ವಿಕ್ರಾಂತ್ ರೋಣ ಬಾದ್ ಷಾ ಕಿಚ್ಚ ಸುದೀಪ್ ಅಭಿನಯಿಸುತ್ತಿರೋ ಬಹುನಿರೀಕ್ಷಿತ ಚಿತ್ರ. ಕೆಲವು ತಿಂಗಳ ಹಿಂದೆ ಜಗತ್ತಿನ ಅತೀ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಚಿತ್ರದ ಟೈಟಲ್ ಲಾಂಚ್ ಮಾಡಿ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದರು.
ಇದೀಗ ವಿಕ್ರಾಂತ್ ರೋಣ ಚಿತ್ರತಂಡ ಮತ್ತೊಂದು ಸರ್ಪ್ರೈಸ್ ನೀಡಲು ಮುಂದಾಗಿದೆ. ಈ ಬಗ್ಗೆ ಕಿಚ್ಚ ಸುದೀಪ್ ಏಪ್ರಿಲ್ 15ರಂದು ಬೆಳಗ್ಗೆ 11.10ಕ್ಕೆ ಅಚ್ಚರಿಯೊಂದು ಕಾದಿದೆ ಎಂದು ಟ್ಟೀಟ್ ಮಾಡಿದ್ದಾರೆ.
-
15th April ,, 11.10am...
— Kichcha Sudeepa (@KicchaSudeep) April 10, 2021 " class="align-text-top noRightClick twitterSection" data="
Await the surprise ...
🤗🥂#VikrantRonaAnnouncement #VikrantRona @vikrantrona pic.twitter.com/M1gb0eGKr8
">15th April ,, 11.10am...
— Kichcha Sudeepa (@KicchaSudeep) April 10, 2021
Await the surprise ...
🤗🥂#VikrantRonaAnnouncement #VikrantRona @vikrantrona pic.twitter.com/M1gb0eGKr815th April ,, 11.10am...
— Kichcha Sudeepa (@KicchaSudeep) April 10, 2021
Await the surprise ...
🤗🥂#VikrantRonaAnnouncement #VikrantRona @vikrantrona pic.twitter.com/M1gb0eGKr8
ಸದ್ಯ ಪೋಸ್ಟರ್ ಹಾಗೂ ಟೀಸರ್ನಿಂದ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ವಿಕ್ರಾಂತ್ ರೋಣ, ಏಪ್ರಿಲ್ 15ರಂದು ಚಿತ್ರತಂಡ ಯಾವ ಸುದ್ದಿ ಹೊರ ಹಾಕಲಿದೆ ಎನ್ನುವ ಕುತೂಹಲ ಕಿಚ್ಚನ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು, ಆ್ಯಕ್ಷನ್ ಓರಿಯೆಂಟೆಡ್ ಸಿನಿಮಾವಾಗಿದೆ. ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಸಖತ್ ಸ್ಟೈಲಿಷ್ ಜೊತೆಗೆ ಡಿಫ್ರೆಂಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್, ಶ್ರಾದ್ಧಾ ಶ್ರೀನಾಥ್, ಹೀಗೆ ದೊಡ್ಡ ಕಲಾವಿದರ ದಂಡು ಈ ಚಿತ್ರದಲ್ಲಿದೆ.
ನಿರ್ಮಾಪಕ ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಗ ಬರ್ತಿದೆ.
ಸದ್ಯ ಏಪ್ರಿಲ್ 15ರಂದು ವಿಕ್ರಾಂತ್ ರೋಣ ಚಿತ್ರತಂಡದಿಂದ ಯಾವ ವಿಷ್ಯ ರಿವೀಲ್ ಆಗಲಿದೆ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.