ETV Bharat / sitara

'ದೇವ್ರಾಣೆಗೂ ನಮ್ಮದು ರಿಮೇಕ್ ಚಿತ್ರವ​ಲ್ಲ' - ಪ್ರಜ್ವಲ್ ದೇವರಾಜ್

ತಮ್ಮ 'ಅರ್ಜುನ್ ಗೌಡ' ತೆಲುಗಿನ ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಎನ್ನುವ ರೂಮರ್​​ನ್ನು ನವ ನಿರ್ದೇಶ ಶಂಕರ್ ಅಲ್ಲಗಳೆದಿದ್ದಾರೆ.

ಅರ್ಜುನ್ ಗೌಡ
author img

By

Published : Aug 3, 2019, 6:01 PM IST

ನಿನ್ನೆ ಚಿತ್ರದ ಟ್ರೇಲರ್ ಲಾಂಚ್ ಮಾಡಿ ಮಾತನಾಡಿರುವ ನಿರ್ದೇಶಕ ಶಂಕರ್, ದೇವ್ರಾಣೆಗೂ ಇದು ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್​ ಅಲ್ಲ, ಅದರ ಸ್ಪೂರ್ತಿಯೂ ನಮ್ಮ ಚಿತ್ರಕ್ಕಿಲ್ಲ. ಇದು ಸ್ವಂತ ಕಥೆ. ಅಪ್ಪಟ ಕನ್ನಡ ಸಿನಿಮಾ ಎಂದು ಸ್ಪಷ್ಟನೆ ನೀಡಿದ್ರು.

ಅರ್ಜುನ್ ಗೌಡ ಆ್ಯಕ್ಷನ್ ಹಾಗೂ ಲವ್ ಸ್ಟೋರಿಯ ಈ ಚಿತ್ರದಲ್ಲಿ ಮೂರು ವಿಭಿನ್ನ ಶೇಡ್​​ನಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ನಾಯಕ ಪ್ರಜ್ವಲ್ ದೇವರಾಜ್ ತಿಳಿಸಿದರು. ಒಂದು ಪಾತ್ರ ರೆಬೆಲ್ ಆಗಿ ಮಾಡಿದ್ದೇನೆ. ಸಂಗೀತ ನಿರ್ದೇಶಕ ಧರ್ಮವಿಶ್ ಒಳ್ಳೆಯ ಟ್ಯೂನ್ಸ್​ ಕಂಪೋಸ್ ಮಾಡಿದ್ದಾರೆ. ತುಂಬಾ ದಿನಗಳ ನಂತರ ಈ ಚಿತ್ರದಲ್ಲಿ ನಾನು ಮಸ್ತ್​​ ಡ್ಯಾನ್ಸ್ ಮಾಡಿದ್ದೇನೆ. ಈ ಚಿತ್ರದಲ್ಲಿ ರಗಡ್ ಪಾತ್ರದಲ್ಲಿ ಕಾಣಿಸಿದ್ದು ನನ್ನ ಸಾಗರ ಹಾಗೂ ಗುಲಾಮ ಚಿತ್ರಕ್ಕಿಂತ ಹೆಚ್ಚು ಎಂಟರ್ಟೈನ್‌ಮೆಂಟ್‌ ನಿರೀಕ್ಷಿಸಬಹುದು ಎಂದರು.

ಅರ್ಜುನ್ ಗೌಡ ಚಿತ್ರದ ಮಾಧ್ಯಮಗೋಷ್ಟಿ

ಚಿತ್ರದಲ್ಲಿ ಪ್ರಜ್ವಲ್​​​ಗೆ ನಾಯಕಿಯಾಗಿ ನಟಿಸಿರುವ ಪ್ರಿಯಾಂಕಾ ತಿಮ್ಮೇಶ್ ಮಾತನಾಡಿ, ಈ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದೇನೆ. ನಿರ್ದೇಶಕರು ಕತೆ ಹೇಳುವಾಗಲೇ ಈ ಪಾತ್ರದ ಬಗ್ಗೆ ವಿವರಿಸಿದ್ದರು. ಕೆಲವು ಕಿಸ್​​ಗಳನ್ನು ಬೋಲ್ಡ್ ಆಗಿಯೇ ಮಾಡಿದ್ದೇನೆ. ತುಂಬ ಅಚ್ಚುಕಟ್ಟಾಗಿ ಪಾತ್ರ ಮೂಡಿಬಂದಿದೆ ಎಂದರು.

