ETV Bharat / sitara

ಶುಭ ಪುಂಜಾ ಇನ್ಮುಂದೆ ’ಖಾಲಿ ದೋಸೆ ಕಲ್ಪನ’..! - shubha poonja

ಪೂಜಾರಿ ಚಿತ್ರದಿಂದ ಖ್ಯಾತಿ ಹೊಂದಿದ್ದ ಶರಣ್​ ಕಬ್ಬೂರ್​​​ 12 ವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ವಾಪಸ್​​ ಆಗಿದ್ದಾರೆ. ಸದ್ಯ ವಿಜಯನಗರ ಕಾಲದ ನಿಧಿ ಪತ್ತೆ ಹಚ್ಚಿದ ವಿಚಾರವೊಂದನ್ನ ಆಧಾರವಾಗಿಟ್ಟುಕೊಂಡು 'ಖಾಲಿ ದೋಸೆ ಕಲ್ಪನ' ಎಂಬ ಶೀರ್ಷಿಕೆ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.

ಖಾಲಿ ದೋಸೆ ಕಲ್ಪನ
author img

By

Published : Sep 20, 2019, 11:38 AM IST

ಸ್ಯಾಂಡಲ್​ವುಡ್​ನಲ್ಲಿ ನೀರ್ ದೋಸೆ ಹಾಕಿದ್ದಾಯ್ತು ಸದ್ಯ ದೋಸೆಯ ಹೆಸರನ್ನೇ ಬಳಸಿಕೊಂಡ ಚಿತ್ರತಂಡವೊಂದು ತೆರೆಮೇಲೆ ಬರಲು ಸಿದ್ಧತೆ ನಡೆಸುತ್ತಿದ್ದು, ತನ್ನ ಶಿರ್ಷಿಕೆ ಮೂಲಕ ಗಾಂಧಿ ನಗರದಲ್ಲಿ ಕುತೂಹಲ ಹುಟ್ಟಿಸಿದೆ.

ಪೂಜಾರಿ ಚಿತ್ರದಿಂದ ಖ್ಯಾತಿ ಹೊಂದಿದ್ದ ನಿರ್ದೇಶಕ ಶರಣ್​ ಕಬ್ಬೂರ್​​ ​ 12 ವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ವಾಪಸ್​​ ಆಗಿದ್ದಾರೆ. ಸದ್ಯ ವಿಜಯನಗರ ಕಾಲದ ನಿಧಿ ಪತ್ತೆ ಹಚ್ಚುವ ವಿಚಾರವೊಂದನ್ನ ಆಧಾರವಾಗಿಟ್ಟುಕೊಂಡು 'ಖಾಲಿ ದೋಸೆ ಕಲ್ಪನಾ' ಎಂಬ ಶೀರ್ಷಿಕೆ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.

shubha poonja
ಖಾಲಿ ದೋಸೆ ಕಲ್ಪನ ಚಿತ್ರ

ಇನ್ನು ಇದೊಂದು ಪಕ್ಕಾ ಥ್ರಿಲ್ಲರ್ ಚಿತ್ರವಾಗಿದ್ದು, ಸಿನಿಮಾದಲ್ಲಿ ನಾಯಕಿಯಾಗಿ ಶುಭ ಪೂಂಜಾ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ದೊಡ್ಡ ಬ್ರೇಕ್ ಗಾಗಿ ಕಾಯುತ್ತಿರುವ ಶುಭ ಪೂಂಜಾಗೆ ಇಂತಹದೊಂದ್ದು ಡಿಫ್ರೆಂಟ್ ಚಿತ್ರ ಯಶಸ್ಸು ನೀಡಲಿದೆ ಎನ್ನುವ ಬಲವಾದ ನಂಬಿಕೆ ಇದೆಯಂತೆ.

ಚಿತ್ರದಲ್ಲಿ ಶುಭ ಜೊತೆ ನಾಯಕ ನಟನಾಗಿ ಸಂಜಯ್​ ಗೌಡ ಸ್ಯಾಂಡಲ್​ವುಡ್​ನಲ್ಲಿ ಖಾತೆ ತೆರೆಯಲು ಮುಂದಾಗಿದ್ದಾರೆ. ರಾಜೇಶ್ ಡಿ ಎಸ್ ಮತ್ತು ನಳಿನ ಗೌಡ ನಿರ್ಮಾಣದಲ್ಲಿ ಇದೇ 23 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರಕ್ಕೆ ಶರಣ್ ಕಬ್ಬೂರ್​ ನಿರ್ದೇಶಕ, ಅಭಿಮನ್ ರಾಯ್ ಸಂಗೀತ, ಕ್ಲಿಕ್ ಸೀನು ಛಾಯಾಗ್ರಹಣ, ಕೆ ಎಂ ಪ್ರಕಾಶ್​ ಸಂಕಲನ ಮಾಡಲಿದ್ದಾರೆ.

