ಕೆಲವು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವಿನ 'ಗೀತಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಸಿನಿಮಾಗಳ ಲಿಪ್ ಲಾಕ್ ದೃಶ್ಯದ ವಿಡಿಯೋ ವೈರಲ್ ಆಗಿತ್ತು. ಇದೀಗ ನೀರ್ದೋಸೆ ಬ್ಯೂಟಿ ಹರಿಪ್ರಿಯಾ ಚುಂಬನದ ದೃಶ್ಯದ ಫೋಟೋಗಳು ವೈರಲ್ ಜೊತೆಗೆ ಟ್ರೋಲ್ ಆಗುತ್ತಿದೆ.
- " class="align-text-top noRightClick twitterSection" data="">
ಹರಿಪ್ರಿಯಾ ಮೊದಲ ಬಾರಿಗೆ ಸೃಜನ್ ಲೋಕೇಶ್ ಜೊತೆ ನಟಿಸಿರುವ ಸಿನಿಮಾ 'ಎಲ್ಲಿದ್ದೆ ಇಲ್ಲಿತನಕ'. ಕೆಲವು ದಿನಗಳ ಹಿಂದೆ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾಗಿತ್ತು. ಈ ಹಾಡಿನಲ್ಲಿ ಹರಿಪ್ರಿಯಾ ಬೋಲ್ಡ್ ಆಗಿ ನಟಿಸಿದ್ದಾರೆ. ಈ ಹಾಡಿನಲ್ಲಿ ಬರುವ ಬೆಡ್ರೂಮ್ ದೃಶ್ಯದಲ್ಲಿ ಹರಿಪ್ರಿಯಾ ಸೃಜನ್ಗೆ ಕಿಸ್ ಮಾಡಿದ್ದಾರೆ. ಈ ದೃಶ್ಯದ ಮೀಮ್ಗಳು ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಬಹಳ ವರ್ಷಗಳ ನಂತರ ಸೃಜನ್ ಲೋಕೇಶ್ ಬ್ರೇಕ್ಗಾಗಿ ಕಾಯುತ್ತಿದ್ದಾರೆ. ಲೋಕೇಶ್ ಪ್ರೊಡಕ್ಷನ್ ಬ್ಯಾನರ್ ಅಡಿ ಸೃಜನ್ ಲೋಕೇಶ್ ಅವರೇ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ತೇಜಸ್ವಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು ಅಕ್ಟೋಬರ್ 11 ಸಿನಿಮಾ ತೆರೆ ಕಾಣಲಿದೆ.
- " class="align-text-top noRightClick twitterSection" data="">