ETV Bharat / sitara

ವಿಚ್ಛೇದನ ಬಳಿಕ ಪ್ರೀತಿಯ ಅಪ್ಪುಗೆ ನೀಡಿದ ನಟಿ ಸಮಂತಾ.. - ನಟಿ ಸಮಂತಾ ರುತ್ ಪ್ರಭು ಫೋಟೋ

ನಟಿ ಸಮಂತಾ ರುತ್ ಪ್ರಭು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋವೊಂದನ್ನ ಶೇರ್​ ಮಾಡಿದ್ದು, ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ,ಈ ಫೋಟೋಕ್ಕೆ 11 ಲಕ್ಷಕ್ಕೂ ಹೆಚ್ಚು ಲೈಕ್ಸ್​ ದೊರೆತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ..

ಸಮಂತಾ
ಸಮಂತಾ
author img

By

Published : Mar 21, 2022, 2:09 PM IST

ಟಾಲಿವುಡ್ ಬ್ಯೂಟಿ ಸಮಂತಾ ರುತ್ ಪ್ರಭು ವಿಚ್ಛೇದನ ಬಳಿಕ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಆಗಾಗ ತಮ್ಮ ಫೋಟೋ, ವಿಡಿಯೋಗಳನ್ನ ಅಪ್ಲೋಡ್​ ಮಾಡುತ್ತಿರುತ್ತಾರೆ.

ಇದೀಗ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋವೊಂದನ್ನ ಶೇರ್​ ಮಾಡಿದ್ದು, ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, 11 ಲಕ್ಷಕ್ಕೂ ಹೆಚ್ಚು ಲೈಕ್ಸ್​ ದೊರೆತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಈ ಫೋಟೋದಲ್ಲಿ ಸಮಂತಾ ಮರವನ್ನು ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದು. ಸರಳವಾದ ಸೊಗಸಾದ ಬಿಳಿ ಉಡುಪು ಹಾಗೂ ಶೂ ಧರಿಸಿ, ವಿತ್​ಔಟ್​ ಮೇಕಪ್​ನಲ್ಲಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ "ಉಚಿತ ಅಪ್ಪುಗೆಗಳು" ಎಂದು ಶೀರ್ಷಿಕೆ ನೀಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ನಟಿಯ ಈ ಪೋಸ್ಟ್​ಗೆ ರಾಶಿ ಖನ್ನಾ ಹಸಿರು ಹೃದಯದ ಎಮೋಜಿ ಕೊಟ್ಟು "Awww" ಎಂದು ಕಾಮೆಂಟ್ ಮಾಡಿದ್ದಾರೆ.

ಈ ಹಿಂದೆ, ಮಾರ್ಚ್ 10ರಂದು ನಡೆದ 'ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌'ಗೆ ನಟಿ ಸಮಂತಾ ಹಸಿರು ಬಣ್ಣದ ಡೀಪ್ ನೆಕ್ ಡಿಸೈನರ್ ಗೌನ್ ಧರಿಸಿ ಭಾಗಿಯಾಗಿದ್ದರು.

ಈವೆಂಟ್‌ನ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಆ ಫೋಟೋಗಳನ್ನು ನೋಡಿದ ಅಭಿಮಾನಿಗಳು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿರುವ ಸಮಂತಾ, 'ಸಾಮಾನ್ಯವಾಗಿ ಮಹಿಳೆಯರು ಧರಿಸುವ ಬಟ್ಟೆ, ಅವರ ಜನಾಂಗ, ಶಿಕ್ಷಣ, ಸಾಮಾಜಿಕ ಸ್ಥಾನಮಾನ, ನೋಟ, ಚರ್ಮದ ಟೋನ್ ಮತ್ತು ಪಟ್ಟಿಯನ್ನು ಆಧರಿಸಿ ಅವರನ್ನು ಅಳೆಯುತ್ತೇವೆ.

ಒಬ್ಬ ವ್ಯಕ್ತಿಯನ್ನು ಅವರು ಧರಿಸುವ ಬಟ್ಟೆಯ ಆಧಾರದ ಮೇಲೆ ಟೀಕೆ ಮಾಡುವುದು ಸುಲಭದ ಕೆಲಸ. ಹೀಗೆ ಮಾಡುವುದನ್ನು ಮೊದಲು ನಿಲ್ಲಿಸಿ' ಎಂದು ಖಾರವಾಗಿ ಹೇಳಿದ್ದರು.

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ 150ಕೋಟಿ ದೋಚಿದ ದಿ ಕಾಶ್ಮೀರಿ ಫೈಲ್ಸ್​ ಸಿನಿಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.