ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಬ್ಯಾನರ್ನಲ್ಲಿ ಈ ವರ್ಷ ತಯಾರಾದ ಸಿನಿಮಾ 'ಫ್ರೆಂಚ್ ಬಿರಿಯಾನಿ' ಹಾಸ್ಯಪ್ರಿಯರ ಮೆಚ್ಚುಗೆ ಪಡೆದಿತ್ತು. ಕೊರೊನಾ ನಡುವೆಯೂ ವಿಭಿನ್ನ ಶೀರ್ಷಿಕೆಯಿಂದಲೇ ಗಮನ ಸೆಳೆದ 'ಫ್ರೆಂಚ್ ಬಿರಿಯಾನಿ' ಲಾಕ್ ಡೌನ್ ಇದ್ದ ಕಾರಣ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಿತ್ತು.
- " class="align-text-top noRightClick twitterSection" data="
">
ಚಿತ್ರದಲ್ಲಿ ಕನ್ನಡ-ಹಿಂದಿ ಮಿಕ್ಸ್ ಮಾತನಾಡುವ ಮುಸ್ಲಿಂ ಯುವಕನ ಪಾತ್ರದಲ್ಲಿ ದಾನಿಶ್ ಸೇಠ್ ನಟಿಸಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ಆಗಿ ರಂಗಾಯಣ ರಘು, ವಿದೇಶಿ ಪ್ರವಾಸಿಗನ ಪಾತ್ರದಲ್ಲಿ ಸಾಲ್ ಯೂಸುಫ್ ಕಾಣಿಸಿಕೊಂಡಿದ್ದರು. ಇವರೊಂದಿಗೆ ರಂಗಭೂಮಿ ಕಲಾವಿದ ನಾಗಭೂಷಣ್, ದಿಶಾ ಮದನ್, ಡಾನ್ ಪಾತ್ರದಲ್ಲಿ ಸಂಪತ್ ಕುಮಾರ್ ಪ್ರೇಕ್ಷಕರಿಗೆ ಕಿಕ್ ನೀಡಿದ್ದರು.
ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳ ಟ್ರೇಲರನ್ನು ಕೊಳ್ಳೇಗಾಲದ ಪುನೀತ್ ಅಭಿಮಾನಿಗಳು ಸ್ಪೂಫ್ ಮಾಡಿ ಬಿಡುಗಡೆ ಮಾಡಿದ್ದರು. ಈ ವಿಡಿಯೋ ನೋಡಿ ಸ್ವತಃ ಪುನೀತ್ ರಾಜ್ಕುಮಾರ್ ಬೆರಗಾಗಿದ್ದರು. ಅಲ್ಲದೆ, ಆ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಅಭಿಮಾನಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.