ETV Bharat / sitara

ಸ್ಯಾಂಡಲ್​ವುಡ್​ನಲ್ಲಿ ಗಣೇಶ ಹಬ್ಬದ ಸಂಭ್ರಮ: ಸುಮಲತಾ, ಯಶ್​, ಅದಿತಿ ಪ್ರಭುದೇವ, ಉಪೇಂದ್ರ ದಂಪತಿಯಿಂದ ಪೂಜಾ ಕಾರ್ಯ - ganesh latest news

ನಾಡಿನಲ್ಲಿ ಗಣೇಶ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಚಿತ್ರರಂಗದ ಹಲವಾರು ಕಲಾವಿದರು ತಮ್ಮ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಣೆ ಮಾಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಕಳೆ ಕಟ್ಟಿದ ಗಣೇಶ ಹಬ್ಬದ ಸಂಭ್ರಮ!
ಸ್ಯಾಂಡಲ್​ವುಡ್​ನಲ್ಲಿ ಕಳೆಗಟ್ಟಿದ ಗಣೇಶ ಹಬ್ಬದ ಸಂಭ್ರಮ!
author img

By

Published : Sep 10, 2021, 11:19 PM IST

Updated : Sep 10, 2021, 11:39 PM IST

ದೇಶಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಅಂತೆಯೇ ಸ್ಯಾಂಡಲ್​ವುಡ್ ಹಬ್ಬ ಕಳೆಗಟ್ಟಿದೆ. ಕನ್ನಡದ ಕೆಲ ಸ್ಟಾರ್‌ಗಳ ಮನೆಯಲ್ಲಿ ಗಣೇಶನ್ನು ಕೂರಿಸಿ, ವಿಶೇಷ ಪೂಜೆ ಮಾಡುವ ಮೂಲಕ ಗಣಪನ ಆರಾಧನೆ ಮಾಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಕಳೆ ಕಟ್ಟಿದ ಗಣೇಶ ಹಬ್ಬದ ಸಂಭ್ರಮ!
ಸ್ಯಾಂಡಲ್​ವುಡ್​ನಲ್ಲಿ ಕಳೆಗಟ್ಟಿದ ಗಣೇಶ ಹಬ್ಬದ ಸಂಭ್ರಮ!

ಪ್ರತಿವರ್ಷ ಗಣೇಶ ಹಬ್ಬವನ್ನ ಅದ್ಧೂರಿಯಾಗಿ ಮಾಡುವ ಸ್ಟಾರ್ ಕುಟುಂಬ ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ. ಗೌರಿ ಗಣೇಶ ಹಬ್ಬ, ಬಂತು ಅಂದರೆ ಉಪೇಂದ್ರ ಮನೆಯಲ್ಲಿ ನಾಲ್ಕು ದಿನ ಮುಂಚಿತವಾಗಿ ಗಣೇಶ ಹಬ್ಬದ ಸಡಗರ ಇರುತ್ತೆ. ಪ್ರಿಯಾಂಕಾ ಉಪೇಂದ್ರ ಕತ್ರಿಗುಪ್ಪೆಯಲ್ಲಿರೋ ಮನೆಯಲ್ಲಿ ಪ್ರತಿ ವರ್ಷ ಗಣೇಶನ್ನ ಕೂರಿಸಿ ವಿಶೇಷ ಪೂಜೆ ಮಾಡುತ್ತಾರೆ. ಇನ್ನು ಉಪೇಂದ್ರರಿಗೆ ಇಷ್ಟವಾದ ದೇವರು ಗಣೇಶ ಆಗಿರುವುದರಿಂದ ಗಣೇಶ ಆರಾಧನೆಯನ್ನು ಭಕ್ತಿ ಶ್ರದ್ಧೆ ಯಿಂದ ನೆರವೇರಿಸುತ್ತಾರೆ.

ಯಶ್​ ಮಕ್ಕಳ ಜೊತೆ ಹಬ್ಬ ಆಚರಣೆ
ಯಶ್​ ಮಕ್ಕಳ ಜೊತೆ ಹಬ್ಬ ಆಚರಣೆ

ಸುಖ ಶಾಂತಿ ನೆಮ್ಮದಿ ನೀಡೆಂದು ಪ್ರಾರ್ಥಿಸಿದ ಸುಮಲತಾ :

