ETV Bharat / sitara

ಅಪ್ಪನ 'ರಾಜಮಾರ್ತಾಂಡ' ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ ಜ್ಯೂ. ಚಿರು - jr chiru released father movie trailer

ರಾಮ್​ನಾರಾಯಣ್ ನಿರ್ದೇಶನದಲ್ಲಿ ಚಿರಂಜೀವಿ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ರಾಜಮಾರ್ತಾಂಡ' ಚಿತ್ರದ ಟ್ರೇಲರನ್ನು ಜ್ಯೂ. ಚಿರು ಇಂದು ಬಿಡುಗಡೆ ಮಾಡಿದ್ದಾನೆ. ಟ್ರೇಲರ್ ಬಿಡುಗಡೆಯಾಗಿ 1 ಗಂಟೆ ಅವಧಿಯಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Rajamartanda
'ರಾಜಮಾತಾಂಡ'
author img

By

Published : Feb 19, 2021, 8:33 AM IST

Updated : Feb 19, 2021, 9:06 AM IST

ಚಿರಂಜೀವಿ ಸರ್ಜಾ ಅಭಿನಯದ 'ರಾಜಮಾರ್ತಾಂಡ' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ರಾಮ್ ನಾರಾಯಣ್ ನಿರ್ದೇಶನದ ಈ ಚಿತ್ರದ ಟ್ರೇಲರನ್ನು ಇಂದು ಬೆಳಗ್ಗೆ ಜ್ಯೂನಿಯರ್ ಚಿರು ಬಿಡುಗಡೆ ಮಾಡಿದ್ದಾನೆ. ಟ್ರೇಲರ್ ನೋಡಿ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • " class="align-text-top noRightClick twitterSection" data="">

ಇಂದು ಧ್ರುವ ಸರ್ಜಾ ಅಭಿನಯದ 'ಪೊಗರು' ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ಸಮಯದಲ್ಲಿ ಸಹೋದರ ಚಿರಂಜೀವಿ ಸರ್ಜಾ ಅಭಿನಯದ ರಾಜಮಾತಾಂಡ ಟ್ರೇಲರ್ ಕೂಡಾ ಬಿಡುಗಡೆ ಆಗಿದೆ. ಲಾಕ್​ಡೌನ್ ಮುಗಿದ ನಂತರ 'ರಾಜಮಾರ್ತಾಂಡ' ಸಿನಿಮಾಗೆ ಚಿರು ಡಬ್ಬಿಂಗ್ ಮಾಡಬೇಕಿತ್ತು. ಆದರೆ ಜೂನ್ 14 ರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು. ಈ ಕಾರಣದಿಂದ ಧ್ರುವ ಸರ್ಜಾ ಅವರೇ ಅಣ್ಣನಿಗೆ ಧ್ವನಿ ನೀಡಿದ್ದು, ಸಿನಿಮಾ ನೋಡಲು ಚಿರು ಅಭಿಮಾನಿಗಳು ಕಾಯುತ್ತಿದ್ದಾರೆ. ಇಂದು ಜ್ಯೂ. ಚಿರು, ರಾಜಮಾರ್ತಾಂಡ ಟ್ರೇಲರ್ ಬಿಡುಗಡೆ ಮಾಡಲಿದ್ದಾನೆ ಎಂದು ನಿನ್ನೆ ಮೇಘನಾ ರಾಜ್ ಹಾಗೂ ಚಿತ್ರದ ನಿರ್ದೇಶಕ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಅದರಂತೆ ಇಂದು ಜ್ಯೂನಿಯರ್ ಚಿರು, ಅಪ್ಪನ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದಾನೆ.

Chiranjeevi sarja
'ರಾಜಮಾತಾಂಡ' ಚಿತ್ರೀಕರಣದ ಸಮಯದಲ್ಲಿ ಚಿರಂಜೀವಿ

ಇದನ್ನೂ ಓದಿ: ಕೊನೆಗೂ ನನಸಾದ ಕನಸು...ಕುರಿ ಪ್ರತಾಪ್ ಈಗ ಹೀರೋ

2.17 ನಿಮಿಷ ಅವಧಿಯ ಟ್ರೇಲರ್​​ ಆ್ಯಕ್ಷನ್ ದೃಶ್ಯಗಳಿಂದ ಆರಂಭವಾಗುತ್ತದೆ. ಟ್ರೇಲರ್​​​​​ನಲ್ಲಿ ಲವ್, ಸೆಂಟಿಮೆಂಟ್, ಆ್ಯಕ್ಷನ್ ಎಲ್ಲಾ ಅಂಶಗಳನ್ನು ತೋರಿಸಲಾಗಿದೆ. ಟ್ರೇಲರ್ ಬಿಡುಡೆಯಾದ ಒಂದು ಗಂಟೆ ಅವಧಿಯಲ್ಲೇ 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಶ್ರೀ ಮಾದೇಶ್ವರ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶಿವಕುಮಾರ್ ಈ ಸಿನಿಮಾವನ್ನು ನಿರ್ಮಿಸಿದ್ದು ಕೆ. ರಾಮ್​​ನಾರಾಯಣ್ ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು ಆನಂದ್ ಆಡಿಯೋ ಹಾಡುಗಳ ಹಕ್ಕು ಪಡೆದಿದೆ. ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Last Updated : Feb 19, 2021, 9:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.