ಈ ಚಿತ್ರದಲ್ಲಿ ಸಾಧುಕೋಕಿಲಾ, ಸ್ಪರ್ಶ ಖ್ಯಾತಿಯ ರೇಖಾ, ಕಡ್ಡಿಪುಡಿ ಚಂದ್ರು, ಯಮುನಾ ಶ್ರೀನಿಧಿ, ಭಜರಂಗಿ ಚೇತನ್ ಜೀವ ಸೂರಜ್ ದಿನೇಶ್ ಮಂಗಳೂರು ಹನುಮಂತೇಗೌಡ ಸೇರಿದಂತೆ ದೊಡ್ಡ ತಾರಾ ಬಳಗ ಇದೆ. ರಾಮು ನಿರ್ಮಾಣದ ಈ ಸಿನಿಮಾ ದಸರಾ ಹೊತ್ತಿಗೆ ಚಿತ್ರಮಂದಿರಕ್ಕೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

Intro:ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ನಿರ್ಮಾಪಕ ಕೋಟಿ ರಾಮು ನಿರ್ಮಾಣದ ಅರ್ಜುನ್ ಗೌಡ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ನವ ನಿರ್ದೇಶಕ ಶಂಕರ್ ನಿರ್ದೇಶನದ ಅರ್ಜುನ್ ಗೌಡ ಚಿತ್ರ ಸೆಟ್ಟೆರಿದಿನಿಂದಾಗಲೂ ಸಹ ತೆಲುಗಿನ ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಎಂಬ ಮಾತುಗಳು ಕೇಳಿಬಂದಿತ್ತು ಇನ್ನು ಈ ಚಿತ್ರ ತೆಲುಗು ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಅಲ್ಲ ಇದು ಸ್ವಂತ ಕಥೆಯ ಚಿತ್ರ ಈಗಾಗಲೇ ಬಹುತೇಕ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಫಾರಿನ್ ಶೂಟಿಂಗ್ ಮಾತ್ರ ಪೆಂಡಿಂಗ್ ಇದೆ ಎಂದು ನಿರ್ದೇಶಕ ಶಂಕರ್ ತಿಳಿಸಿದರು.

Body:ಇನ್ನು ಅರ್ಜುನಗೌಡ ಚಿತ್ರವು ಆಕ್ಷನ್ ಕಮ್ ಲವ್ ಸ್ಟೋರಿ ಹೊಂದಿರುವ ಚಿತ್ರಕಥೆ ಹೊಂದಿದ್ದು ಚಿತ್ರದಲ್ಲಿ ಮೂರು ಶೇಡ್ ನಲ್ಲಿ ಕಾಣುತ್ತಿರುವುದಾಗಿ ನಾಯಕ ಪ್ರಜ್ವಲ್ ತಿಳಿಸಿದರು. ಅಲ್ಲದೆ ಚಿತ್ರದ ಟೀಸರ್ ನಲ್ಲಿ ಕೇವಲ ಒಂದು ಪಾತ್ರವನ್ನು ಮಾತ್ರ ರೆಬೆಲ್ ಮಾಡಿದ್ದು ಮುಂದಿನ ದಿನಗಳಲ್ಲಿ ಇನ್ನುಳಿದ ಪಾತ್ರಗಳು ರಿವಿಲ್ ಆಗಲಿವೆ. ಅಲ್ಲದೆ ಚಿತ್ರಕ್ಕೆ ಧರ್ಮವಿಶ್ ಸಂಗೀತ ಸಂಯೋಜನೆ ಮಾಡಿದ್ದು ತುಂಬಾ ಒಳ್ಳೆ ಟ್ಯೂನ್ ಗಳನ್ನು ಕಂಪೋಸ್ ಮಾಡಿದ್ದಾರೆ. ಅಲ್ಲದೆ ತುಂಬಾ ದಿನಗಳ ನಂತರ ಈ ಚಿತ್ರದಲ್ಲಿ ನಾನು ಒಳ್ಳೆ ಡ್ಯಾನ್ಸ್ ಮಾಡಿದ್ದೇನೆ ಎಂದು ಪ್ರಜ್ವಲ್ ಹೇಳಿದರು. ಅಲ್ಲದೆ ಅರ್ಜುನಗೌಡ ಚಿತ್ರದಲ್ಲಿ ತುಂಬ ರಗಡ್ ಪಾತ್ರದಲ್ಲಿ ಕಾಣಿಸಿದ್ದು ನನ್ನ ಸಾಗರ ಹಾಗೂ ಗುಲಾಮ ಚಿತ್ರಕಿಂತ ಹೆಚ್ಚು ಎಂಟರ್ಟ್ರೈನ್ಮೆಂಟ್ ಅನ್ನು ಈ ಚಿತ್ರದಲ್ಲಿ ನಿರೀಕ್ಷಿಸಬಹುದು ಅಲ್ಲದೆ ಈ ಚಿತ್ರದಲ್ಲಿ ನನ್ನ ಅಮ್ಮನ ಪಾತ್ರದಲ್ಲಿ ರೇಖಾ ಅವರು ಕಾಣಿಸಿದ್ದು ಅವರ ಜೊತೆ ಸ್ಕ್ರೀನ್ ಶೇರ್ ಮಾಡಿರುವುದು ತುಂಬಾ ಖುಷಿಯಾಗಿದೆ ಎಂದು ಪ್ರಜ್ವಲ್ ತನ್ನ ಪಾತ್ರದ ಬಗ್ಗೆ ತಿಳಿಸಿದರು. ಇನ್ನು ಚಿತ್ರದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಕಾಣಿಸಿದ್ದಾರೆ.

