ನಟಿ ಕಾಜಲ್ ಅಗರ್ವಾಲ್, ಇತ್ತೀಚೆಗಷ್ಟೇ ತಾವು ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಗೌತಮ್ ಕಿಚ್ಲು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಜೋಡಿ ಮಾಲ್ಡೀವ್ಸ್ಗೆ ಕೂಡಾ ತೆರಳಿತ್ತು. ತಮ್ಮ ಹನಿಮೂನ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಕಾಜಲ್ ಅಗರ್ವಾಲ್ ಈಗ ತಾವು ಒಪ್ಪಿಕೊಂಡ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.
- " class="align-text-top noRightClick twitterSection" data="
">
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಕಾಜಲ್, ತಾವು ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ಕೂಡಾ ಬರೆದುಕೊಂಡಿದ್ದಾರೆ. ಕಾಜಲ್ 5ನೇ ವಯಸ್ಸಿನಿಂದ ಅಸ್ತಮಾ ಸಮಸ್ಯೆ ಎದುರಿಸುತ್ತಿದ್ದಾರಂತೆ. "ನನಗೆ 5ನೇ ವಯಸ್ಸಿಗೆ ಅಸ್ತಮಾ ಸಮಸ್ಯೆ ಆರಂಭವಾಯಿತು. ಈ ಕಾರಣದಿಂದ ಕೆಲವೊಂದು ಆಹಾರ ಪದಾರ್ಥಗಳಿಂದ ನಾನು ದೂರ ಉಳಿದೆ. ಮಕ್ಕಳಿಗೆ ಸಾಮಾನ್ಯವಾಗಿ ಹಾಲಿನ ಉತ್ಪನ್ನಗಳು ಹಾಗೂ ಚಾಕೊಲೇಟ್ ಎಂದರೆ ಬಹಳ ಇಷ್ಟ. ಆದರೆ ಇದನ್ನು ನಾನು ತ್ಯಜಿಸಬೇಕಾಯ್ತು. ಪ್ರತಿ ವರ್ಷ ಚಳಿಗಾಲದಲ್ಲಿ ಹಾಗೂ ಸ್ವಲ್ಪ ಧೂಳು, ಹೊಗೆ ಇದ್ದರೂ ನನಗೆ ಈ ಸಮಸ್ಯೆ ಆರಂಭವಾಗುತ್ತಿತ್ತು. ಆ ಸಮಯದಲ್ಲಿ ನಾನು ಇನ್ಹೇಲರ್ ಬಳಸಲು ಆರಂಭಿಸಿದೆ. ಇದರಿಂದ ಸಮಸ್ಯೆ ಕಡಿಮೆಯಾಯ್ತು. ಭಾರತದಲ್ಲಿ ಮಿಲಿಯನ್ಗಟ್ಟಲೆ ಜನರು ಇನ್ಹೇಲರ್ ಬಳಸುತ್ತಿದ್ದಾರೆ. ಇದನ್ನು ಸಾರ್ವಜನಿಕವಾಗಿ ಬಳಸಲು ಹಿಂಜರಿಯುವ ಅವಶ್ಯಕತೆ ಇಲ್ಲ. ಅಸ್ತಮಾ ಹಾಗೂ ಇನ್ಹೇಲರ್ ಬಗ್ಗೆ ಅರಿವು ಮೂಡಿಸಲು ನಾನು ಬಯಸುತ್ತೇನೆ, ನನ್ನ ಸ್ನೇಹಿತರಿಗೂ ಮನವಿ ಮಾಡುತ್ತೇನೆ" ಎಂದು ಮೂವರು ಸ್ನೇಹಿತರಿಗೆ ಟ್ಯಾಗ್ ಮಾಡುವ ಮೂಲಕ #SayYesTolnhalers ಹ್ಯಾಷ್ಟ್ಯಾಗ್ ನೀಡಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಶೂಟಿಂಗ್ನಿಂದ ಬ್ರೇಕ್ ಪಡೆದು ಪತ್ನಿಯ ಕಾಳಜಿ ಮಾಡುತ್ತಿರುವ ಸೈಫ್ ಅಲಿ ಖಾನ್
ಕರಿಯರ್ ವಿಚಾರಕ್ಕೆ ಬರುವುದಾದರೆ ಕಾಜಲ್ ಸದ್ಯಕ್ಕೆ ಕಮಲ್ ಹಾಸನ್ ಜೊತೆ ಇಂಡಿಯನ್ 2, ಚಿರಂಜೀವಿ ಜೊತೆ ಆಚಾರ್ಯ ಹಾಗೂ ಇಮ್ರಾನ್ ಹಶ್ಮಿ ಜೊತೆ ಮುಂಬೈ ಸಾಗಾ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.