ಹೇಗಾದ್ರೂ ಮಾಡಿ ಕೊರೊನಾ 2ನೇ ಅಲೆಯನ್ನು ನಿಯಂತ್ರಣಕ್ಕೆ ತರಲೇಬೇಕೆಂಬ ಹಠದೊಂದಿಗೆ ಸರ್ಕಾರ ಕಠಿಣ ಲಾಕ್ಡೌನ್ ಮೊರೆ ಹೋಗಿದೆ. ಪರಿಣಾಮ ಜನ ಕೆಲಸವಿಲ್ಲದೇ ತಮ್ಮ ನಿತ್ಯದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವಲ್ಲಿಯೂ ಅಶಕ್ತರಾಗಿದ್ದಾರೆ. ಇಂತಹ ಸಂದರ್ಭವನ್ನು ಕಂಡು ಮರುಗಿರುವ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ತಮ್ಮ ಕೈಲಾದ ಸಹಾಯವನ್ನ ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಇದೀಗ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಜೊತೆಯಾಗಿ ಭುವನಂ ತಂಡದ ಅಡಿ ಆ ರೀತಿ ಕಷ್ಟದಲ್ಲಿರುವ ಅಶಕ್ತ ಜನರಿಗೆ ಫುಡ್ ಕಿಟ್‌ಗಳನ್ನು ಹಂಚುತ್ತಿದೆ.
ಇಲ್ಲಿನ ಸುಮಾರು 150 ಕೂಲಿ ಕಾರ್ಮಿಕ ಕುಟುಂಬಗಳಿಗೆ ಫುಡ್ ಕಿಟ್‌ಗಳನ್ನು ಹಂಚುವ ಮೂಲಕ ಸಹಾಯ ಹಸ್ತ ಚಾಚಿದ್ದು, ಈ ಫುಡ್ ಕಿಟ್ ಅಕ್ಕಿ, ಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಮಸಾಲಾ ಪದಾರ್ಥಗಳು, ತರಕಾರಿಗಳನ್ನು ಒಳಗೊಂಡಿದೆ. ಭುವನಂ ತಂಡದ ವತಿಯಿಂದ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮಾಡುತ್ತಿರುವ ಈ ಸೇವೆಗೆ ಸಿನಿಮಾ ಇಂಡಸ್ಟ್ರಿ ಸೇರಿದಂತೆ, ಅಭಿಮಾನಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದಿ: ಕೊರೊನಾ ಕಷ್ಟ ಕಾಲದಲ್ಲಿ ಕೈ ಜೋಡಿಸಿ, ಬಡಜೀವಗಳನ್ನು ಉಳಿಸಲು ಸಹಕರಿಸಿ: ನಟ ಭುವನ್ ಮನವಿ