ಚಾಲೆಂಜಿಂಗ್ಸ್ಟಾರ್ ದರ್ಶನ್ ಅಭಿನಯದ, ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಒಂದಿಲ್ಲೊಂದು ಕಾರಣದಿಂದ ಸುದ್ದಿ ಆಗ್ತಾನೆ ಇದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಇದೀಗ ಡಬ್ಬಿಂಗ್ ಕಾರ್ಯದಲ್ಲಿ ಬ್ಯುಸಿಯಾಗಿದೆ.
ರಾಬರ್ಟ್ ಚಿತ್ರದಲ್ಲಿ ತೆಲುಗಿನ ಹಿರಿಯ ನಟ ಜಗಪತಿ ಬಾಬು ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೆ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿಯೇ ಡಬ್ಬಿಂಗ್ ಮಾಡಿದ್ದಾರೆ. ಅದ್ರಲ್ಲೂ ರಾಬರ್ಟ್ ಸಿನಿಮಾದಿಂದ ತಮ್ಮ ಕನ್ನಡ ದಬ್ಬಿಂಗ್ ಅನ್ನು ಶುರು ಮಾಡಿದ್ದು, ಅವರ ಕನ್ನಡ ಹೇಗಿದೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು.
- " class="align-text-top noRightClick twitterSection" data="
">
ಈ ಬಗ್ಗೆ ರಬರ್ಟ್ ನಿರ್ದೇಶಕ ತರುಣ್ ಸುಧೀರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಜಗಪತಿ ಬಾಬು ಸರ್ ತಮ್ಮ ಭಾಗದ ಡಬ್ಬಿಂಗ್ ಅನ್ನು ಕನ್ನಡದಲ್ಲಿಯೇ ಮಾಡಿ ಮುಗಿಸಿದ್ದಾರೆ. ಇಂತಹ ಹಿರಿಯ ನಟರ ಜೊತೆ ನಾನು ಕೆಲಸ ಮಾಡುವುದಕ್ಕೆ ಹೆಮ್ಮೆ ಅನಿಸುತ್ತಿದೆ. ರಾಬರ್ಟ್ ಸಿನಿಮಾದಲ್ಲಿ ಇಂತಹ ನಟರು ಇರುವುದರಿಂದ ನಮ್ಮ ಚಿತ್ರದ ಲೆವೆಲ್ ಹೆಚ್ಚುತ್ತದೆ ಎಂದಿದ್ದಾರೆ.