ETV Bharat / sitara

ಕೊನೆಗೂ ಡಯಟ್ ಬಿಟ್ಟು ನಿತಿನ್ ಮುಂದೆ ಸೋತ ಕೀರ್ತಿ ಸುರೇಶ್​​​​​​​​​ - Rang de released on March 26

ಡಯಟ್ ಮಾಡುತ್ತಿದ್ದ ಕೀರ್ತಿ ಸುರೇಶ್​​​​​ಗೆ ನಟ ನಿತಿನ್ ಬಲವಂತವಾಗಿ ಪಿಜ್ಜಾ ತಿನ್ನಿಸಿರುವ ವಿಡಿಯೋವನ್ನು ಕೀರ್ತಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಿತಿನ್ ಹಾಗೂ ಕೀರ್ತಿ ಅಭಿನಯದ 'ರಂಗ್​ ದೇ' ಸಿನಿಮಾ ಮಾರ್ಚ್ 26 ರಂದು ಬಿಡುಗಡೆಯಾಗುತ್ತಿದೆ.

Keerti suesh
ಕೀರ್ತಿ ಸುರೇಶ್​​​​​​​​​
author img

By

Published : Mar 22, 2021, 10:58 AM IST

'ಮಹಾನಟಿ' ಸಿನಿಮಾಗಾಗಿ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಸುರೇಶ್ ಸದ್ಯಕ್ಕೆ 4-5 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಕೀರ್ತಿ ಸುರೇಶ್ ಜೊತೆ ನಿತಿನ್ ರೆಡ್ಡಿ'ರಂಗ್​ ದೇ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. 'ರಂಗ್ ದೇ' ಸಿನಿಮಾ ಮಾರ್ಚ್ 26 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಚಿತ್ರೀಕರಣದ ವೇಳೆ ನಡೆದ ಫನ್ನಿ ವಿಡಿಯೋವೊಂದನ್ನು ಕೀರ್ತಿ ಸುರೇಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಆಡಿ ಅಭಿಮಾನಿಗಳನ್ನು ರಂಜಿಸಿದ ನಟ ದುನಿಯಾ ವಿಜಯ್

ಊಟದ ಸಮಯದಲ್ಲಿ ಕೀರ್ತಿ ಸುರೇಶ್ ಫ್ರೂಟ್ಸ್ ತಿಂದರೆ, ನಿತಿನ್ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಕೀರ್ತಿ ಡಯಟ್​​​ನಲ್ಲಿದ್ದರೆ ನಿತಿನ್ ಅವರಿಗೆ ಪಿಜ್ಜಾ ತಿನ್ನಿಸುವ ಪ್ರಯತ್ನ ಮಾಡಿದ್ದಾರೆ. ಕೀರ್ತಿ ಸುರೇಶ್ ಮಾತ್ರ ನಿತಿನ್ ಎಷ್ಟೇ ಬಲವಂತ ಮಾಡಿದರೂ ತಿನ್ನಲು ಪ್ರಯತ್ನಿಸುವುದಿಲ್ಲ. ಕೊನೆಗೆ ನಿತಿನ್, ಕೀರ್ತಿಗೆ ಪಿಜ್ಜಾ ತಿನ್ನಿಸುವುದರಲ್ಲಿ ಯಶಸ್ವಿಯಾಗುತ್ತಾರೆ. ಈ ಫನ್ನಿ ವಿಡಿಯೋ ನೋಡಿ ನೆಟಿಜನ್ಸ್ ವಿವಿಧ ಕಮೆಂಟ್ ಮಾಡಿದ್ದಾರೆ. 'ರಂಗ್ ದೇ' ಸಿನಿಮಾವನ್ನು ಸೂರ್ಯದೇವರ ನಾಗವಂಶಿ ನಿರ್ಮಿಸಿದ್ದು ವೆಂಕಿ ಅಟ್ಲುರಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿಕೀರ್ತಿ ಸುರೇಶ್, ನಿತಿನ್, ನರೇಶ್, ಬ್ರಹ್ಮಾಜಿ, ಸುಹಾಸ್, ವೆನ್ನಿಲ ಕಿಶೋರ್ ಹಾಗೂ ಇನ್ನಿತರರು ನಟಿಸಿದ್ದಾರೆ. ಸಿತಾರಾ ಎಂಟರ್​​​ಟೈನ್ಮೆಂಟ್ಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಸಿನಿಮಾ ಇದೇ ಮಾರ್ಚ್ 26 ರಂದು ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.