ETV Bharat / sitara

'ವಿಕ್ರಾಂತ್​ ರೋಣ' ನೃತ್ಯ ನಿರ್ದೇಶಕ ಜಾನಿ ಮಾಸ್ಟರ್​ಗೆ ಥಾರ್ ಕಾರು​ ಗಿಫ್ಟ್ ನೀಡಿದ ಕಿಚ್ಚ - ಜಾನಿ ಮಾಸ್ಟರ್​ಗೆ ಥಾರ್ ಕಾರು​ ಗಿಫ್ಟ್ ನೀಡಿದ ಕಿಚ್ಚ ಸುದೀಪ್​

ನೃತ್ಯ ನಿರ್ದೇಶಕ ಜಾನಿ ಮಾಸ್ಟರ್​ಗೆ ಸುದೀಪ್​ ಮಹಿಂದ್ರಾ ಥಾರ್ ಕಾರು ಗಿಫ್ಟ್​ ನೀಡಿದ್ದಾರೆ. ಈ ಫೋಟೋ ಹಂಚಿಕೊಂಡಿರುವ ಜಾನಿ ಅವರು ಕಿಚ್ಚನಿಗೆ ಧನ್ಯವಾದ ಹೇಳಿದ್ದಾರೆ. ಈ ಪೋಸ್ಟ್​ ನೋಡಿದ ಅಭಿಮಾನಿಗಳು ಕಿಚ್ಚ ಅವರನ್ನು ಹೊಗಳಿದ್ದಾರೆ.

Kichcha sudeep gift mahindra thar car to jani master
ಜಾನಿ ಮಾಸ್ಟರ್​ಗೆ ಥಾರ್ ಕಾರು​ ಗಿಫ್ಟ್ ನೀಡಿದ ಕಿಚ್ಚ ಸುದೀಪ್
author img

By

Published : Mar 26, 2022, 11:40 AM IST

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಅನ್ಯ ಭಾಷೆಯ ಚಿತ್ರಗಳಲ್ಲಿ ಮಿಂಚಿತ್ತಿರುವ ಕಿಚ್ಚ ಸುದೀಪ್, ಸಿನಿಮಾ ರಂಗದಲ್ಲಿ ಸಾಕಷ್ಟು ​ಸ್ನೇಹಿತರನ್ನು ಹೊಂದಿದ್ದಾರೆ. ಒಮ್ಮೆ ಫ್ರೆಂಡ್​ಶಿಪ್​ ಮಾಡಿದರೆ ಅವರ ಜೊತೆ ತುಂಬಾನೇ ಆಪ್ತವಾಗಿ ನಡೆದುಕೊಳ್ಳುತ್ತಾರೆ. ಅವರಿಗೋಸ್ಕರ ಏನೂ ಮಾಡೋಕು ರೆಡಿ ಇರುತ್ತಾರೆ.

Sudeep with John Kapil Dev, Johnny Master
ಕ್ರಿಕೆಟ್​ ಕಪಿಲ್​ ದೇವ್​ ಜೊತೆ ಸುದೀಪ್​​, ಜಾನಿ ಮಾಸ್ಟರ್​

ಕೆಲವು ತಿಂಗಳುಗಳ ಹಿಂದೆ ಸುದೀಪ್ ತಮ್ಮ ಬಾಡಿಗಾರ್ಡ್ ಕಿಚ್ಚ ಕಿರಣ್​ಗೆ ಬುಲೆಟ್ ಬೈಕ್ ಉಡುಗೊರೆಯಾಗಿ ನೀಡಿದ್ದರು. ಇದೀಗ ಸ್ನೇಹಿತ ಹಾಗೂ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನೃತ್ಯ ಸಂಯೋಜಕ ಜಾನಿ ಮಾಸ್ಟರ್​ಗೆ ಸುದೀಪ್,​ ಮಹಿಂದ್ರಾ ಥಾರ್ ಕಾರನ್ನು ಉಡುಗೊರೆಯಾಗಿ​ ನೀಡಿದ್ದಾರೆ. ಜಾನಿ ಮಾಸ್ಟರ್​ ಕನ್ನಡ ಚಿತ್ರರಂಗದ ಜೊತೆ ಉತ್ತಮವಾದ ಬಾಂಧವ್ಯ ಹೊಂದಿದ್ದು, ಪುನೀತ್​ ರಾಜ್ ಕುಮಾರ್ ನಟನೆಯ ರಾಜಕುಮಾರ, ನಟಸಾರ್ವಭೌಮ,ಯುವರತ್ನ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡುವ ಮೂಲಕ‌ ಸೈ ಎನಿಸಿಕೊಂಡಿದ್ದಾರೆ.

  • Thank You for the Gift @KicchaSudeep sir & family ❤

    The way you Treat me & Take care of me make me feel blessed 😇

    Will always love you Sir, Happy to have you in my life 🙏🏼 pic.twitter.com/0U2Ldpv32A

    — Jani Master (@AlwaysJani) March 25, 2022 " class="align-text-top noRightClick twitterSection" data=" ">

ವಿಕ್ರಾಂತ್​ ರೋಣ ಸುದೀಪ್ ಅಭಿನಯದ ಬಹು‌‌ ನಿರೀಕ್ಷಿತ ಚಿತ್ರ. ಸಿನಿಮಾದಲ್ಲಿ ಸುದೀಪ್​ಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಇನ್ನು ಡ್ಯಾನ್ಸ್ ಅಂದ್ರೆ ಬೇಜಾರು ಮಾಡಿಕೊಳ್ಳುವ ಸುದೀಪ್​ಗೆ ಚಿತ್ರದಲ್ಲಿ ಜಾನಿ ಮಾಸ್ಟರ್​ ನೃತ್ಯ ಮಾಡಿಸಿರೋದು ವಿಶೇಷ. ಬಹುಶಃ ಜಾನಿ ಮಾಸ್ಟರ್ ಡ್ಯಾನ್ಸ್​​ ಮೆಚ್ಚಿಕೊಂಡು ಸುದೀಪ್ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಈ ಫೋಟೋ ಹಂಚಿಕೊಂಡಿರುವ ಜಾನಿ ಮಾಸ್ಟರ್ ಕಿಚ್ಚನಿಗೆ ಧನ್ಯವಾದ ಹೇಳಿದ್ದಾರೆ. ಕಿಚ್ಚ ಸುದೀಪ್ ಸಾರ್ ನಿಮ್ಮ ಉಡುಗೊರೆಗಾಗಿ ಧನ್ಯವಾದಗಳು. ನೀವು ನನ್ನನ್ನು ನೋಡಿಕೊಳ್ಳುವ ರೀತಿ ನಿಜಕ್ಕೂ ಖುಷಿ ನೀಡಿದೆ. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ. ನನ್ನ ಜೀವನದಲ್ಲಿ ನೀವು ಇರುವುದಕ್ಕೆ ಖುಷಿ ಇದೆ ಎಂದಿದ್ದಾರೆ.

ಈ ಹಿಂದೆ ಹೈದರಾಬಾದಿನಲ್ಲಿ ಸುದೀಪ್, ಜಾನಿ ಮಾಸ್ಟರ್​ಗೆ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಅವರನ್ನು ಭೇಟಿ ಮಾಡಿಸಿದ್ದರು. ಇದೀಗ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಿಚ್ಚನ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬ್ಯೂಟಿ ಇನ್‌ಫ್ಲ್ಯುಯೆನ್ಸರ್ ಅವಾರ್ಡ್ಸ್​ನಲ್ಲಿ ಮಿಂಚಿದ ಬಿಟೌನ್​ ಬೆಡಗಿಯರು!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.