ಟಾಲಿವುಡ್ ಬ್ಯೂಟಿ ಕಾಜಲ್ ಅಗರ್ವಾಲ್ ಈವರೆಗೆ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿದ್ದೇ ಹೆಚ್ಚು. ಆದ್ರೆ ಇತ್ತೀಚೆಗೆ ಆಕೆ ಥ್ರಿಲ್ಲರ್ ಸಿನಿಮಾಗಳತ್ತ ಆಸಕ್ತಿ ಹೊಂದಿದ್ದಾರೆ. ಇತ್ತೀಚೆಗೆ 'ಲೈವ್ ಟೆಲಿಕಾಸ್ಟ್' ಎಂಬ ವೆಬ್ ಸಿರೀಸ್ ಒಂದರಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಅದರ ಬೆನ್ನಲ್ಲೆ ಇನ್ನೊಂದು ಥ್ರಿಲ್ಲರ್ ಸಿನಿಮಾದಲ್ಲಿ ಕಾಜಲ್ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ನಿರ್ದೇಶಕ ಜಯಶಂಕರ್ ಹೇಳಿದ ಕತೆಗೆ ಕಾಜಲ್ ಓಕೆ ಅಂದಿದ್ದಾರೆ. ಜಯಶಂಕರ್ ಅವರ ವಿಟಮಿನ್- ಶಿ ಎಂಬ ವಿಭಿನ್ನ ಸಿನಿಮಾ ಓಟಿಟಿ ವೇದಿಕೆಯಲ್ಲಿ ತೆರೆಕಂಡಿತ್ತು. ಇದೀಗ ಕಾಜಲ್ಗಾಗಿಯೇ ಅವರು ವಿಭಿನ್ನ ಕತೆಯೊಂದಿಗೆ ಥ್ರಿಲ್ಲರ್ ಸಿನಿಮಾ ಸಿದ್ದಪಡಿಸಿದ್ದಾರೆ.
ಆ ಕತೆ ಕಾಜಲ್ಗೆ ಬಹಳ ಇಷ್ಟವಾಯಿತಂತೆ, ಹಾಗಾಗಿ ಒಪ್ಪಿಕೊಂಡಿದ್ದಾರೆ. ಆ ಸಿನಿಮಾವನ್ನು ಹೀರೋಯಿನ್ ಓರಿಯೆಂಟೆಡ್ ಸಿನಿಮಾವಾಗಿ ಹೊರತರಲಾಗುತ್ತದೆ ಎಂಬ ಮಾತು ಇನ್ನೊಂದೆಡೆ ಕೇಳಿ ಬಂದಿದೆ. ಒಬ್ಬರು ಪ್ರಮುಖ ನಿರ್ಮಾಪಕರು ಈ ಸಿನಿಮಾ ನಿರ್ಮಿಸುತ್ತಿದ್ದಾರೆಂದು ತಿಳಿದುಬಂದಿದೆ. ಕಾಜಲ್ ಹುಟ್ಟುಹಬ್ಬದಂದು ಆ ಸಿನಿಮಾವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. ಪ್ರಸ್ತುತ ಕಾಜಲ್ ಮೆಗಸ್ಟಾರ್ ಚಿರಂಜೀವಿ ಜೊತೆ 'ಆಚಾರ್ಯ' ಚಿತ್ರದಲ್ಲಿ ನಟಿಸುತ್ತಿದ್ದಾರೆ.