ETV Bharat / sitara

ವೆಬ್​ ಸೀರೀಸ್​​​ನಲ್ಲಿ ನಟಿಸಲು ಹರಿಪ್ರಿಯಾಗೆ ಆಹ್ವಾನ...ಕಳ್‍ಭಟ್ಟಿ ಕುಸುಮ ಏನಂತಾರೆ...? - web series trend in Kannada

ಇತ್ತೀಚಿನ ದಿನಗಳಲ್ಲಿ ವೆಬ್ ಸೀರೀಸ್​​​ಗಳು ಕೂಡಾ ಸಿನಿಮಾಗಳಷ್ಟೇ ಪ್ರಾಮುಖ್ಯತೆ ಪಡೆಯುತ್ತಿವೆ. ಖ್ಯಾತ ನಟ-ನಟಿಯರು ಕೂಡಾ ವೆಬ್ ಸೀರೀಸ್​​​​​​​​​ನಲ್ಲಿ ನಟಿಸುತ್ತಿದ್ದು ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ತಯಾರಾಗಲಿರುವ ವೆಬ್ ಸೀರೀಸ್​​​ನಲ್ಲಿ ನಟಿಸಲು ಹರಿಪ್ರಿಯ ಅವರನ್ನು ಆಹ್ವಾನಿಸಲಾಗಿದೆ ಎನ್ನಲಾಗುತ್ತಿದೆ.

Haripriya in web series
ಹರಿಪ್ರಿಯ
author img

By

Published : Aug 11, 2020, 10:30 AM IST

Updated : Aug 11, 2020, 10:40 AM IST

ಕೆಲವು ದಿನಗಳಿಂದ ತಟಸ್ಥವಾಗಿದ್ದ ಚಿತ್ರರಂಗದ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿವೆ. ಈ ನಡುವೆ ಕನ್ನಡ ಖ್ಯಾತ ನಟಿಯರು ಕೂಡಾ ವೆಬ್ ಸೀರೀಸ್​​​​​ನತ್ತ ಮುಖ ಮಾಡುತ್ತಿರುವುದು ವಿಶೇಷವಾಗಿದೆ. ಇದೊಂದು ಟ್ರೆಂಡ್ ಕೂಡಾ ಆಗುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕೆಲವೇ ಕೆಲವು ನಟಿಯರಲ್ಲಿ ಹರಿಪ್ರಿಯ ಕೂಡಾ ಒಬ್ಬರು. ಇದೀಗ ಹರಿಪ್ರಿಯ ಅವರಿಗೆ ಕೂಡಾ ವೆಬ್ ಸೀರೀಸ್​​​​​ನಲ್ಲಿ ನಟಿಸಲು ನಿರ್ದೇಶಕರು ಆಹ್ವಾನಿಸಿದ್ದು ಹರಿಪ್ರಿಯ ಕೂಡಾ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಸುಮಾರು 25 ಸಿನಿಮಾಗಳಲ್ಲಿ ನಟಿಸಿರುವ ಹರಿಪ್ರಿಯ ಸ್ಯಾಂಡಲ್​​ವುಡ್​​​ನಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಉಪೇಂದ್ರ ಹಾಗೂ ದಿಗಂತ್ ಜೊತೆ ಅವರು ಎರಡು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

Haripriya in web series
ಹರಿಪ್ರಿಯ

ಇದೀಗ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ತಯಾರಾಗಲಿರುವ ವೆಬ್ ಸೀರೀಸ್​​​ನಲ್ಲಿ ಹರಿಪ್ರಿಯ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈ ವೆಬ್ ಸೀರೀಸ್ ಆರಂಭಿಕ ಹಂತದಲ್ಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಇರುವ ವೆಬ್ ಸೀರೀಸ್ ಹಲವಾರು ಭಾಷೆಗಳಲ್ಲಿ ಈಗಾಗಲೇ ಸಂಚಲನ ಮಾಡಿರುವುದು ಹರಿಪ್ರಿಯ ಅವರಿಗೆ ತಿಳಿದಿದೆ. ಆದ್ದರಿಂದ ತಮ್ಮ ಇಮೇಜ್​​​ಗೆ ತಕ್ಕಂತ ಪಾತ್ರ ಹಾಗೂ ಕಥೆಗಾಗಿ ಅವರು ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಹರಿಪ್ರಿಯ ಕೂಡಾ ಈಗ ವೆಬ್​ ಸೀರೀಸ್​​ನಲ್ಲಿ ನಟಿಸಲು ಒಪ್ಪಿರುವುದು ವಿಶೇಷ ಎಂದೇ ಹೇಳಬಹುದು. ಕೆಲವೇ ದಿನಗಳಲ್ಲಿ ಈ ವೆಬ್ ಸೀರೀಸ್ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಲಿದೆ.

Last Updated : Aug 11, 2020, 10:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.