ETV Bharat / sitara

ಅವತಾರ್ 2 ಮತ್ತು 3ನೇ ಭಾಗದ ಸಿನಿಮಾ ಚಿತ್ರೀಕರಣದ ಬಗ್ಗೆ ಮಾಹಿತಿ ಕೊಟ್ಟ ಕ್ಯಾಮರೂನ್​ - ಅವತಾರ್ ಚಿತ್ರೀಕರಣ

ಅವತಾರ್ 2 ಚಿತ್ರದ ಚಿತ್ರೀಕರಣ ಮುಗಿದಿದೆ ಎಂದು ನಿರ್ಮಾಪಕ ಜೇಮ್ಸ್ ಕ್ಯಾಮರೂನ್ ತಿಳಿಸಿದ್ದು, ಅವತಾರ್ 3 ಚಿತ್ರದ ಶೇಕಡಾ 95ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ ಎಂದಿದ್ದಾರೆ.

avatar
avatar
author img

By

Published : Sep 28, 2020, 1:08 PM IST

ಲಾಸ್ ಏಂಜಲೀಸ್: ಬಹು ನಿರೀಕ್ಷಿತ ಅವತಾರ್ 2 ಚಿತ್ರದ ಚಿತ್ರೀಕರಣ ಮುಗಿದಿದೆ ಎಂದು ಹಿರಿಯ ಚಲನಚಿತ್ರ ನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಬಹಿರಂಗಪಡಿಸಿದ್ದಾರೆ.

2020ರ ಆಸ್ಟ್ರಿಯನ್ ವಿಶ್ವ ಶೃಂಗಸಭೆಗೆ ಮುಂಚಿತವಾಗಿ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರೊಂದಿಗಿನ ಜೂಮ್ ಸಂದರ್ಶನದಲ್ಲಿ ಕ್ಯಾಮರೂನ್, 2009ರ ಬ್ಲಾಕ್​ಬಸ್ಟರ್​ ಅವತಾರ್​ನ 2ನೇ ಭಾಗದ ಮಾಹಿತಿ ಹಂಚಿಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಅವತಾರ್ ಚಿತ್ರೀಕರಣಗೊಳ್ಳುತ್ತಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿತ್ತು.

ಜೂನ್‌ನಲ್ಲಿ ನ್ಯೂಜಿಲೆಂಡ್​​ಅನ್ನು ಕೊರೊನಾ ವೈರಸ್ ಮುಕ್ತ ಎಂದು ಘೋಷಿಸಿದ ಬಳಿಕ ಸುರಕ್ಷತಾ ಕ್ರಮಗಳೊಂದಿಗೆ ಚಿತ್ರೀಕರಣವನ್ನು ಮತ್ತೆ ಪ್ರಾರಂಭಿಸಲು ಚಿತ್ರತಂಡಕ್ಕೆ ಅನುಮತಿ ಸಿಕ್ಕಿತ್ತು.

ಕೋವಿಡ್-19ನಿಂದಾಗಿ ನಾವು ಸುಮಾರು ನಾಲ್ಕೂವರೆ ತಿಂಗಳು ಚಿತ್ರೀಕರಣ ಸ್ಥಗಿತಗೊಳಿಸಿದ್ದೆವು. ಅದರ ಪರಿಣಾಮವಾಗಿ ಚಿತ್ರಬಿಡುಗಡೆಯನ್ನು ಕೂಡ ಮುಂದೂಡಿದ್ದೇವೆ ಎಂದು ಕ್ಯಾಮರೂನ್ ತಿಳಿಸಿದ್ದಾರೆ.

ಅವತಾರ್ 2 ಚಿತ್ರದ ಶೇಕಡಾ 100ರಷ್ಟು ಚೀತ್ರೀಕರಣ ಪೂರ್ಣಗೊಂಡಿದ್ದು, ಅವತಾರ್ 3 ಚಿತ್ರದ ಶೇಕಡಾ 95ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಕ್ಯಾಮರೂನ್ ಹೇಳಿದ್ದಾರೆ.

ಅವತಾರ್ 2 ಚಿತ್ರವನ್ನು ಡಿಸೆಂಬರ್ 17, 2021ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಡಿಸೆಂಬರ್ 2022ರಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.