ಸ್ಯಾಂಡಲ್ವುಡ್ನಲ್ಲಿ ಸಖತ್ ಸದ್ದು ಮಾಡಿತ್ತು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾ. ಕಾಲೇಜು ಜೀವನದ ಕಥಾ ವಸ್ತುವನ್ನು ಇಟ್ಟುಕೊಂಡು ಚಿತ್ರವನ್ನು ನಿರ್ಮಿಸಲಾಗಿತ್ತು. ಈ ಚಿತ್ರದ ಹಾಡುಗಳು ಕೂಡ ತುಂಬಾನೆ ಹಿಟ್ ಆಗಿದ್ವು. ಇದೀಗ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ 2 ಚಿತ್ರ ಮಾಡುವ ಸುಳಿವು ನೀಡಿದ್ದಾರೆ.
-
I had no certain plans of KP2 until now but I certainly got a perfect plot now... ☺️🤟 #KirikParties will come back on screen and it will be such a fight...
— Rakshit Shetty (@rakshitshetty) February 26, 2020 " class="align-text-top noRightClick twitterSection" data="
">I had no certain plans of KP2 until now but I certainly got a perfect plot now... ☺️🤟 #KirikParties will come back on screen and it will be such a fight...
— Rakshit Shetty (@rakshitshetty) February 26, 2020I had no certain plans of KP2 until now but I certainly got a perfect plot now... ☺️🤟 #KirikParties will come back on screen and it will be such a fight...
— Rakshit Shetty (@rakshitshetty) February 26, 2020
ಹೌದು, ನಿನ್ನೆಯಷ್ಟೇ ಕಿರಿಕ್ ಪಾರ್ಟಿ ಚಿತ್ರದ 'ಹೇ ಹೂ ಆರ್ ಯೂ' ಹಾಡಿನ ವಿಚಾರವಾಗಿ ನ್ಯಾಯಾಲಯ ರಕ್ಷಿತ್ ಶೆಟ್ಟಿಗೆ ಜಾಮೀನು ರಹಿತ ವಾರೆಂಟ್ ನೀಡಿದೆ. ಇದರ ಬೆನ್ನಲ್ಲೇ ರಕ್ಷಿತ್ ಶೆಟ್ಟಿ ಟ್ವೀಟ್ ಒಂದನ್ನು ಮಾಡಿದ್ದು ಕೆಪಿ2 ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
ಕಿರಿಕ್ ಪಾರ್ಟಿ 2 ಬಗ್ಗೆ ಟ್ವೀಟ್ ಮಾಡಿರುವ ರಕ್ಷಿತ್, ಈವರೆಗೂ ಕಿರಿಕ್ ಪಾರ್ಟಿ 2 ಸಿನಿಮಾ ಮಾಡುವ ಯಾವುದೇ ಪ್ಲಾನ್ ಇರಲಿಲ್ಲ. ಆದ್ರೆ ಇದೀಗ ಒಂದೊಳ್ಳೆ ಕಥಾವಸ್ತು ಸಿಕ್ಕಿದೆ. ಕಿರಿಕ್ ಪಾರ್ಟಿ ಸಿನಿಮಾ ಮತ್ತೆ ತೆರೆಗೆ ಬರಲಿದೆ ಎಂದು ರಕ್ಷಿತ್ ಬರೆದುಕೊಂಡಿದ್ದಾರೆ.