ಶುಭ ಪೂಂಜಾ ಖಾಲಿ ದೋಸೆ ಕಲ್ಪನ

ಕನ್ನಡದಲ್ಲಿ ನೀರ್ ದೋಸೆ ಆಯಿತು. ಈಗ ಖಾಲಿ ದೋಸೆ ಕಲ್ಪನ. ಶೀರ್ಷಿಕೆಗಳು ಆಹಾರದ ವಸ್ತುಗಳಾಗಿ ಇದ್ದರೆ ಪ್ರೇಕ್ಷಕರನ್ನು ಸೆಳೆಯುವುದು ಸುಲಭ ಅಂತ ಅಂದುಕೊಂಡಿದ್ದಾರೆ ನಿರ್ದೇಶಕ ಶರಣ್ ಕಬ್ಬುರ್.

ಒಂದು ಥ್ರಿಲ್ಲರ್ ಕಥಾ ವಸ್ತು ಹೊಂದಿರುವ ಖಾಲಿ ದೋಸೆ ಕಲ್ಪನ ವಿಜಯನಗರ ಕಾಲದ ನಿಧಿ ಪತ್ತೆ ಹಚ್ಚುವ ವಿಚಾರ ಹೊಂದಿದೆ. ಅದನ್ನು ಹುಡುಕಲು ಒಂದು ಚಿತ್ರ ತಂಡ ಆಗಿ ಹೋಗುವವರು ಅನೇಕ ವಿಚಾರಗಳನ್ನು ಎದುರಿಸಬೇಕಾಗುತ್ತದೆ. ಶರಣ್ ಕಬ್ಬುರ್ ಡಾ ಬಿ ಆರ್ ಅಂಬೇಡ್ಕರ್ ಸಿನಿಮಾ  2005 ರಲ್ಲೇ ನಿರ್ದೇಶನ ಮಾಡಿದವರು. 2007 ರಲ್ಲಿ ಪೂಜಾರಿ ಸಿನಿಮಾ ಇಂದ ಖ್ಯಾತಿ ಪಡೆದರು. ಆಮೇಲೆ ಅವರು ನಟನೆಗೂ ಸಹ ಹೊಂದಿಕೊಂಡರು. ಈಗ ಮತ್ತೆ ನಿರ್ದೇಶನಕ್ಕೆ 12 ವರ್ಷಗಳ ಬಳಿಕ ವಾಪಸ್ಸಾಗಿದ್ದಾರೆ.

ಶುಭ ಪೂಂಜಾ ಸಹ ಒಂದು ದೊಡ್ಡ ಬ್ರೇಕ್ ಸಿಗುವುದಕ್ಕೆ ಕಾಯುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಹೀಗೆ ಇರಬೇಕಾದರೆ ಅವರ ಪಾತ್ರ ಪೋಷಣೆಯಲ್ಲಿ ವಿಭಿನ್ನತೆ ಕೂಡಿದೆ. ಶುಭ ಪೂಂಜಾ ಇಲ್ಲಿಯವರೆವಿಗೂ ಮಾಡಿರದ ಪಾತ್ರ ಒಂದು ರೀತಿಯಲ್ಲಿ ಹರಿಪ್ರಿಯಾ ನೀರ್ ದೋಸೆ ಸಿನಿಮಾದಲ್ಲಿ ಪ್ರಯತ್ನ ಪಟ್ಟು ಯಶಸ್ಸು ಪಡೆದ ಹಾಗೆ ಆಗಲಿದೆ ಎಂಬುದು ಬಲವಾದ ನಂಬಿಕೆ.

ಶುಭ ಪೂಂಜಾ ಜನಪ್ರಿಯತೆಯನ್ನು ಈ ಖಾಲಿ ದೋಸೆ ಕಲ್ಪನ ಚಿತ್ರದಲ್ಲಿ ಬಳಸಿಕೊಳ್ಳುತ್ತ ಹೊಸ ಹುಡುಗ ಸಂಜಯ್ ಗೌಡ ಅವರನ್ನು ಪರಿಚಯ ಮಾಡುತ್ತಿದ್ದಾರೆ. ರಾಜೇಶ್ ಡಿ ಎಸ್ ಮತ್ತು ನಳಿನ ಗೌಡ ನಿರ್ಮಾಪಕರುಗಳು.

ಇದೆ 23 ರಿಂದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ ನಿರ್ದೇಶಕ ಶರಣ್ ಕಬ್ಬುರ್, ಅಭಿಮನ್ ರಾಯ್ ಸಂಗೀತ, ಕ್ಲಿಕ್ ಸೀನು ಛಾಯಾಗ್ರಹಣ, ಕೆ ಎಂ ಪ್ರಕಾಷ್  ಸಂಕಲನ   ಮಾಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.