ಉತ್ತರ ಕರ್ನಾಟಕದಲ್ಲಿ ನೆರೆಯ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಭಾರಿ ಮಳೆಯ ನಡುವೆಯೂ ಪರಿಹಾರ ಹಾಗೂ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ್ದಾರೆ.
ಎಡಬಿಡದ ಮಳೆಗೆ ಉತ್ತರ ಕರ್ನಾಟಕ ತತ್ತರ...ನೆರವಿಗೆ ಧಾವಿಸಿದ ಮೊದಲ ನಟ ಶರಣ್
ಉತ್ತರ ಕರ್ನಾಟಕದ ನೆರವಿಗೆ ಹಾಸ್ಯನಟ ಶರಣ್ ಮೊದಲಿಗೆ ಧಾವಿಸಿದ್ದು, ನಂತರದಲ್ಲಿ ಡಿಬಾಸ್ ದರ್ಶನ್ ಸಹ ಸಂತ್ರಸ್ತರ ಸಹಾಯಕ್ಕೆ ಮುಂದಾಗಿದ್ದರು. ಸದ್ಯ ಕಿಚ್ಚ ಸುದೀಪ್ ಸಹ ಈ ನಟರ ಹಾದಿಯನ್ನೇ ಹಿಡಿದಿದ್ದಾರೆ.
-
ನನ್ನ ಸ್ನೇಹಿತರ ಬಳಗಕ್ಕೆ ನನ್ನ ಚಿಕ್ಕ ಕೋರಿಕೆ.
— Kichcha Sudeepa (@KicchaSudeep) August 8, 2019 " class="align-text-top noRightClick twitterSection" data="
🙏🏼🙏🏼 pic.twitter.com/15fQA5ksZo
">ನನ್ನ ಸ್ನೇಹಿತರ ಬಳಗಕ್ಕೆ ನನ್ನ ಚಿಕ್ಕ ಕೋರಿಕೆ.
— Kichcha Sudeepa (@KicchaSudeep) August 8, 2019
🙏🏼🙏🏼 pic.twitter.com/15fQA5ksZoನನ್ನ ಸ್ನೇಹಿತರ ಬಳಗಕ್ಕೆ ನನ್ನ ಚಿಕ್ಕ ಕೋರಿಕೆ.
— Kichcha Sudeepa (@KicchaSudeep) August 8, 2019
🙏🏼🙏🏼 pic.twitter.com/15fQA5ksZo
ಟ್ವಿಟರ್ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಅಭಿನಯ ಚಕ್ರವರ್ತಿ, ಅಭಿಮಾನಿಗಳಿಗೆ ಚಿಕ್ಕ ಕೋರಿಕೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ಸರ್ಕಾರ ನೆರೆ ವಿಚಾರದಲ್ಲಿ ತನ್ನ ಕಾರ್ಯ ಮಾಡುತ್ತಿದೆ. ಆದರೆ ಪ್ರವಾಹಪೀಡಿತ ಪ್ರದೇಶ ಸುತ್ತಮುತ್ತ ಇರೋ ಸ್ನೇಹಿತರು ಅಲ್ಲಿನ ವಾಸ್ತವ ಸ್ಥಿತಿಯನ್ನು ನನ್ನ ಗಮನಕ್ಕೆ ತಂದರೆ ಯಾವ ರೀತಿ ಸಹಾಯ ಮಾಡಬಹುದು ಎನ್ನುವುದನ್ನು ಪ್ಲಾನ್ ಮಾಡಬಹುದು ಎಂದು ಕಿಚ್ಚ ಹೇಳಿದ್ದಾರೆ.
ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಸೇವೆ ಕರೆ ಕೊಟ್ಟ ಡಿ ಬಾಸ್
ಬುಧವಾರ ದರ್ಶನ್ ಟ್ವೀಟ್ ಮೂಲಕ ಉತ್ತರ ಕರ್ನಾಟಕದ ಜನತೆಯ ಸಹಾಯಕ್ಕೆ ಆಸರೆಯಾಗುವುದು ಪ್ರತಿಯೊಬ್ಬರ ಕರ್ತವ್ಯ ಎಂದಿದ್ದರು.
-
ನಮ್ಮ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಹಲವು ಹಳ್ಳಿಗಳು ಪ್ರವಾಹದ ಅಬ್ಬರಕ್ಕೆ ನೀರಿನಲ್ಲಿ ಮುಳುಗಿ ಹೋಗಿವೆ. ಅಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿರುತ್ತದೆ. ಎಲ್ಲರೂ ತಮ್ಮ ಕೈಲಾದ ಸೇವೆಯನ್ನು ಇದರ ನಿಟ್ಟಿನಲ್ಲಿ ಮಾಡಬೇಕಾಗಿ ವಿನಂತಿ.
— Darshan Thoogudeepa (@dasadarshan) August 7, 2019 " class="align-text-top noRightClick twitterSection" data="
- ನಿಮ್ಮ ದಾಸ ದರ್ಶನ್ pic.twitter.com/9v36p1XqwL
">ನಮ್ಮ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಹಲವು ಹಳ್ಳಿಗಳು ಪ್ರವಾಹದ ಅಬ್ಬರಕ್ಕೆ ನೀರಿನಲ್ಲಿ ಮುಳುಗಿ ಹೋಗಿವೆ. ಅಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿರುತ್ತದೆ. ಎಲ್ಲರೂ ತಮ್ಮ ಕೈಲಾದ ಸೇವೆಯನ್ನು ಇದರ ನಿಟ್ಟಿನಲ್ಲಿ ಮಾಡಬೇಕಾಗಿ ವಿನಂತಿ.
— Darshan Thoogudeepa (@dasadarshan) August 7, 2019
- ನಿಮ್ಮ ದಾಸ ದರ್ಶನ್ pic.twitter.com/9v36p1XqwLನಮ್ಮ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಹಲವು ಹಳ್ಳಿಗಳು ಪ್ರವಾಹದ ಅಬ್ಬರಕ್ಕೆ ನೀರಿನಲ್ಲಿ ಮುಳುಗಿ ಹೋಗಿವೆ. ಅಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿರುತ್ತದೆ. ಎಲ್ಲರೂ ತಮ್ಮ ಕೈಲಾದ ಸೇವೆಯನ್ನು ಇದರ ನಿಟ್ಟಿನಲ್ಲಿ ಮಾಡಬೇಕಾಗಿ ವಿನಂತಿ.
— Darshan Thoogudeepa (@dasadarshan) August 7, 2019
- ನಿಮ್ಮ ದಾಸ ದರ್ಶನ್ pic.twitter.com/9v36p1XqwL