ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ನಿಯಂತ್ರಿಸಲು ಮುಂದಿನ 15 ದಿನಗಳ ಕಾಲ ರಾಜ್ಯಾದ್ಯಂತ ಯಾವುದೇ ಪ್ರತಿಭಟನೆ, ರ‍್ಯಾಲಿ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ 'ಸಲಗ' ಮತ್ತು 'ಕೋಟಿಗೊಬ್ಬ-3' ಚಿತ್ರಗಳ ಪ್ರೀ-ರಿಲೀಸ್ ಇವೆಂಟ್‍ಗಳು ನಡೆಯುವುದು ಅನುಮಾನ ಎನ್ನಲಾಗುತ್ತಿದೆ.
ಸಲಗ ಮತ್ತು ಕೋಟಿಗೊಬ್ಬ-3 ಚಿತ್ರಗಳು ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುತ್ತಿವೆ. ಈ ನಿಟ್ಟಿನಲ್ಲಿ ಚಿತ್ರದ ಭರ್ಜರಿ ಪ್ರಚಾರ ಮಾಡುವುದಕ್ಕೆ ಎರಡೂ ಚಿತ್ರತಂಡಗಳು ಪ್ರೀ-ರಿಲೀಸ್ ಇವೆಂಟ್‍ಗಳನ್ನು ಹಮ್ಮಿಕೊಂಡಿವೆ. ಸಲಗ' ಚಿತ್ರದ ಪ್ರೀ-ರಿಲೀಸ್ ಇವೆಂಟ್ ಏಪ್ರಿಲ್ 10 ರಂದು ಹೊಸಪೇಟೆಯಲ್ಲಿ ನಡೆದರೆ, ಕೋಟಿಗೊಬ್ಬ 3 ಚಿತ್ರದ ಪ್ರೀ - ರಿಲೀಸ್ ಇವೆಂಟ್ ಚಿತ್ರದುರ್ಗದಲ್ಲಿ ನಡೆಯಲಿದೆ. ಇದೀಗ ಯಾವುದೇ ಸಮಾರಂಭದಲ್ಲೂ 500ಕ್ಕೂ ಹೆಚ್ಚು ಜನ ಸೇರುವಂತಿಲ್ಲ ಮತ್ತು ಜಾತ್ರೆ, ರ‍್ಯಾಲಿಗಳನ್ನು ನಡೆಸುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿರುವುದರಿಂದ, ಈ ಎರಡೂ ಕಾರ್ಯಕ್ರಮಗಳು ನಡೆಯುತ್ತವಾ ಎಂಬ ಪ್ರಶ್ನೆ ಸಿನಿ ವಲಯದಲ್ಲಿ ಮೂಡಿದೆ.
ಓದಿ : 'ನಾ ಸಿನಿಮಾ ರಂಗದಲ್ಲಿ ಇರಲು ಕಾರಣ 'ಎದ್ದೇಳು ಮಂಜುನಾಥ'.. ತಬಲಾ ನಾಣಿ
ಇನ್ನು, ಸರ್ಕಾರದ ಆದೇಶ ಬರುವುದಕ್ಕಿಂತ ಮುಂಚೆಯೇ, ದರ್ಶನ್ ಅಭಿನಯದ ರಾಬರ್ಟ್' ಚಿತ್ರತಂಡವು ವಿಜಯ ಯಾತ್ರೆಯನ್ನು ರದ್ದು ಮಾಡಿದೆ. ಎಲ್ಲ ಅಂದು ಕೊಂಡಂತೆ ಆಗಿದ್ದರೆ, ಮಾರ್ಚ್ 29 ರಿಂದ ನಾಲ್ಕು ದಿನಗಳ ಕಾಲ ವಿಜಯ ಯಾತ್ರೆ ನಡೆಯಬೇಕಿತ್ತು.