ಕಳೆದ ತಿಂಗಳು 19ಕ್ಕೆ ಬಿಡುಗಡೆ ಆಗಬೇಕಿದ್ದ ಐ ಲವ್ ಯು ಸಿನಿಮಾ ಧ್ವನಿ ಸಾಂದ್ರಿಕೆ ನಾಳೆ ಭಾನುವಾರ ಭರ್ಜರಿ ಮನರಂಜನೆ ಕಾರ್ಯಕ್ರಮದಲ್ಲಿ ದಾವಣಗೆರೆಯಲ್ಲಿ ಅನಾವರಣಗೊಳ್ಳುತ್ತಿದೆ.
ಶ್ರೀ ಶಿವಕುಮಾರಸ್ವಾಮಿಗಳ ಅನಾರೋಗ್ಯದ ಸಮಯವಾದ್ದರಿಂದ ಅಂದು ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು. ಆದರೆ ಮೈಸೂರಿನಲ್ಲಿ ಅಂದೆ ‘ಸೀತಾರಾಮ ಕಲ್ಯಾಣ’ ಕಾರ್ಯಕ್ರಮ ಬಿಡುಗಡೆ ಸಮಯ ಹತ್ತಿರ ಅದದ್ದರಿಂದ ನೆರವೇರಿತು. ಆ ಎರಡು ಸಿನಿಮಾಗಳಿಗೆ ನಾಯಕಿ ರಚಿತ ರಾಮ್. ಅಲ್ಲಿ ಹೋಗಿದ್ದಾರೆ ಇಲ್ಲಿ ಬರಲಿಕ್ಕೆ ಆಗುತ್ತಾ ಇರಲಿಲ್ಲ. ಈಗ ಫೆಬ್ರವರಿ 3 ರಂದು ಐ ಲವ್ ಯು ಸಿನಿಮಾ ಹಾಡುಗಳ ಬಿಡುಗಡೆ ಆಗಿರುವುದರಿಂದ ರಚಿತ ರಾಮ್ ಆಗಮನ ಸಹ ಸುಲಭ ಆಗಿದೆ.
ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈಗಾಗಲೇ ಟ್ರೈಲರ್ ಬಹಳ ಸದ್ದು ಮಾಡುತ್ತಿದೆ. ತೆಲುಗು ಚಿತ್ರ ರಂಗದ ಕೆಲವು ಪ್ರಮುಖ ವ್ಯಕ್ತಿಗಳು ಈ ಸಮಾರಂಭಕ್ಕೆ ಹಾಜರುಗುವ ಸಾಧ್ಯತೆ ಇದೆ. ಹಾಗೆ ಉಪೇಂದ್ರ ಅವರು ‘ಯು ಪಿ ಪಿ’ ಪಕ್ಷದ ಚಿನ್ಹೆ ಆಟೋ ರಿಕ್ಷದಲ್ಲಿ ಆಗಮಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಉಪೇಂದ್ರ, ರಚಿತ ರಾಮ್ ಕಾಂಬಿನೇಷನ್ ಸಿನಿಮಾ ಆರ್ ಚಂದ್ರು ನಿರ್ದೇಶನದಲ್ಲಿ ‘ಐ ಲವ್ ಯು’ ಹಾಡುಗಳ ಬಿಡುಗಡೆ ಕಾಟನ್ ಸಿಟಿಯ ಹೈ ಸ್ಕೂಲ್ ಗ್ರೌಂಡ್ ಅಲ್ಲಿ ದೊಡ್ಡ ವೇದಿಕೆ ಸಿದ್ದವಾಗಿದೆ. ಲಕ್ಷಕ್ಕೂ ಹೆಚ್ಚು ಜನ ಈ ಸಮಾರಂಭದಲ್ಲಿ ಆಗಮಿಸುವ ಸಾಧ್ಯತೆ ಇದೆ.
ನಟ ಹಾಗೂ ರಾಜಕೀಯ ಪಕ್ಷದ ಉಪೇಂದ್ರ ಅವರಿಗೆ ಇದು ಒಂದು ದೊಡ್ಡ ವೇದಿಕೆ. ಇಂತಹ ವೇದಿಕೆ ಅವರು ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ.
ನಿರ್ದೇಶಕ ಆರ್ ಚಂದ್ರು ಅವರೇ ನಿರ್ಮಾಪಕರು ಈ ಐ ಲವ್ ಯು. ನನ್ನೇ...ಪ್ರೀತ್ಸೆ ಚಿತ್ರಕ್ಕೆ. ಮುನೀಂದ್ರ ಕನಪುರ ಕಾರ್ಯಕಾರಿ ನಿರ್ಮಾಪಕರು, ಡಾ ಕಿರಣ್ ತೊತಂಬೈಲು ಸಂಗೀತ, ಸುಜ್ಞಾನ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಈ ಸಿನಿಮಾಕ್ಕೆ ಮಾಡಿದ್ದಾರೆ. ಲಹರಿ ಸಂಸ್ಥೆ ಧ್ವನಿ ಸಾಂದ್ರಿಕೆಯನ್ನು ಮಾರುಕಟ್ಟೆಗೆ ತರುತ್ತಿದೆ.
![undefined](https://s3.amazonaws.com/saranyu-test/etv-bharath-assests/images/ad.png)