ತೆಲುಗು ಚಿತ್ರರಂಗದಲ್ಲಿ ಪ್ರಭಾಸ್ ಹಾಗೂ ಕಾಜಲ್ ಅಗರ್ವಾಲ್ ಜೋಡಿ ತೆಲುಗು ಪ್ರೇಕ್ಷಕರಿಗೆ ಬಹಳ ಹಿಡಿಸಿತ್ತು. ಇವರಿಬ್ಬರ ಕಾಂಬಿನೇಷನ್ನಲ್ಲಿ ಬಂದ ಮೊದಲ ಸಿನಿಮಾ 'ಡಾರ್ಲಿಂಗ್'. ನಂತರ 'ಮಿಸ್ಟರ್ ಪರ್ಫೆಕ್ಟ್' ಸಿನಿಮಾದಲ್ಲಿ ಇಬ್ಬರು ಜೊತೆಯಾಗಿ ನಟಿಸಿದರು.
'ಮಿಸ್ಟರ್ ಪರ್ಫೆಕ್ಟ್' ಸಿನಿಮಾ ಬಿಡುಗಡೆಯಾಗಿ ಸುಮಾರು 9 ವರ್ಷಗಳಾಗುತ್ತಾ ಬಂದಿದೆ. ಮತ್ತೆ ಈ ಜೋಡಿಯನ್ನು ಯಾವಾಗ ನೋಡುತ್ತೇವೆ ಎಂದು ಕಾದಿರುವವರಿಗೆ ಸಿಹಿಸುದ್ದಿ. ಇನ್ನು ಕಾಯುವುದು ಬೇಡ ಎಂದು ಈ ಜೋಡಿ ಮತ್ತೆ ಜೊತೆಯಾಗಿ ತೆರೆ ಮೇಲೆ ಮೋಡಿ ಮಾಡಲು ಬರುತ್ತಿದೆ ಎಂದು ಟಾಲಿವುಡ್ ಚಿತ್ರವರ್ಗ ತಿಳಿಸಿದೆ.
'ಜಿಲ್' ಖ್ಯಾತಿಯ ರಾಧಾಕೃಷ್ಣನ್ 'ಜಾನ್' ಹೆಸರಿನ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಇದರಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಪೂಜಾ ಜೊತೆ ಕಾಜಲ್ ಕೂಡಾ ಚಿತ್ರತಂಡ ಸೇರಿಕೊಂಡಿದ್ದಾರೆ. ಆದರೆ ಕಾಜಲ್ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಪುರ್ನಜನ್ಮಕ್ಕೆ ಸಂಬಂಧಿಸಿದಂತೆ ಚಿತ್ರದ ಕಥೆ ಇದಾಗಿದ್ದು, ಚಿತ್ರದಲ್ಲಿ ಕಾಜಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ತಿಳಿಸಲಿದೆ.