ವಾಷಿಂಗ್ಟನ್(ಅಮೆರಿಕಾ): ಕೊರೊನಾ ವೈರಸ್ಗಾಗಿ ಪರಿಹಾರ ನಿಧಿಯನ್ನು ಸಂಗ್ರಹಿಸಲು ನಟಿ ಜೆನ್ನಿಫರ್ ಅನಿಸ್ಟನ್ ತನ್ನ 25 ವರ್ಷದ ಹಳೆಯ ನಗ್ನ ಭಾವಚಿತ್ರವನ್ನು ಹರಾಜು ಹಾಕುವುದಾಗಿ ತಿಳಿಸಿದ್ದಾರೆ. 1995 ರ ನವೆಂಬರ್‌ನಲ್ಲಿ ಮಾರ್ಕ್ ಸೆಲಿಗರ್ ತೆಗೆದಿದ್ದ ಭಾವಚಿತ್ರವಿದು ಎಂದಿದ್ದಾರೆ.
ಈ ಫೊಟೋ ಹರಾಜಿನ ಬಗ್ಗೆ ನಟಿ ಜೆನ್ನಿಫರ್, ಇನ್ಸ್ಟಾಗ್ರಾಮ್ನಲ್ಲಿ ಚಿತ್ರ ಸಂಸ್ಕರಣೆ ಮಾಡುತ್ತಿರುವ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ, ನನ್ನ ಆತ್ಮೀಯ ಗೆಳೆಯ ಮಾರ್ಕ್‌ಸೆಲಿಗರ್, ರಾಡ್‌ವೊಕಸಿ ಮತ್ತು ಕ್ರಿಸ್ಟಿಸಿಂಕ್ ಸೇರಿದಂತೆ ನನ್ನ ಭಾವಚಿತ್ರವನ್ನೂ ಒಟ್ಟುಗೂಡಿಸಿ 25 ಭಾವಚಿತ್ರಗಳನ್ನು ಹರಾಜು ಹಾಕಲಿದ್ದೇವೆ. ಇವೆಲ್ಲವೂ ಕೊರೊನಾ ವೈರಸ್ ನಿಧಿ ಸಂಗ್ರಹಕ್ಕಾಗಿ ಎಂದು ಶೀರ್ಷಿಕೆಯೊಂದನ್ನ ಬರೆದಿದ್ದಾರೆ.
- " class="align-text-top noRightClick twitterSection" data="
">
ಈ ಭಾವಚಿತ್ರದ ಶೇ.100ರಷ್ಟು ಮಾರಾಟದ ಆದಾಯವು ಎನ್‌ಎಎಫ್ ಚಿಕಿತ್ಸಾಲಯ(NAFClinics) ಗೆ ಹೋಗುತ್ತದೆ. ಎನ್‌ಎಎಫ್ ಕ್ಲಿನಿಕ್ಗಳು ಬಡ ರೋಗಿಗಳಿಗೆ ಹಾಗೂ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗದವರಿಗೆ ರಾಷ್ಟ್ರವ್ಯಾಪಿ ಉಚಿತ ಕೊರೊನಾ ವೈರಸ್ ಪರೀಕ್ಷೆ ಮತ್ತು ಆರೈಕೆಯನ್ನು ಮಾಡುತ್ತಿದೆ ಎಂದು ಜೆನ್ನಿಫರ್ ಹೇಳಿದ್ದಾರೆ.
ಫೋಟೋ ಹರಾಜಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನನ್ನ ಬಯೋದಲ್ಲಿನ ಲಿಂಕ್ನ್ನು ಫಾಲೋ ಮಾಡಿ. ಇದರ ಭಾಗವಾಗಲು ನನಗೆ ಅವಕಾಶ ನೀಡಿದ ಮಾರ್ಕ್‌ಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಜೆನ್ನಿಫರ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.