ಕನ್ನಡ ಚಿತ್ರರಂಗದಲ್ಲಿ 3 ದಶಕಗಳ ಅನುಭವ ಹೊಂದಿರುವ ನಿರ್ದೇಶಕ, ನಿರ್ಮಾಪಕ ಸೆಬಾಸ್ಟಿಯನ್ ಡೇವಿಡ್ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.
ಇಷ್ಟು ವರ್ಷ ಚಿತ್ರರಂಗದಲ್ಲಿ ದುಡಿದಿದ್ದಕ್ಕೆ ಮರಳಿ ಅದೇ ಚಿತ್ರರಂಗಕ್ಕೆ ಏನಾದರೂ ನೀಡಬೇಕೆಂಬ ಮಹದಾಸೆಯಿಂದ ಒಂದಷ್ಟು ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದಾರೆ.

ಅಂತಾರಾಷ್ಟ್ರೀಯ ಗುಣಮಟ್ಟದ ಸಿನಿಮಾ ಸಂಬಂಧಿ ಆ್ಯಕ್ಟಿವಿಟಿಗಳನ್ನೂ ಶುರು ಮಾಡಿದ್ದಾರೆ. ಸೆಬಾಸ್ಟಿಯನ್ ಡೇವಿಡ್ ಕನ್ನಡದಲ್ಲಿ ಕೆಲ ವರ್ಷಗಳ ಹಿಂದಷ್ಟೇ ಬಿಡುಗಡೆ ಆಗಿದ್ದ ಜ್ಯೋತಿ ಅಲಿಯಾಸ್ ಕೋತಿರಾಜ್ ಚಿತ್ರವನ್ನು ನಿರ್ದೇಶನ ಮಾಡಿದ್ದರು.
ಇದಷ್ಟೇ ಅಲ್ಲ, ಆರ್ಟಿನಗರ ಮತ್ತು ಗಾಂಧಿನಗರದಲ್ಲಿ ಎರಡೆರಡು ಸ್ಟುಡಿಯೋ ನಡೆಸುತ್ತಿದ್ದರು. ಅದಾದ ಬಳಿಕ ಜಾಹೀರಾತು ನಿರ್ದೇಶನದಲ್ಲಿಯೇ ಹೆಚ್ಚು ಸಕ್ರೀಯರಾಗಿ, ಟಿವಿಯಲ್ಲಿ ನೋಡುವ ಬಹುತೇಕ ಎಲ್ಲ ಚಿನ್ನದ ಜಾಹೀರಾತುಗಳನ್ನು ಸೆಬಾಸ್ಟಿಯನ್ ಅವರೇ ನಿರ್ದೇಶನ ಮಾಡಿದ್ದಾರೆ.

