ನವರಸ ನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿದೆ. ಈ ಹಾಡೂ ಕೂಡ ಹಾಸ್ಯಮಯವಾಗಿದ್ದು, ಮಕ್ಕಳ ಜೊತೆ ಜಗ್ಗೇಶ್ ಹೆಜ್ಜೆ ಹಾಕಿದ್ದಾರೆ. ಇನ್ನು ಈ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದು, ಗುರುಕಿರಣ್ ಸಂಗೀತ ನೀಡಿದ್ದಾರೆ.
- " class="align-text-top noRightClick twitterSection" data="">
ಈ ಸಿನಿಮಾದಲ್ಲಿ ಜಗ್ಗೇಶ್ ಜೊತೆ ಮೇಘನಾ ಗಾಂವ್ಕರ್ ನಟಿಸಿದ್ದು, ಸಿನಿಮಾ ಕನ್ನಡ ಶಾಲೆ ಹಾಗೂ ಇಂಗ್ಲಿಷ್ ಬರದ ಕನ್ನಡ ಮೇಷ್ಟ್ರು ಮೇಲೆ ನಿರ್ಮಾಣವಾಗಿದೆ. ಇದೀಗ ಬಿಡುಗಡೆಯಾಗಿರುವ ಹಾಡಿನಲ್ಲಿ 'ಪಂಪ ರನ್ನ ಪೊನ್ನ ಜನ್ನರನ್ನ ಅರ್ದು ಕುಡ್ದವ್ರೆ, ಕುವೆಂಪುನು, ರಾಜಣ್ಣಾನು ನಾಲ್ಗೆ ಮ್ಯಾಲವ್ರೆ' ಅನ್ನೋ ಸಾಲು ಮಜಬೂತಾಗಿದೆ.
ಇನ್ನು ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ರು. ಸಿನಿಮಾಕ್ಕೆ ಕವಿರಾಜ್ ನಿರ್ದೇಶನವಿದ್ದು, ಉದಯ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.