ETV Bharat / sitara

'ಜೇಮ್ಸ್​' ಸಿನಿಮಾ ಹಾಡು ‘ಸಲಾಂ ಸೋಲ್ಜರ್​’ ಬಿಡುಗಡೆಗೊಳಿಸಿದ ಸುದೀಪ್

author img

By

Published : Mar 11, 2022, 3:09 PM IST

'ಜೇಮ್ಸ್'. ಇದು ಪವರ್​ ಸ್ಟಾರ್​​ ಪುನೀತ್​ ರಾಜ್​ಕುಮಾರ್​ ಅಭಿನಯದ ಕೊನೆಯ ಸಿನಿಮಾ. ಈ ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇತ್ತೀಚೆಗಷ್ಟೇ ‘ಟ್ರೇಡ್​ಮಾರ್ಕ್​’ ಲಿರಿಕಲ್​ ವಿಡಿಯೋ ರಿಲೀಸ್ ಆಗಿತ್ತು. ಈಗ ‘ಸಲಾಂ ಸೋಲ್ಜರ್’ ಹಾಡಿನ ಲಿರಿಕಲ್​ ವಿಡಿಯೋ ಸಿನಿಮಾ ಪ್ರೇಮಿಗಳಿಗೆ ಲಭ್ಯವಾಗಿದೆ.

James song Salaam Soldier was released by kiccha sudeep
ಜೇಮ್ಸ್​ ಸಿನಿಮಾ ಹಾಡು ‘ಸಲಾಂ ಸೋಲ್ಜರ್​’ ರಿಲೀಸ್

‘ಜೇಮ್ಸ್’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಸೈನಿಕನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ದೇಶ ಕಾಯುವ ಯೋಧರಿಗಾಗಿ ಒಂದು ಹಾಡು ರಚಿಸಲಾಗಿದ್ದು, ಅದೇ ‘ಸಲಾಂ ಸೋಲ್ಜರ್’. ಈ ಹಾಡಿನ ಲಿರಿಕಲ್​ ವಿಡಿಯೋವನ್ನು ನಟ ಕಿಚ್ಚ ಸುದೀಪ್​ ಶುಕ್ರವಾರ ಬಿಡುಗಡೆಗೊಳಿಸಿದರು.

ನಿರ್ದೇಶಕ ಚೇತನ್ ಕುಮಾರ್, ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರ ಜೊತೆ ಸುದೀಪ್ ಸುಮಾರು ಅರ್ಧ ಗಂಟೆಗಳ‌‌ ಕಾಲ ಮಾತನಾಡಿ, ಹಾಡಿನ‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಚೇತನ್ ಕುಮಾರ್ ನಿರ್ದೇಶನದ ಜೊತೆಗೆ ಸಾಹಿತ್ಯವನ್ನೂ ರಚಿಸಿದ್ದಾರೆ. ಈ ಹಾಡನ್ನು ಗಾಯಕ ಸಂಜಿತ್ ಹೆಗ್ಡೆ ಹಾಗೂ ಚರಣ್ ರಾಜ್ ಹಾಡಿದ್ದಾರೆ. ಪುನೀತ್ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾ ಆನಂದ್ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ.

ಶರತ್ ಕುಮಾರ್, ತೆಲುಗು ಶ್ರೀಕಾಂತ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಯುವ ಸಂಗೀತ ನಿರ್ದೇಶಕ ಚರಣ್​ ರಾಜ್​ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಹೊಸ ಚಿತ್ರದ ಟೈಟಲ್‌ ಬಿಡುಗಡೆ ಮಾಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ರಿಯಲ್ ಸ್ಟಾರ್!

ಕಿಶೋರ್​ ಪತ್ತಿಕೊಂಡ ಅದ್ಧೂರಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಜೇಮ್ಸ್ ಸಿನಿಮಾದ ಟಿಕೆಟ್​ ಬುಕಿಂಗ್​ ಓಪನ್​ ಆಗಿದ್ದು, ಟಿಕೆಟ್​ ಖರೀದಿಸಲು ಅಭಿಮಾನಿಗಳು ದುಂಬಾಲು ಬಿದ್ದಿದ್ದಾರೆ. ಮಾರ್ಚ್ 17ಕ್ಕೆ ಕನ್ನಡ, ತೆಲುಗು, ತಮಿಳು, ಮಳಯಾಲ ಹಾಗೂ ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.