ಇದೀಗ ಆಲ್ಫ್ಲಿಕ್ಸ್ ಎಂಟರ್ಟೈನ್ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತೆರೆದಿದ್ದು, ಅದರ ಅಡಿಯಲ್ಲಿ ಓಟಿಟಿ (ಓವರ್ ದಿ ಟಾಪ್) ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಕನ್ನಡದಲ್ಲಿ ಸದ್ಯ ಉತ್ಕೃಷ್ಟ ಗುಣಮಟ್ಟದ ಓಟಿಟಿ ವೇದಿಕೆ ಇಲ್ಲದ್ದನ್ನು ಮನಗಂಡು, ಆಲ್ಫ್ಲಿಕ್ಸ್ (AllFlix) ಹೆಸರಿನಲ್ಲಿ ಓಟಿಟಿ ಸಿದ್ಧಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಗುಣಮಟ್ಟದ ಈ ಓಟಿಟಿ ಇದೀಗ ಎಲ್ಲ ಹಂತದಿಂದಲೂ ರೆಡಿಯಾಗಿದ್ದು, ಇನ್ನೇನು ಶೀಘ್ರ ಅದರ ಲಾಂಚ್ ಸಹ ಆಗಲಿದೆ. ಏಕಕಾಲದಲ್ಲಿ 50 ಸಾವಿರ ಜನ ಈ ಆ್ಯಪ್ ಬಳಕೆ ಮಾಡಿದರೂ, ಸ್ವಲ್ಪ ಕೂಡ ಹ್ಯಾಂಗ್ ಆಗದ ರೀತಿ ಅಪ್ಲಿಕೇಷನ್ ಗುಣಮಟ್ಟದ್ದಾಗಿದೆಯಂತೆ.
ಈಗಾಗಲೇ ಈ ಓಟಿಟಿ ಸಲುವಾಗಿ ಗ್ಲ್ಯಾಮರ್ ವೆಬ್ಸಿರೀಸ್ ನಿರ್ಮಾಣ ಕೆಲಸವೂ ಶುರುವಾಗಿದ್ದು, ಶೀಘ್ರದಲ್ಲಿ ಶೂಟಿಂಗ್ ಸಹ ನಡೆಯಲಿದೆ. ಕುರಿಬಾಂಡ್ ಸುನಿಲ್ ಆ ವೆಬ್ಸಿರೀಸ್ನಲ್ಲಿ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ. ಇದರ ನಿರ್ಮಾಣದ ಜವಾಬ್ದಾರಿ ಸೆಬಾಸ್ಟಿಯನ್ ಅವರದ್ದೇ. ಇದಷ್ಟೇ ಅಲ್ಲ, ಬೇರೆ ಬೇರೆ ನಿರ್ಮಾಪಕರು ವೆಬ್ಸಿರೀಸ್ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ.
ಈಗಾಗಲೇ ಸಾಕಷ್ಟು ಮಂದಿ ಒಳ್ಳೆಯ ವಿಚಾರ. ಸಿನಿಮಾಕ್ಕೆ ಸಂಬಂಧಿಸಿದ ಆ್ಯಕ್ಟಿವಿಟಿಗಳಾದ ಡಬ್ಬಿಂಗ್, ಎಡಿಟಿಂಗ್, ಡಿಟಿಎಸ್, ಡಿಐ, ಸಿಜಿ ಕೆಲಸ ಬಹುತೇಖ ಎಲ್ಲ ಕೆಲಸಗಳು ಒಂದೇ ಸೂರಿನಡಿ ಸೆಬಾಸ್ಟಿಯನ್ ಡೇವಿಡ್ ಮಾಡಿಕೊಡುತ್ತಿದ್ದಾರೆ. ಗ್ರೀನ್ ಮ್ಯಾಟ್ ಮತ್ತು ವೈಟ್ ಮ್ಯಾಟ್ ಸ್ಟುಡಿಯೋ ಸೇವೆಯನ್ನೂ ಅವರು ಒದಗಿಸುತ್ತಿದ್ದಾರೆ.
ಈಗಾಗಲೇ ನಗರದ ಹೊರಭಾಗದಲ್ಲಿ ಈ ಈ ಸೇವೆ ಇದೆಯಾದರೂ, ಸಿನಿಮಂದಿಗೆ ಅದು ಹೊರೆಯೇ. ಆದರೆ, ಸೆಬಾಸ್ಟಿಯನ್ ಅವರು ನಗರದ ಹೃದಯಭಾಗವಾದ ಬಸವೇಶ್ವರ ನಗರದ ಶಂಕರಮಠದಲ್ಲಿ ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ. ಅತ್ಯುತ್ತಮ ಔಟ್ಲುಕ್ ಮತ್ತು ಕಂಫರ್ಟ್ ಫೀಲ್ ನೀಡುವ ಸ್ಟುಡಿಯೀ ಇದಾಗಿದ್ದು, ಪಾರ್ಕಿಂಗ್ ಸೌಲಭ್ಯವೂ ಸಾಕಷ್ಟಿದೆ.

ಹವಾನಿಯಂತ್ರಿತ ಸ್ಟುಡಿಯೋ ಎಲ್ಲರಿಗೂ ಇಷ್ಟವಾಗಲಿದೆ. ಇದರ ಜತೆಗೆ ಲೈವ್ ಸ್ಟ್ರೀಮಿಂಗ್ ಕಾರ್ಯದಲ್ಲಿಯೂ ಅವರು ತೊಡಗಿಸಿಕೊಂಡಿದ್ದು, ಕಾರ್ಯಕ್ರಮದ ಎಚ್ಡಿ ಕ್ವಾಲಿಟಿ ವಿಡಿಯೋವನ್ನು ಲೈವ್ ಸ್ಟ್ರೀಮಿಂಗ್ ಮೂಲಕ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಅದನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇಂಡಸ್ಟ್ರೀಗೆ ಒಂದೊಳ್ಳೆ ಸರ್ವಿಸ್ ಕೊಡಬೇಕೆಂಬುದು ಸೆಬಾಸ್ಟಿಯನ್ ಡೇವಿಡ್ ಉದ್ದೇಶವಾಗಿದೆ.