ನಟಿ ಹಾಗು ಸಂಸದೆ ಆಗಿರುವ ಸುಮಲತಾ ಅಂಬರೀಶ್ ಮನೆಯಲ್ಲಿಯೂ ಹಬ್ಬ ಜೋರಾಗಿದೆ. ಗೋಲ್ಡ್ ಮತ್ತು ಪಿಂಕ್ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ನಟಿ ಸುಮಲತಾ ಅಂಬರೀಶ್, ಗಣೇಶನ‌ನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದಾರೆ. ಸುಮಲತಾಗೆ ಪುತ್ರ ಅಭಿಷೇಕ್ ಅಂಬರೀಶ್ ಪೂಜೆಗೆ ಸಾಥ್ ಕೊಟ್ಟಿದ್ದಾರೆ. ಮಂಗಳಮೂರ್ತಿ, ವಿಘ್ನವಿನಾಶಕನಾದ ಗಣೇಶನು ನಿಮ್ಮೆಲ್ಲರಿಗೂ ಆರೋಗ್ಯ, ಸುಖ ಶಾಂತಿ ನೆಮ್ಮದಿಯನ್ನು ದಯಪಾಲಿಸಲಿ ಎಂದು ಸುಮಲತಾ ಪ್ರಾರ್ಥಿಸಿದ್ದಾರೆ.

ಉಪೇಂದ್ರ ಮನೆಯಲ್ಲಿ ಸಂಭ್ರಮ
ಉಪೇಂದ್ರ ಮನೆಯಲ್ಲಿ ಸಂಭ್ರಮ

ಅಪ್ಪನ ಪೂಜೆಗೆ ಸಾಥ್​ ನೀಡಿದ ಯಥರ್ವ್​:

ರಾಕಿಂಗ್​​ಸ್ಟಾರ್ ಯಶ್ ಈ ವರ್ಷ ಹೊಸ‌ ಮನೆಯಲ್ಲಿ ಮಕ್ಕಳ ಜೊತೆ ಗಣೇಶನನ್ನ ಆರಾಧಿಸಿದ್ದಾರೆ. ಯಶ್ ಗಣೇಶನಿಗೆ ಪೂಜೆ ಮಾಡ್ತಾ ಇದ್ರೆ ಮಗ ಯಥರ್ವ್ ಗಂಟೆ ಬಾರಿಸುವ ಮೂಲಕ ಅಪ್ಪನಿಗೆ ಸಹಾಯ ಮಾಡಿದ್ದಾನೆ. ನಂತರ ಯಶ್ ತಮ್ಮ ಮುದ್ದಿನ ಮಕ್ಕಳ ಜೊತೆ ಗಣೇಶನ‌ ಮುಂದೆ ಫೋಟೋಗೆ ಫೋಸ್ ಕೊಟ್ಟಿದ್ದಾರೆ.

ಅಪ್ಪನ ಪೂಜೆಗೆ ಸಾಥ್​ ನೀಡಿದ ಯಥರ್ವ್​:

ನಟ ಹಾಗು ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅದ್ಧೂರಿಯಾಗಿ ಗಣೇಶ ಹಬ್ಬ ಆಚರಣೆ ಮಾಡಿದ್ದಾರೆ. ಪತ್ನಿ ರೇವತಿ ಜೊತೆ ನಿಖಿಲ್ ಕುಮಾರಸ್ವಾಮಿ ಗಣೇಶ ಹಬ್ಬವನ್ನ ಆಚರಿಸಿದ್ದಾರೆ. ನಿಖಿಲ್ ಪತ್ನಿ ರೇವತಿ ರೇಷ್ಮೆ ಸೀರಿಯಲ್ಲಿ ಕಂಗೊಳಿಸುತ್ತಿದ್ದಾರೆ. ಇನ್ನು ಗಜಾನನಮುಂದೆ ಗರ್ಭಿಣಿ ರೇವತಿ ಅವರು ನಿಖಿಲ್ ಕೈ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ.

ಇನ್ನು ರಾಗಿಣಿ ದ್ವಿವೇದಿ ಗಣೇಶನಿಗೆ ವಿಶೇಷ ಪೂಜೆ ಮಾಡಿದ್ದಾರೆ.ರಾಬರ್ಟ್ ಸಿನಿಮಾದ ನಾಯಕಿ ಆಶಾ ಭಟ್ ಕೂಡ ಮಣ್ಣಿನ ಗಣೇಶನನ್ನ ಕೈಯಲ್ಲಿ ಹಿಡಿದು, ವಿಘ್ನೇಶ್ವರ ಜಪ‌‌‌‌ ಮಾಡಿದ್ದಾರೆ.ಇನ್ನು ಅದಿತಿ ಪ್ರಭುದೇವ ಕೂಡ ಗಣೇಶನನನ್ನು ಆರಾಧಿಸಿದ್ದಾರೆ.

Last Updated : Sep 10, 2021, 11:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.