಅರ್ಪಣೆ ಮಾಡುತ್ತಾ ಇರುವುದು ಬಹಳ ಸಂತೋಷದ ವಿಚಾರ ಎನ್ನುತ್ತಾರೆ. ಕಿಚ್ಚ ಸುದೀಪ್ ಅವರು ನಮ್ಮ ತಂಡದೊಂದಿಗೆ ಸೇರಿಕೊಂಡಿರುವುದರಿಂದ ‘83’ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುವುದು ನಿಶ್ಚಿತ ಎಂದು ಕಬೀರ್ ಖಾನ್ ಭಾವಿಸಿದ್ದಾರೆ.
ರಣವೀರ್ ಸಿಂಗ್ ‘83’ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸಿದ್ದಾರೆ. ತಾಹೀರ್ ರಾಜ್ ಭಾಸಿನ್, ಜೀವ, ಸಾಕಿಬ್ ಸಲೀಂ, ಜತಿನ್ ಸಾರ್ಣ, ಚಿರಾಗ್ ಪಾಟಿಲ್, ದಿನಕರ್ ಶರ್ಮ, ನಿಶಾಂತ್ ದಾಹಿಯ, ಹಾರ್ಡಿ ಸಂಧು, ಸಾಹಿಲ್ ಖಟ್ಟರ್, ಅಮ್ಮಿ ವಿರ್ಕ್, ಅದಿನಾಥ್ ಕೊತಾರೆ, ಧೈರ್ಯ ಕರ್ವ, ಆರ್ ಬದ್ರಿ ಹಾಗೂ ಪಂಕಜ್ ತೃಪತಿ ತಾರಾಗಣದಲ್ಲಿ ಇದ್ದಾರೆ. ಒಂದು ವಿಶೇಷ ಪಾತ್ರದಲ್ಲಿ ಜನಪ್ರಿಯ ಭಾರತೀಯ ನಟಿ ದೀಪಿಕಾ ಪಡುಕೋಣೆ ಕ್ರಿಕೆಟಿಗ ಕಪಿಲ್ ದೇವ್ ಪತ್ನಿ ರೋಮಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕಿಚ್ಚ ಸುದೀಪ್ ಹಾಗೂ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಅರ್ಪಿಸುತ್ತಿರುವ ಕಬೀರ್ ಖಾನ್ ಫಿಲ್ಮ್ಸ್ ‘83’ ಚಿತ್ರ ನಿರ್ಮಾಪಕರು ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣು ವರ್ಧನ್ ಇಂದುರಿ, ಸಾಜಿದ್ ನಾಡಿಯದ್ವಾಲ, ಫಾಂಟಮ್ ಫಿಲ್ಮ್ಸ್ ಹಾಗೂ 83 ಫಿಲ್ಮ್ ಲಿಮಿಟೆಡ್ ಆಗಿದ್ದಾರೆ. ಕನ್ನಡದ 83 ಸಿನಿಮಾವನ್ನು ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ವಿತರಣೆಯ ಜವಾಬ್ದಾರಿಯನ್ನು ಡಿಸೆಂಬರ್ 24, 2021 ರಿಂದ ಹೊತ್ತುಕೊಂಡಿದೆ.