Conclusion:ಅಲ್ಲದೆ ಈ ಚಿತ್ರದಲ್ಲಿ ಪ್ರಿಯಂಕ ತಿಮ್ಮೇಶ್ ತುಂಬಾ ಹಾಟ್ ಅಂಡ್ ಬೋಲ್ಡ್ ಅಗಿ ಪ್ರಜ್ವಲ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದೇನೆ ಎಂದು ಪ್ರಿಯಾಂಕಾ ತಿಳಿಸಿದರು. ನಿರ್ದೇಶಕರು ನನಗೆ ಕತೆ ಹೇಳುವಾಗಲೇ ಈ ಪಾತ್ರದ ಬಗ್ಗೆ ವಿವರಿಸಿದರು. ಅದನ್ನು ಓಕೆ ಮಾಡಿ ನಾನು ಈ ಚಿತ್ರದಲ್ಲಿ ಅಕ್ಟ್ ಮಾಡಿದ್ದೇನೆ. ಅಲ್ಲದೆ ತುಂಬಾ ಬೋಲ್ಡ್ ಆಗಿ ಕಾಣಿಸಿರುವ ಸೀನ್ ಗಳನ್ನು ನಾನೀಗಾಗಲೇ ನೋಡಿದ್ದೇನೆ ಅದು ಅಂತಹ ಸಿಂಹಗಳು ಯಾವುದೇ ರೀತಿಯ ಒಳಗಾಗಿ ಕಾಣಿಸುತ್ತಿಲ್ಲ. ತುಂಬಾ ನೀಟಾಗಿ ಪಾತ್ರ ಮೂಡಿಬಂದಿದೆ ಎಂದು ಪ್ರಿಯಾಂಕ ತಿಮ್ಮೇಶ್ ತಿಳಿಸಿದರು. ಇನ್ನು ಈ ಚಿತ್ರದಲ್ಲಿ ಸಾಧುಕೋಕಿಲ ಸ್ಪರ್ಶ ರೇಖಾ ಕಡ್ಡಿಪುಡಿ ಚಂದ್ರು ಅರವಿಂದ್ ಈ ಪಕ್ಷದ ಪ್ರಕಾಶ್ ಯಮುನಾ ಶ್ರೀನಿಧಿ ಭಜರಂಗಿ ಚೇತನ್ ಜೀವ ಸೂರಜ್ ದಿನೇಶ್ ಮಂಗಳೂರು ಹನುಮಂತೇಗೌಡ ಸೇರಿದಂತೆ ದೊಡ್ಡ ತಾರಾ ಬಳಗವೇ ಇದ್ದು ದಸರಾ ಹೊತ್ತಿಗೆ ಅರ್ಜುನ್ ಗೌಡ ಚಿತ್ರವನ್ನು ಚಿತ್ರಮಂದಿರಕ್ಕೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ..

ಸತೀಶ ಎಂಬಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.