ಲಾಸ್ ಏಂಜಲೀಸ್ (ಯು.ಎಸ್): ಸ್ತ್ರೀವಾದದ ಕುರಿತು 'ಮಿಸ್ಬಿಹೇವಿಯರ್' ಎಂಬ ಚಿತ್ರದಲ್ಲಿ ಇತ್ತೀಚೆಗೆ ನಟಿಸಿರುವ ನಟಿ ಕೀರಾ ನೈಟ್ಲಿ ಮಹಿಳೆಯರ ಲೈಂಗಿಕ ವಸ್ತುನಿಷ್ಠೀಕರಣ (sexual objectification of women) ಈಗಲೂ ನಡೆಯುತ್ತಿದೆ ಎಂದು ಹೇಳಿದ್ದಾರೆ.
1970ರಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯ ಪ್ರಸಾರವನ್ನು ಅಡ್ಡಿಪಡಿಸಿದ ಸ್ತ್ರೀವಾದಿಗಳ ನೈಜ ಕಥೆಯನ್ನು 'ಮಿಸ್ಬಿಹೇವಿಯರ್' ಚಿತ್ರ ಹೇಳುತ್ತದೆ.
ಚಲನಚಿತ್ರವು ಒಳಗೊಳ್ಳುವ ಲೈಂಗಿಕತೆಯ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ನೈಟ್ಲಿ, "ಮಹಿಳೆಯರ ಲೈಂಗಿಕ ವಸ್ತುನಿಷ್ಠೀಕರಣ ಈಗಲೂ ಅಸ್ತಿತ್ವದಲ್ಲಿದೆ. ಅವರು ಹೇಗೆ ಕಾಣಿಸುತ್ತಿದ್ದಾರೆ ಎಂಬುವುದೇ ಹಲವು ಬಾರಿ ಮುಖ್ಯವಾಗುತ್ತದೆ. ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿನ ಸಂಬಳ ನೀಡುವ ವಿಶ್ವದ ಏಕೈಕ ಉದ್ಯಮವೆಂದರೆ ಮಾಡೆಲಿಂಗ್." ಎಂದು ಅವರು ಹೇಳಿದ್ದಾರೆ.
ಫಿಲಿಪ್ಪಾ ಲೋಥೋರ್ಪ್ ನಿರ್ದೇಶನದ 'ಮಿಸ್ಬಿಹೇವಿಯರ್' ಚಿತ್ರವನ್ನು ಪಿವಿಆರ್ ಪಿಕ್ಚರ್ಸ್ ಜನವರಿ 22ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ.